ಸೊರಬ | ರಂಗನಾಥಸ್ವಾಮಿ‌ ನೂತನ‌ ರಥ ಲೋಕಾರ್ಪಣೆ ಮಾಡಿದ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ

ಸೊರಬ,ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡ‌ರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಜೊತೆಗೆ ಇಲ್ಲಿಯವರೆಗೆ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ 400 ಕೋಟಿ ಅನುದಾನ ಸರ್ಕಾರದಿಂದ ತಂದು ಅಭಿವೃದ್ಧಿ ಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಪಟ್ಟಣದ ಆರಾಧ್ಯ ದೈವ ರಂಗನಾಥ ಸ್ವಾಮಿಯ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಸೊರಬ ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗೆ ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.ರಥವನ್ನು ಸುರಕ್ಷಿತವಾಗಿಡಲು ತೇರು ಮನೆ ನಿರ್ಮಾಣಕ್ಕೆ ಈಗಾಗಲೇ 10 ಲಕ್ಷ ಮಂಜೂ ರಾಗಿದ್ದು, 30 ಲಕ್ಷ ರೂಪಾಯಿ ಹೆಚ್ಚುವರಿ ಅನುದಾನದಲ್ಲಿ ಸುಂದರವಾದ ತೇರು ಮನೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಅವಘಡಗಳು ಹೆಚ್ಚು ಸಂಭವಿಸುತ್ತವೆ.

ಪಶು ಇಲಾಖೆಗೆ, ಅಗ್ನಿಶಾಮಕ ಹಾಗೂ ಪೋಲೀಸ್ ಇಲಾಖೆಗೆವಾಹನ ವಿತರಿಸಲಾಗಿದೆ.ಸಣ್ಣಪುಟ್ಟ ವಿಷಯಗಳಿಗೆ ಯಾವುದೇ ಪ್ರಕರಣ ದಾಖಲಿಸದೇ ಪೋಲಿಸರು ರಾಜಿ ಸಂಧಾನ ಮಾಡುವ ಮೂಲಕ ತಾಲ್ಲೂಕಿನಲ್ಲಿಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.

ಆಯ್ಕೆಯಾದ ದಿನದಂದಲೂ ಪುರೋಹಿತರಾದನಾರಾಯಣ ಭಟ್ ಅವರು, ಹೊಸ ರಥವನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅನೇಕರ ಶ್ರಮದಿಂದ ಇಂದು ಸಮರ್ಪಣೆ ಆಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.ರಂಗನಾಥ ಸ್ವಾಮಿಯ ಪ್ರಧಾನ ಆರ್ಚಕ ಘನಪಾಠಿ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವರ ಅವಯವಗಳು ರಥದಲ್ಲಿರುತ್ತವೆ. ದೇವರ ಸೂಕ್ಷ್ಮ ರೂಪ ರಥವೇ ಆಗಿದೆ. ಭವ್ಯದಿವ್ಯ ರಥದಲ್ಲಿ ದೇವರು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬೀದಿಯೊಳಗೆ ಮೆರವಣಿಗೆಯಲ್ಲಿ ನಡೆದರೆ ಗ್ರಾಮದಲ್ಲಿನ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂದು ತಿಳಿಸಿದರು.

136 ವರ್ಷದ ಹಿಂದಿನ ರಥವು ಶಿಥಿಲಾವಸ್ಥೆಗೊಂಡಿತ್ತು. ನಾಡಿನ ವಿವಿಧ ಭಾಗಗಳಿಂದ ರಂಗನಾಥ ಸ್ವಾಮಿಯ ಭಕ್ತರು ದೇಣಿಗೆ ನೀಡಿದ್ದಾರೆ.ಕಳೆದ 8 ವರ್ಷದಿಂದ ಹೊಸ ರಥ ನಿರ್ಮಾಣ ಕಾರ್ಯ ನಡೆದು ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿ ಇಂದು ಲೋಕಾರ್ಪಣೆ ಆಗಿದೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್, ಡಿವೈಎಸ್ ಪಿ ಕೇಶವ, ಸಿಪಿಐ ಮಹಾಂತೇಶ್ ಲಂಬಿ, ತಹಶೀಲ್ದಾರ್ ಪುರಂದರ, ಇಒ ಶಶಿಧರ್, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ಎಚ್.ಗಣಪತಿ, ಪ್ರಧಾನ ಆರ್ಚಕ ನಾರಾಯಣ ಭಟ್, ಭಾರತಿ ಶೆಟ್ಟಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪ್ರಶಾಂತ್ ಮೇಸ್ತಿ, ಡಾಕಪ್ಪ, ಬಂದಗಿ ಬಸವರಾಜ್ ಶೇಟ್, ತಬಲಿ ಬಂಗಾರಪ, ಶ್ರೀರಂಜನಿ, ಎಂ.ಡಿ.ಉಮೇಶ್, ಜೈಶೀಲಗೌಡ, ದಿವಾಕರ್ ಭಟ್‌ ಭಾವೆ, ಶಿವಯೋಗಿ, ಷಣ್ಮುಖಾಚಾರ್, ಅಣ್ಣಪ, ತೋಟಪ್ಪ, ಎಂ.ಡಿ.ಉಮೇಶ್, ಗುರುಮೂರ್ತಿ, ಸದಾನಂದಗೌಡ ಉಪಸ್ಥಿತರಿದ್ದರು.

Author