ಶಿವಮೊಗ್ಗ | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಶಿವಮೊಗ್ಗ

ಶಿವಮೊಗ್ಗ, ಕೋಣಂದೂರು ಸಮೀಪದ ಹೊಸಕೇರಿ ನಿವಾಸಿ ನಾಗರಾಜ (52) ಡೆತ್ ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಟ್ ಫಂಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ದಾಖಲೆ ಪತ್ರಗಳನ್ನು ಸಂಬಂಧಿಕರೊಬ್ಬರಿಗೆ ಕೊಟ್ಟು ಜಾಮೀನಿಗೆ ಸಹಿ ಮಾಡಿದ್ದರು.

ಈ ಕಾರಣಕ್ಕೆ ಚಿಟ್ ಫಂಡ್‌ನವರು ಕಿರುಕುಳ ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author