ಶಿವಮೊಗ್ಗ | ಉದ್ಯಮಿಗೆ ಬೆಳಗಾವಿ ಜೈಲಿನಿಂದ ರೌಡಿ ಫೌಝನ್ ಬೆದರಿಕೆ ಕರೆ

ಶಿವಮೊಗ್ಗ

ಶಿವಮೊಗ್ಗ, ಈಗಾಗಲೇ ಅನೇಕ ಪ್ರಕರಣದಲ್ಲಿ ಆರೋಪಿಯಾಗಿ ಬೆಳಗಾಂ ಜೈಲಿನಲ್ಲಿರುವ ಫೌಜಾನ್​ ಇದೀಗ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಫೋನ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಶಿವಮೊಗ್ಗದಲ್ಲಿರುವ ಉದ್ಯಮಿಯ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನಮ್ಮ ಅಣ್ಣ ಫೌಜಾನ್​ ಲೈನ್‌ ನಲ್ಲಿದ್ದಾರೆ ಮಾತನಾಡು ಎಂದು ಬಲವಂತವಾಗಿ ಫೋನ್ ನೀಡಿದ್ದಾನೆ. ನಂತ ಫೋನ್​​ ತೆಗೆದುಕೊಂಡ ಉದ್ಯಮಿಗೆ ಜೈಲಿನಲ್ಲಿರುವ ಫೌಜಾನ್ ಅವಾಚ್ಯ ಪದಗಳಿಂದ ನಿಂದಿಸಿ, ಮರುದಿನ ಸಂಜೆಯೊಳಗೆ ನೀನು ನನಗೆ 5 ಲಕ್ಷ ರೂಪಾಯಿ ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಪ್ರಾಣ ಉಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.

ಹಿಂದಿನ ಬಾರಿ ದಾಳಿಯಿಂದ ತಪ್ಪಿಸಿಕೊಂಡಿದ್ದೀಯಾ, ಈ ಸಲ ನಿನಗೆ ಉಳಿಗಾಲವಿಲ್ಲ ಎಂದು ಫೌಜಾನ್​​ ಉದ್ಯಮಿಯನ್ನು ಗಿ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ ಸ್ಥಳದಲ್ಲಿದ್ದ ಆರೋಪಿಯ ಸಹಚರ ಕೂಡ ಹಣ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾರೆ.

ಇದರಿಂದ ಬೇಸತ್ತ ಉದ್ಯಮಿ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಉದ್ಯಮಿಯ ಮೊಬೈಲ್‌ಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಂಟರ್ನೆಟ್ ಕರೆಗಳುಬಂದಿರುವುದು ದೃಢಪಟ್ಟಿದೆ.

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಈ ಕ್ರಿಮಿನಲ್, ಹೊರಗಿರುವ ತನ್ನ ಬೆಂಬಲಿಗರ ಮೂಲಕ ಇಂತಹ ಸುಲಿಗೆ ಸಂಚು ರೂಪಿಸುತ್ತಿರುವುದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ದೊಡ್ಡಪೇಟೆ ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಜೈಲಿನಿಂದ ಬಂದ ಕರೆಯ ಮೂಲ ಹಾಗೂ ಸ್ಥಳೀಯವಾಗಿ ಸಹಕರಿಸಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Author