ಸೊರಬ | ಜವಾಹರ್ ನವೋದಯ ವಿದ್ಯಾಲಯಕ್ಕೆ ಎಂ.ಎನ್. ಅಪೂರ್ವ ಆಯ್ಕೆ

ಶಿವಮೊಗ್ಗ

ಸೊರಬ,ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ತಾಲೂಕಿನ ಕುಂದಗಸವಿ ಗ್ರಾಮದ ವಿದ್ಯಾರ್ಥಿನಿ ಎಂ.ಎನ್. ಅಪೂರ್ವ ಉತ್ತಮ ಅಂಕಪಡೆದು ಆಯ್ಕೆಯಾಗಿದ್ದಾಳೆ.

ಪತ್ರಕರ್ತ ಎಂ.ಎಲ್. ನೋಪಿಶಂಕರ್ ಕುಂದಗಸವಿ ಹಾಗೂ ಪ್ರವೀಣೆ ದಂಪತಿಯ ಪುತ್ರಿಯಾಗಿರುವ ಎಂ.ಎನ್. ಅಪೂರ್ವ ಅವಳಿಗೆ ಮಾತೃಶ್ರೀ ಕೋಚಿಂಗ್ ಸೆಂಟರ್‌ನ ಶಿಕ್ಷಕ ರಮೇಶ್ ಕಲ್ಲಂಬಿ ಮಾರ್ಗದರ್ಶನ ನೀಡಿದ್ದರು.

ಗ್ರಾಮೀಣ ಭಾಗದ ಪ್ರತಿಭೆ ವಿದ್ಯಾರ್ಥಿನಿ ಅಪೂರ್ವ ಸಾಧನೆಗೆ ಕುಂದಗಸವಿ ಗ್ರಾಮಸ್ಥರು ಹಾಗೂ ತಾಲೂಕು ಪತ್ರಕರ್ತ ಬಳಗ ಅಭಿನಂದನೆ ಸಲ್ಲಿಸಿದೆ.

Author