ಶಿವಮೊಗ್ಗ,ಜಿಲ್ಲೆಯಾದ್ಯಂತ ನೂರಾರು ವಿದ್ಯಾರ್ಥಿ ನಿಲಯಗಳುಆಸ್ಪತ್ರೆ ಗಳು ಹಾಗೂ ಶಾಲೆಗಳಿವೆ. ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಶಾಲೆಗಳಲ್ಲಿ ಸಾವಿರಾರು ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬಂದಿರುತ್ತಾರೆ ಇಂತಹಾ ವಿದ್ಯಾರ್ಥಿಗಳಿಗೆ ಸರ್ಕಾರವೇ ಊಟ ಮತ್ತು ವಸತಿಯನ್ನು ಕಲ್ಪಿಸುತ್ತಾ ಬರುತ್ತಿದೆ ಆದರೆ ಇತ್ತೀಚಿನ ದಿನಮಾನಗಳಲ್ಲಿ ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ದಿಂದ ಗ್ಯಾಸ್ ಸಿಲಿಂಡರ್ ಗಳ ಅಭಾವ ಹೆಚ್ಚಾಗಿದ್ದು ಹಾಸ್ಟೆಲ್ ಗಳಿಗೆ ,ಶಾಲೆಗಳಿಗೆ, ಮತ್ತು ಆಸ್ಪತ್ರೆ ಗಳಿಗೆ ಯಾವುದೇ ರೀತಿಯ ತೊಂದರೆ ಗಳಾಗದಂತೆ ಸಮರ್ಪಕವಾಗಿ ಪೂರೈಕೆಮಾಡಬೇಕು ಎಂದು ಎನ್ ಎಸ್ ಯು ಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ನಾಗರಿಕರಿಗೆ ಸಕಷ್ಟು ತೊಂದರೆಗಳಾಗುವ ಸಾದ್ಯತೆ ಇದೆ , ಹಾಸ್ಟೆಲ್ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಬಹಳ ಆತಂಕದಪರಿಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಆಗುತ್ತಿರುವ ಆತಂಕವನ್ನು ದೂರ ಮಾಡಬೇಕು ಶಿವಮೊಗ್ಗಜಿಲ್ಲೆಯ ವಿದ್ಯಾರ್ಥಿ ನಿಲಯಗಳಿಗೆ ಶಾಲೆಗಳಿಗೆ ಆಸ್ಪತ್ರೆ ಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆಗ್ಯಾಸ್ ಸಿಲೆಂಡರ್ ಗಳನ್ನು ಪೂರೈಕೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಅಗತ್ಯ ಕ್ರಮಗಳನ್ನುಕೈಗೊಳ್ಳುವಂತೆ ಸೂಚಿಸಬೇಕು ಎಂದು ಮನವಿ ಮಾಡುಇದ್ದಾರೆ.
ಈ ಸಂದರ್ಭದಲ್ಲಿ N.S.U.I ನ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಕಾರ್ಯಾದ್ಯಕ್ಷರಾದ ರವಿಕುಮಾರ್ ನಗರ ಉಪಾಧ್ಯಕ್ಷರಾದ ಆದಿತ್ಯ,ಸುಭಾನ್ , ಶ್ರೀಕಾಂತ್, ಆಕಾಶ್, ಲೋಹಿತ್ ಕುಮಾರ್, ಪ್ರಮೋದ್, ಪ್ರಭು,ಜೀವನ್,ಯೂಸೂವ್, ದರ್ಶನ, ಸಾದುಲ್ಲ ದೀಪಕ್,ಮದನ್,ಭರತ್,ಗಣೇಶ ಮತ್ತು N.S.U.I ನ ಪದಾಧಿಕಾರಿಗಳು ಹಾಜರಿದ್ದರು



