ಶಿವಮೊಗ್ಗ | ಯುವ ಕಾಂಗ್ರೆಸ್ ನಿಂದ, ಪ್ರಧಾನಿಯ ಬಗ್ಗೆ ಕೀಳು ಮಟ್ಟದ ಪ್ರತಿಭಟನೆ ; ಬಿಜೆಪಿ ಯುವ ಮೋರ್ಚಾದಿಂದ ದೂರು

ಶಿವಮೊಗ್ಗ

ಶಿವಮೊಗ್ಗ, ನಿನ್ನೆ ದಿವಸ ದಿನಾಂಕ 10-03-2026 ರಂದು ಶಿವಮೊಗ್ಗ ನಗರದ ಗೋಪಿ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ, ಮಾನ್ಯ ಭಾರತದ ಪ್ರಧಾನಮಂತ್ರಿಗಳಿಗೆ ಅವಮಾನವಾಗುವ ರೀತಿಯಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದೇಶದ ಪ್ರಧಾನಮಂತ್ರಿ ಎನ್ನುವುದು ದೇಶದ ಗೌರವದ ಸ್ಥಾನವಾಗಿದ್ದು, ಆ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ರೀತಿಯಲ್ಲಿ ಅಗೌರವ ತೋರಿಸುವುದು ಸರಿಯಾದ ಸಂಸ್ಕೃತಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತು ಸ್ವಯಂಪ್ರೇರಿತವಾಗಿ (ಸೂಮೊಟೋ) ಪ್ರಕರಣ ದಾಖಲಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಇವತ್ತಿನ ದಿನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಘಟನೆ ಕುರಿತು ಪ್ರಕರಣ ದಾಖಲಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು.

oplus_0

ಜೊತೆಗೆ ಎಸ್‌ಪಿ ಅವರ ಮುಖಾಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಗತ್ಯವಾದ ಸೂಚನೆ ನೀಡುವಂತೆ ವಿನಂತಿಸಲಾಯಿತು. ಇದೇ ವೇಳೆ ದೊಡ್ಡಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೂ ಮನವಿ ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಅವರ ನೇತೃತ್ವದಲ್ಲಿ ಯುವ ಮೋರ್ಚಾ ತಂಡದಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವ ಮೋರ್ಚಾ ಜಿಲ್ಲಾ ಸಹ ಪ್ರಭಾರಿಗಳಾದ ಸಂತೋಷ್ ಹೊಳಲೂರು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸತೀಶ್ ರಾಮನಕೊಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ಆರ್ ವಿ ಹಾಗೂ ಅರುಣ್ ಕುಗ್ವೆ , ಶಿವಮೊಗ್ಗ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಅನಿಲ್ ಲೋಕಿನಕೊಪ್ಪಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯುವರಾಜ್ ಎನ್.ವಿ. ಮತ್ತು ಹರೀಶ್ ನಾಯ್ಕ್ , ಜಿಲ್ಲಾ ಖಜಾಂಚಿಗಳಾದ ವಿವೇಕ್ ಹೆಬ್ಬಾರ್, ಜಿಲ್ಲಾ ಪದಾಧಿಕಾರಿಗಳಾದ ಕುಮಾರ್ ಆಯನೂರು, ಅಜಯ್ ಬೊಮ್ಮನಕಟ್ಟೆ, ಪವನ್, ಗಣೇಶ್ ಗುಂಡಗದ್ದೆ, ಅಮಿತ್ ಹೆಗ್ಗಾರ್ , ಶಶಿ , ಸತೀಶ್ ಸೇರಿದಂತೆ ಯುವ ಮೋರ್ಚಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Author