ಶಿವಮೊಗ್ಗ | ಬಸಮ್ಮ ಕೊಲೆ ಕೇಸ್ ರಿವೀಲ್ ; ಪಕ್ಕದಲ್ಲೇ ಇರುತ್ತಾರೆ ಹಂತಕರು ಎಚ್ಚರ..!

ಶಿವಮೊಗ್ಗ

ಶಿವಮೊಗ್ಗ, ಗ್ರಾಮಾಂತರದ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ದಿ:02/10/2025 ರಂದು ಬಸಮ್ಮ (70 ವರ್ಷ) ಎಂಬುವರು ಕೊಲೆಯಾಗಿರುತ್ತಾರೆ, ಈ ಬಗ್ಗೆ ಈಶ್ವರಪ್ಪ ಮೃತ ಬಸಮ್ಮರವರ ಅಳಿಯ ರವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮೃತೆಯ ಮಗನಾದ ರಮೇಶನೇ ಕೊಲೆ ಮಾಡಿರುವುದಾಗಿ ಬಸಮ್ಮ ಅವರ ಅಳಿಯ ಆರೋಪಿಸಿ ದೂರು ನೀಡಿರುತ್ತಾರೆ.

ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸ್ ಇಲಾಖೆಗೆ ತಿಳಿದಿದ್ದು ಏನಂದರೆ ತಾಂತ್ರಿಕ ಮತ್ತು ಇತರೆ ಸಾಕ್ಷಿಗಳಿಂದ ರಮೇಶನು ಕೊಲೆ ಮಾಡಿಲ್ಲ ಎಂಬುದು ತಿಳಿಯುತ್ತದೆ.

ಈ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯ ಮತ್ತು ಇತರೆ ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು, ನಿಜವಾದ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿರುತ್ತದೆ. ಈ ವೇಳೆ ಸಿಕ್ಕಿಬಿದ್ದ ಹಂತಕರು, ಪ್ರಕರಣದ ಆರೋಪಿತರಾಗಿ ಎ1 ಎಂ.ಅಮಾನ್ ಸಿಂಗ್ 4 ಮುನ್ನಾ @ ಸುಜಾನ್ ,( 21 ವರ್ಷ), ಮತ್ತು ಎ2.ವಿಕಾಸ್ (21 ವರ್ಷ), ರವರುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿರುತ್ತಾರೆ.

ಈ ಆರೋಪಿಗಳು ಮೃತೆ ಬಸಮ್ಮ ಅವರ ನೆರೆ ಹೊರೆಯವರು ಆಗಿದ್ದು. ಬಸಮ್ಮ ಮನೆಯಲ್ಲಿ ಒಂಟಿ ಇರುವುದನ್ನು ಗಮನಸಿ ಮನೆಗೆ ಬಂದು ಬಸಮ್ಮ ಅವರ ಬಳಿ ಕುಶಲೋಪರಿ ಮಾತನಾಡಿ ನಂತರ ಅಜ್ಜಿ ಬಸಮ್ಮ ಬಳಿ ಕುಡಿಯಲು ನೀರು ಕೇಳಿ ಅಜ್ಜಿ ನೀರು ತರಲು ಹೋದಾಗ ಕೊಲೆ ಮಾಡಿರುತ್ತಾರೆ.

ಆರೋಪಿಗಳು ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಏನೋ ಅಲ್ಪ ಸ್ವಲ್ಪ ಹಣದ ಆಸೆಗೆ ಬಸಮ್ಮ ಎಂಬ ಅಜ್ಜಿಯನ್ನ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಎಸ್ಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ..

ಕೊಲೆ ಕೃತ್ಯದ ಸಮಯದಲ್ಲಿ ಬಳಕೆಯಾದ ಒಂದು ಬೈಕ್ ಮತ್ತು ಎರಡು ಫೋನ್ ಗಳನ್ನು ಹಾಗೂ ಮೃತ ಬಸಮ್ಮನ ಮೈಮೇಲಿಂದ ಆರೋಪಿತರು ತೆಗೆದುಕೊಂಡ ಒಂದು ಕಿವಿ ಓಲೆಯ ತಿರುಪು ಮತ್ತು ಕಿವಿ ಚೈನ್ ಮತ್ತು ಉಂಗುರ ಕರಗಿಸಿ ಮಾಡಿದ ಬಂಗಾರದ ಗಟ್ಟಿಯನ್ನು ವಶಕ್ಕೆ ಪಡೆದು ತನಿಖೆಗೆ ಅಳವಡಿಸಿಕೊಂಡಿರುತ್ತಾರೆ. ಮತ್ತು ತನಿಖೆ ಇನ್ನೂ ಪ್ರಗತಿಯಲ್ಲಿರುತ್ತದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪ್ರಕರಣದ ಈವರೆಗಿನ ತನಿಖೆಯಿಂದ ಈಶ್ವರಪ್ಪ ರವರು ತಿಳಿಸಿದಂತೆ ಮೃತೆಯ ಮಗ ರಮೇಶನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ಕಂಡುಬಂದಿರುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಬಗ್ಗೆ ಆರೋಪಿತರ ಪತ್ತೆ ಹಾಗೂ ಕಳುವಾದ ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ವಿಶೇಷ ತಂಡವನ್ನು ಸದರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ.

ಈ ಹಿನ್ನಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಅವರು ಸಾರ್ವಜನಿಕರಿಗೆ ಮಹತ್ತರ ಸಲಹೆ ನೀಡಿದ್ದು ನಿಮ್ಮ ಊರಿನಲ್ಲಿ ನಗರದಲ್ಲಿ ಹಳ್ಳಿಯಲ್ಲಿ ಎಲ್ಲಾದರೂ ಸರಿ ಒಂಟಿ ಮನೆ ಅಥವಾ ಮನೆಯಲ್ಲಿ ಒಂಟಿ ವ್ಯಕ್ತಿ ಇದ್ದಾರೆ ಎಂದಾಗ ಅಕ್ಕಪಕ್ಕದವರು ಗಮನಿಸುತ್ತಿರಿ, ಹಾಗೂ ಅವರುಗಳೊಂದಿಗೆ ಒಡನಾಟ ಇಟ್ಟುಕೊಂಡು ಅವಾಗವಾಗ ಮಾತನಾಡಿಸುತ್ತಿರಿ, ಹಾಗೂ ಮನೆಗೆ ಸಿ ಸಿ ಕ್ಯಾಮೆರಾ ಅಥವಾ ಅಲಾರಾಂ ಅಂತಃ ಉಪಕರಣ ಅಳವಡಿಸಿಕೊಳ್ಳಿ ಹಾಗೂ ಜೊತೆಗೆ ಪೊಲೀಸ್ ಇಲಾಖೆ ಗಮನಕ್ಕೆ ತಂದರು ಸಹ ಬೀಟ್ಸ್ ಮುಖಾಂತರ ಪೊಲೀಸ್ ಇಲಾಖೆ ಗಮನದಲ್ಲಿ ಇಟ್ಟುಕೊಂಡು ಸಹಕಾರ ನೀಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.

Author