ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಫೇಸ್ಬುಕ್ ಪೇಜ್ ನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆ ಮದ್ಯೆ ವಾಹನ ಪರಿಶೀಲನೆ ಅಂತ ವಾಹನ ತಡೆದಾಗ , ಅದಕ್ಕೆ ಸಂಬಂಧಪಟ್ಟಂತೆ ನೋಟೀಸ್ ನೀಡಬೇಕು ಎಂದು ಬಹಳಷ್ಟು ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುತ್ತೀರಾ ಆದರೆ ಅದುಕ್ಕೆ ಮುಂಚೆ ಕಾನೂನು ಏನು ಹೇಳತ್ತೇ ಎಂದು ತಿಳಿದುಕೊಳ್ಳಿ ಎಂಬ ಸಂದೇಶದ ವಿಡಿಯೋವನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಫೇಸ್ಬುಕ್ ನಲ್ಲಿ ವಿಡಿಯೋ ಹರಿಬಿಟ್ಟಿದೆ.
ಈ ವಿಡಿಯೋ ಸಂಬಂಧ ಸುಮಾರು 64 ಜನ ಈ ಒಂದು ವಿಡಿಯೋ ಗೆ ಟ್ರಾಫಿಕ್ ಪೊಲೀಸ್ ಇಲಾಖೆಯ ವಿಡಿಯೋಗೆ ಪ್ರಶ್ನೆ ಮಾಡುವ ಮೂಲಕ ಕಾನೂನು ಏನು? ಆದರೆ ವಾಸ್ತವದ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸರು ಮಾಡುವ ದೌರ್ಜನ್ಯ ಬಗ್ಗೆ ಜಾಡಿಸಿದ್ದಾರೆ.
ವಿಪರ್ಯಾಸವೆಂದರೆ ಟ್ರಾಫಿಕ್ ಪೊಲೀಸ್ ಇಲಾಖೆ ನೆಗೆಟಿವ್ ಕಾಮೆಂಟ್ ಬರುತ್ತಿರುವ ಕಾರಣ ವಾಪಾಸ್ ಉತ್ತರ ನೀಡದೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿ ಪೆಚಾಟಕ್ಕೆ ಸಿಲುಕಿ ಉತ್ತರವೇ ನೀಡದೆ, ನಮಗೂ ವಿಡಿಯೋಗು ಸಂಬಂಧವಿಲ್ಲ ಎಂಬಂತೆ ಪ್ರಜ್ಞಾವಂತ ನಾಗರೀಕರ ಪ್ರಶ್ನೆಗೆ ಉತ್ತರ ನೀಡಿದರೆ ಮತ್ತಷ್ಟು ಸಮಸ್ಯೆ ಆದೀತು ಅಂತ ಸುಮ್ಮನಾಗಿದ್ದಾರೆ.
https://www.facebook.com/share/r/1GKTLsgPNb/
ಹಾಗೂ ಈ ಒಂದು ವಿಡಿಯೋ ಗೆ 1.5K ಜನ ವಿಡಿಯೋ ವೀಕ್ಷಿಸಿದ್ದಾರೆ. 87 ಜನ ಈ ವಿಡಿಯೋ ಶೇರ್ ಮಾಡಿದ್ದಾರೆ. ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೂಡ ನಿಮಗೆ ಪೊಲೀಸ್ ಇಲಾಖೆಯಲ್ಲಿ ಜ್ಞಾನ ಕಡಿಮೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಾರೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಏನೋ ಮಾಡಲು ಹೋಗಿ ಏನು ಮಾಡಿದೇವು ನಾವು ಎಂಬ ಪೆಚಾಟದಲ್ಲಿ ಸಿಕ್ಕುಹಾಕಿಕೊಂಡು. ಯಾರೆಲ್ಲ ಕಾಮೆಂಟ್ ಮಾಡಿದರೆ ಅವರ ಮೇಲೆ ಕಣ್ಣಿಟ್ಟಿದಿಯ ಪ್ರಶ್ನೆ ಮಾಡಿರುವುದಕ್ಕೆ ಉತ್ತರ ಕೊಡಲು ಆಗದೆ ಕಾಮೆಂಟ್ ಮಾಡಿದವರ ಮೇಲೆ ಕತ್ತಿ ಮಸಿಯಲು ಏನಾದರು ತಯಾರಾಗಿದ್ದಾರಾ? ಎಂಬುದು ಈಗಿರುವ ಪ್ರಶ್ನೆಯಾಗಿದೆ?

ಮುಂದಿನ ದಿನಗಳಲ್ಲಿ ಮಾಹಿತಿ ಬಂದಲ್ಲಿ ಸುದ್ದಿ ಮುಖೇಣ ತಿಳಿಸಬಹುದಾಗಿದೆ.ಕಾನೂನು ಬಗ್ಗೆ ಅರಿವಿನ ವಿಡಿಯೋ ಹಾಕುವ ಮುನ್ನ ಟ್ರಾಫಿಕ್ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ಎಲ್ಲವನ್ನೂ ಗಮಿನಿಸಿ ನಂತರ ಇದು ವಿಡಿಯೋ ಉಪಯುಕ್ತವಾಗಲಿದೆಯ ಎಂದು ಯೋಚಿಸ ವಿಡಿಯೋ ಅಪ್ಲೋಡ್ ಮಾಡಬೇಕಿತ್ತು ಅಲ್ಲವೇ ?
ಹಾಗೂ ಕಾಮೆಂಟ್ ಬಾಕ್ಸ್ ನಲ್ಲಿ ಪ್ರಶ್ನೆ ಕೇಳಿರುವವರಿಗೆ ಉತ್ತರ ನೀಡಬಹುದಿತ್ತಲ್ಲವೇ? ಹಾಗೂ ತಮ್ಮ ಇಲಾಖೆ ವತಿಯಿಂದ ಕೊನೆಪಕ್ಷ ಸರಿಪಡಿಸಿಕೊಡುತ್ತೇವೆ ಎಂಬುದಾದರೂ ಕಾಮೆಂಟ್ ಮೂಲಕ ತಿಳಿಸಬಹುದಿತ್ತಲ್ಲವೇ?
ಈ ರೀತಿಯಲ್ಲಿ ವಿಡಿಯೋ ಹರಿಬಿಟ್ಟು ನಂತರ ಪಲಾಯನ ಮಾಡಿ ಸಾರ್ವಜನಿಕರು ಹಾಗೂ ನಾಗರೀಕರ ಪ್ರಶ್ನೆಗೆ ಉತ್ತರವೇ ನೀಡದೆ ಇರುವುದಾದರೆ ವಿಡಿಯೋ ಹಾಕುವ ಮೂಲಕ ಮಾಹಿತಿ ತಿಳಿಸಿದ್ದಾದರೂ ಯಾಕೆ ಎಂಬುದು ಈಗ ಶಿವಮೊಗ್ಗದ ಪ್ರಜ್ಞಾವಂತರು ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ ಹಾಗೂ ಚರ್ಚೆಗೆ ಗ್ರಾಸವಾಗಿದೆ ?



