ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಹೊಸ ಸಿದ್ದಾಪುರದಲ್ಲಿ ಶಿವರಾತ್ರಿ ದಿನದದಂದು ಕೆಎಸ್ಐಎಫ್ ಎಸ್ ನಲ್ಲಿ ಡಿ ದರ್ಜೆ ನೌಕರರೊಬ್ಬರು ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಇಂದು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಡಿ ದರ್ಜೆ ನೌಕರರಾಗಿದ್ದ ಜಗದೀಶ್ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದರು. ಈ ವೇಳೆ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವು ಎಂದು ದೂರು ದಾಖಲಾಗಿತ್ತು.
ಆದರೆ ಅವರ ಪತ್ನಿ ಸ್ವಾತಿ (26) ಸಹ ಅವರ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನೇಣು ಬಿಗಿದು ಸಾವನ್ನಪ್ಪಿರುವ ಜೊತೆಗೆ ಸ್ವಾತಿ ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್ ನಲ್ಪಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ.
ಇವರ ಆತ್ಮಹತ್ತೆಯ ವೇಳೆ ಸ್ವಾತಿ ಮೈಮೇಲೆ ತಾಳಿ, ಮತ್ತು ಇತರೆ ಚಿನ್ನಾಭರಣವನ್ನ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ಆದರೆ ಅವರ ಪತ್ನಿ ಸ್ವಾತಿ (26) ಸಹ ಅವರ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನೇಣು ಬಿಗಿದು ಸಾವನ್ನಪ್ಪಿರುವ ಜೊತೆಗೆ ಸ್ವಾತಿ ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್ ನಲ್ಪಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಇವರ ಆತ್ಮಹತ್ತೆಯ ವೇಳೆ ಸ್ವಾತಿ ಮೈಮೇಲೆ ತಾಳಿ, ಮತ್ತು ಇತರೆ ಚಿನ್ನಾಭರಣವನ್ನ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.
ಇನ್ನು ಘಟನೆ ಸಂಬಂಧ ಸ್ವಾತಿ ಅವರ ತಾಯಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಈ ಸಂಬಂಧ ಈ ಕೆಳಗಿನಂತೆ ದೂರು ನೀಡಿರುತ್ತಾರೆ.
ನನಗೆ ಒಂದು ಗಂಡು ಮಗ ಸಂಜಯ್ ಮತ್ತು ಒಬ್ಬಳು ಹೆಣ್ಣು ಮಗಳಾದ ಸ್ವಾತಿ ಇದ್ದು ಇವಳನ್ನು ಭದ್ರಾವತಿ ಹೊಸ ಸಿದ್ದಾಪುರ ವಾಸಿಯಾದ ಜಗಧೀಶ ಬಿನ್ ಪುಟ್ಟೇಗೌಡ ಇವರಿಗೆ 2019ರಲ್ಲಿ ಮದುವೆ ಮಾಡಿಕೊಟ್ಟಿದ್ದು ಅವರ ದಾಂಪತ್ಯ ಜೀವನದ ಫಲವಾಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ.
ಹೀಗಿರುವಾಗ ನನ್ನ ಅಳಿಯ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಮಗಳ ಕುಟುಂಬದ ಬಗ್ಗೆ ಪೋಲೀಸ್ ಪೇದೆಯಾದ ಮೋಹನ್ ರವರು ಅಪಪ್ರಚಾರ ಮಾಡಿದ್ದು ಇದರಿಂದ ಮನ ನೊಂದು ನನ್ನ ಅಳಿಯ ದಿನಾಂಕ:14-02-2026ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡು ಹೊಸ ಸಿದ್ದಾಪುರದಲ್ಲಿ ಮೃತರಾಗಿರುತ್ತಾರೆ.
ಈತನ ಸಾವಿನ ಬಗ್ಗೆ ನಮಗೆ ಸಮಗ್ರ ಮಾಹಿತಿ ಇಲ್ಲದ ಕಾರಣ ಯಾವುದೇ ದೂರು ನೀಡದೇ ಪಿ.ಎಂ ವರದಿಯಾದ ನಂತರ ಶವ ಸಂಸ್ಕಾರ ಮಾಡಿರುತ್ತೇವೆ. ಹೀಗಿರುವಾಗ ನನ್ನ ಮಗಳು ಸ್ವಾತಿ ಕೋಂ ಲೇಟ್ ಜಗಧೀಶ್ ಹೊಸಸಿದ್ದಾಪುರ ಗಂಡ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಆರೋಪಿತ ಪೋಲೀಸ್ ಪೇದೆ ಮೋಹನ್ ರವರು ಯಥಾ ಪ್ರಕಾರ ನನ್ನ ಮಗಳ ಬಗ್ಗೆ ಅಪಪ್ರಚಾರ ಮಾಡಿದ್ದು,
ಅಲ್ಲದೇ ಫೋನ್ ಮುಖೇಣ ನನ್ನ ಮಗಳಿಗೆ ಕಿರುಕುಳ ನೀಡಿದ್ದು ಈ ವಿಚಾರವಾಗಿ ಅವಳು ಜೀವಂತವಿರುವಾಗ ನನಗೆ ವಿಷಯ ತಿಳಿಸಿದ್ದಳು. ಆಗ ನಾನು ನನ್ನ ಗಂಡ ಜಯರಾಮ್ ಅವಳಿಗೆ ಸಮಾಧಾನ ಹೇಳಿರುತ್ತೇವೆ.
ಹೀಗಿರುವಾಗ ದಿನಾಂಕ: 20-02-2026ರಂದು ನನಗೆ ಬೆಳಿಗ್ಗೆ ಆರೋಪಿತ ಸದರಿ ಮೋಹನ್ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಜನಗಳ ಮುಂದೆ ಅಪಪ್ರಚಾರ ಮಾಡಿರುವ ಬಗ್ಗೆ ಈ ವಿಷಯದ ಹಿನ್ನೆಲೆಯಲ್ಲಿ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅಲ್ಲದೇ ನನ್ನ ಮಗಳಿಗೆ ಬ್ಲಾಕ್ ಮೇಲ್ ಮಾಡಿ ನನ್ನ ಮಗಳ ಮೊಬೈಲ್ಗೆ ಆರೋಪಿ ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನನಗೆ ವಿಷಯ ತಿಳಿಸಿದ್ದು ನನ್ನ ಮಗಳು ಮಾನಸಿಕ ನೊಂದಿರುತ್ತಾಳೆ.
ಅಲ್ಲದೇ ಆರೋಪಿ ನನ್ನ ಮಗಳಿಗೆ ಧಮ್ಮಿ ಹಾಕಿ ನಾನು ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ ನನ್ನ ಮೇಲೆ ದೂರು ಕೊಟ್ಟರೇ ಏನು ಮಾಡಲು ಸಾದ್ಯವಿಲ್ಲ ನಾನು ಹೇಳಿದಂತೆ ಕೇಳಿದರೆ ನಿನ್ನ ಬದುಕು ಸರಿಯಾಗುತ್ತದೆಂದು ಆರೋಪಿ ನನ್ನ ಮಗಳಿಗೆ ಧಮ್ಮಿ ಹಾಕಿರುವ ಬಗ್ಗೆ ಸಹ ನನ್ನ ಮಗಳು ನನಗೆ ಹೇಳಿದ್ದಳು ನನಗೆ ನನ್ನ ಮೊಬೈಲ್ ನಂ.94**** ಬೆಳಿಗ್ಗೆ 9 ಗಂಟೆ 10 ನಿಮಿಷದಲ್ಲಿ ನನ್ನ ಮೊಬೈಲ್ಗೆ ಮೆಸೇಜ್ ಮಾಡಿ ಆರೋಪಿತ ಮೋಹನ್ ಕಿರುಕುಳ ನೀಡಿದ್ದು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ದುಷ್ಟೇರಣೆ ಮಾಡಿದ್ದು.
ಈ ಹಿನ್ನೆಲೆಯಲ್ಲಿ ನನ್ನ ಮಗಳು ಸ್ವಾತಿ ಭದ್ರಾವತಿ ತಾ ಹೊಸಸಿದ್ದಾಪುರದ ಗಂಡನ ಮನೆಯಲ್ಲಿ ನನ್ನ ಮಗಳು ನನ್ನ ಮೊಬೈಲ್ಗೆ ಮೆಸೇಜ್ ಹಾಕಿ ಕಾರಣ ತಿಳಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.ವಿಷಯ ತಿಳಿದ ನಾನು ಸ್ಥಳಕ್ಕೆ ಹೋಗಿ ನೋಡಿದಾಗಿ ನನ್ನ ಮಗಳು ಮೃತರಾಗಿರುತ್ತಾರೆ.
ಆದ್ದರಿಂದ ನನ್ನ ಮಗಳ ಸಾವಿಗೆ ಕಾರಣರಾದ ಪೋಲೀಸ್ ಪೇದೆ ಮೋಹನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವಳು ಆತ್ಮಹತ್ಯೆ ಮಾಡಿಕೊಳ್ಳವಂತೆ ಅಪಪ್ರಚಾರ ಮಾಡಿ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿ ದುಷ್ಟೇರಣೆ ಮಾಡಿರುವ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷಿಸಬೇಕೆಂದು ಪ್ರಾರ್ಥನೆ ಎಂದು ತಿಳಿಸಿದ್ದಾರೆ.
ಈ ರೀತಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಾನು ಹೊಸ ಸಿದ್ದಾಪುರದಲ್ಲಿ ನನ್ನ ಅಳಿಯ ತಿಥಿಕಾರ್ಯಕ್ಕೆ ಉಳಿದುಕೊಂಡಿದ್ದು ನನ್ನ ಮಗಳಿಗೆ ಎಲ್ಲಾ ರೀಶ್ಯಾ ಸಮಾಧಾನವನ್ನು ಮಾಡಿರುತ್ತೇನೆ ನಂತರದಲ್ಲಿ ನಾನು ಮನೆಯ ಹೊರಗೆ ಕೆಲಸದಲ್ಲಿ ಮಗ್ನನಾಗಿರುವಾಗ ನನ್ನ ಮಗಳು ಮನ ನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.
ಈ ದೂರನ್ನು ಗೋಣಿಬೀಡು ಗ್ರಾಮದಿಂದ ನನ್ನ ಗಂಡ ಜಯರಾಮ್ ನನ್ನ ಸಂಬಂಧಿಕರಾದ ಶಿವಕುಮಾರ್, ಲೋಕೇಶ್, ಹರೀಶ್ ಎಲ್ಲರೂ ಹೊಸ ಸಿದ್ದಾಪುರಕ್ಕೆ ಬಂದು ಶವವನ್ನು ನೋಡಿ ಮತ್ತು ನನ್ನ ಮೊಬೈಲ್ಗೆ ಬಂದಿರುವ ಮೆಸೇಜ್ನ್ನು ಪರಿಶೀಲಿಸಿ ಈ ದೂರನ್ನು ನೀಡಿರುತ್ತೇನೆ. ಈ ದೂರಿನೊಂದಿಗೆ ಮೆಸೇಜ್ ಪ್ರಿಂಟ್ ಔಟ್ ನ್ನು ಲಗತ್ತು ಮಾಡಿರುತ್ತೇನೆ.
ನನ್ನ ಮಗಳಾದ ಸ್ವಾತಿ ಜೆ ಇವಳು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ದುಷ್ಟೇರಣೆ ಮಾಡಿದ ಪೋಲೀಸ್ ಪೇದೆಯಾದ ಮೋಹನ್ ಈತನ ಮೇಲೆ ಸೂಕ್ತ ಕ್ರಮ ಕೈಗೊಂಡು ಶಿಕ್ಷಿಸಲು ಕೋರಿ ದೂರು ಸಲ್ಲಿಸುತ್ತಿದ್ದೇವೆ ಎಂದು ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ .



