ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.
ಕಳೆದ ಅಕ್ಟೋಬರ್ 03 ರಂದು ಶಿವಮೊಗ್ಗದ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಅವರ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅಮ್ಜದ್ ಖಾನ್ ಸಾವನ್ನಪ್ಪಿದ ನಂತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.
ಈ ಪ್ರಕರಣದ ಪ್ರಮುಖ ಆರೋಪಿಯಾದ ಫೌಝಾನ್ ನನ್ನು ಇಂದು ಶಿವಮೊಗ್ಗದಿಂದ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಫೌಝಾನ್ ಜೊತೆಗೆ ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಆಗಿರುವ ಕಡೆಕಲ್ ಅಬಿದ್ನನ್ನೂ ಸಹ ಸ್ಥಳಾಂತರಿಸಲಾಗಿದೆ.
ಅಬಿದ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಅಮ್ಜದ್ ಕೊಲೆ ಹೇಗೆಲ್ಲ ಆಯಿತು..
ಅಮ್ಜದ್ ಪೊಲೀಸ್ ಇಲಾಖೆಯ ನೂರಾರು ಪ್ರಕರಣಗಳಲ್ಲಿ ಸಾಕ್ಷಿದಾರನಾಗಿದ್ದ. ಶಿವಮೊಗ್ಗದ ರೌಡಿಸಂ ಜಗತ್ತಿನ ಮಿಂಚಿಂಚು ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದ. ಕೋಮು ಸೂಕ್ಷ್ಮ ನಗರದಲ್ಲಿ ಈತನ ಅನೇಕ ಇನ್ಫಾರ್ಮಶನ್ ಗಳು ದೊಡ್ಡ ಗಲಭೆಯನ್ನು ತಡೆಯಲು ಪೊಲೀಸರಿಗೆ ಸಹಕಾರಿಯಾಗಿದ್ದವು.
ಪೊಲೀಸರಿಗೆ ಪಕ್ಕ ಇನ್ಫಾರ್ಮಶನ್ ಆಗಿದ್ದು ಭೂಗತ ಜಗತ್ತಿನ ದುಷ್ಮನಿಗೆ ಕಾರಣವಾಗಿ ಕೊನೆಗೂ ದಂದಕೋರರು ರೌಡಿ ಜಗತ್ತಿನ ಪಾತಕಿಗಳು ಒಗ್ಗೂಡಿ ಮರ್ಡರ್ ಮಾಡೇ ಬಿಟ್ಟರು.

ಅದೇ ಶಿವಮೊಗ್ಗದ ಮೋಸ್ಟ್ ಸೆನ್ಸೇಷನಲ್ ಅಮ್ಜದ್ ಖಾನ್ ಮರ್ಡರ್ ಹಿಸ್ಟರಿ
ಹಿಂದುಗಳ ಪವಿತ್ರ ಹಬ್ಬ ವಿಜಯದಶಮಿಯ ಗುರುವಾರದಂದು ಶಿವಮೊಗ್ಗ ನಗರದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಅಮ್ಜದ್ ಖಾನ್ ಹಾಗೂ ಶಾಹಿದ್ ಮೇಲೆ ರಾತ್ರಿ 7:30ರ ಸುಮಾರಿಗೆ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದರು ಇದರಿಂದ ಅಮ್ಜದ್ ಖಾನ್ ಹೊಟ್ಟೆ, ಬೆನ್ನು ಭಾಗಕ್ಕೆ ತೀವ್ರವಾಗಿ ಗಾಯಗಳಾಗಿದ್ದವು. ಜೊತೆಗೆ ಆತನ ಕೈ ಹಾಗೂ ಬೆರಳುಗಳು ತುಂಡಾಗಿದ್ದವು. ಅಮ್ಜದ್ ನ ಜೊತೆಗಿದ್ದ ಶಾಹಿದ್ ಗೂ ಸಹ ಸಣ್ಣಪುಟ್ಟ ಗಾಯಗಳಾಗಿದ್ದವು
ಅಷ್ಟಕ್ಕೂ ಟೆಂಪೋ ಸ್ಟ್ಯಾಂಡ್ ಬಳಿ ಅಟ್ಯಾಕ್ ನಡೆದಿದ್ದು ಹೇಗೆ?
ಅ.02 ರ ರಾತ್ರಿ ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿರುವ ಟೆಂಪೋ ಸ್ಟ್ಯಾಂಡ್ ಬಳಿ ಅಮ್ಜದ್ ಖಾನ್ ಅವರು ತಮ್ಮ ಸ್ನೇಹಿತ ಶಾಹಿದ್ ಜೊತೆಗೆ ಬೈಕಿನಲ್ಲಿ ಬರುತ್ತಿದ್ದರು. ಈ ವೇಳೆ ಟೆಂಪೋ ಸ್ಟ್ಯಾಂಡ್ ಬಳಿ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ಮೂವರು ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ.
ಅಮ್ಜದ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಲಾಂಗ್ ಬೀಸಿದ್ದಾರೆ, ಅಮ್ಜದ್ ಖಾನ್ ತನ್ನ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಜೆಸಿ ನಗರದ ಎರಡನೇ ತಿರುವು ವರೆಗೂ ಬಂದು ರಸ್ತೆಯಲ್ಲಿ ಬಿದ್ದಿದ್ದ ಅಮ್ಜದ್ ನನ್ನು ಅಟ್ಟಾಡಿಸಿಕೊಂಡು ಬಂದು ದಾಳಿ ಮುಂದುವರಿಸಲು ಯತ್ನಿಸಿದಾಗ ಸ್ಥಳೀಯರೇ ದಾಳಿಕೋರರ ಮೇಲೆ ಕಲ್ಲು ತೂರಿ ರಕ್ಷಣೆ ಮಾಡಿದ್ದರು.
ಅದರಲ್ಲೂ ಅಮ್ಜದ್ ಮೇಲೆ ಅಟ್ಯಾಕ್ ಮಾಡಿದ ಶೋಯಬ್ ಮಲಿಕ್ ಆಲಿಯಾಸ್ ಅಂಡ್ರೆಲ್ಲ ಎಂಬಾತ ಸಾರ್ವಜನಿಕರ ಏಟಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ದಾಳಿ ಕೋರ ತಪ್ಪಿಸಿಕೊಂಡು ಹೋದ ಬಳಿಕ ಅಮ್ಜದ್ ರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗಿತ್ತು.
ಗುರುವಾರ ಚಾಕು ಇರಿತಕ್ಕೆ ಒಳಗಾಗಿ ಭಾನುವಾರದವರೆಗೂ ಜೀವನ್ ಮರಣದ ನಡುವೆ ಹೋರಾಡಿದ ಅಮ್ಜದ್ ಖಾನ್ ಕೊನೆಗೂ ಭಾನುವಾರ ಬೆಳಗ್ಗೆ ಪ್ರಾಣ ಬಿಟ್ಟಿದ್ದಚಾಕು ಇರಿತಕ್ಕೊಳಗಾಗಿ ಅಮ್ಜದ್ ಖಾನ್ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಮ್ಜದ್ ಖಾನ್ ಅವರ ಕುಟುಂಬಸ್ಥರು ಮತ್ತು ಸ್ಥಳೀಯ ಯುವಕರು ಆಸ್ಪತ್ರೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು ಆಸ್ಪತ್ರೆಯ ಸುತ್ತಲೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ ಯಾವುದೇ ರೀತಿಯ ಗಲಾಟೆ ಅಥವಾ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಅನ್ನು ಏರ್ಪಡಿಸಿತ್ತು.
ಎರಡು ಜಿಲ್ಲಾ ಶಶಸ್ತ್ರ ಮೀಸಲು ಪಡೆಯ 2 ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು ಅಷ್ಟೇ ಅಲ್ಲದೆ ಸ್ಥಳೀಯ ಪೊಲೀಸರು ಹೆಜ್ಜೆ ಹೆಜ್ಜೆಗೂ ಕಾವಲಾಗಿದ್ದರು. ಅಮ್ಜದ್ ಖಾನ್ ಕೇರಂ ಕ್ಲಬ್ , ಗುಜರಿ ವ್ಯಾಪಾರ, ಸಣ್ಣಪುಟ್ಟ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದರೂ ಒಂದು ರೀತಿಯಲ್ಲಿ ಪೊಲೀಸ್ ಇಲಾಖೆಗೆ ಎಜೆಂಟ್ ರೀತಿಯಾಗಿ ಗುರುತಿಸಿಕೊಂಡಿದ್ದ.
ಈತ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಹಲವು ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದ್ದ. ಅಮ್ಜದ್ ಎಂದರೆ ಜೀವ ಬಿಡುವ ಫ್ಯಾನ್ ಗಳ ಸಂಖ್ಯೆ ಬಹುದೊಡ್ಡದಿದೆ.

ತಾನು ಪೊಲೀಸ್ ಇಲಾಖೆಗೆ ಮಾಡುವ ಉಪಕಾರ ಮುಂದೊಂದು ದಿನ ನನ್ನ ಜೀವಕ್ಕೆ ಕುತ್ತಾಗುತ್ತದೆ ಎಂದು ಅಮ್ಜದ್ ಎಂದಿಗೂ ಭಾವಿಸಿರಲಿಲ್ಲ. ನಾನು ಮಾಡುವ ಕೆಲಸಗಳಿಗೆ ಸಾವು ಕಟ್ಟಿಟ್ಡ ಬುತ್ತಿ ಎಂದು ಅಮ್ಜದ್ ತಿಳಿದಿದ್ದ. ಹೀಗಿದ್ದರೂ ಕತ್ತಿಯ ಅಲಗಿನಲ್ಲಿ ತಾನು ಮಾಡಬೇಕಾದ ಕೆಲಸಗಳನ್ನು ಮಾಡಿ ಪೂರೈಸುತ್ತಿದ್ದ.
ಪೊಲೀಸ್ ಇಲಾಖೆಯ ಸುಮಾರು 500 ಪ್ರಕರಣಗಳಲ್ಲಿ ವಿಟ್ ನೆಸ್
ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕ್ರೈಂ ಪ್ರಕರಣಗಳಿಗೆ ಒಬ್ಬನೇ ವ್ಯಕ್ತಿ ವಿಟ್ ನೆಸ್ ಆಗಲು ಸಾಧ್ಯವೆ…ನಿಜಕ್ಕು ಇಲ್ಲ…ಆದರೆ ಅಮ್ಜದ್ ಪ್ರಾಣದ ಹಂಗು ತೊರೆದು ಪೊಲೀಸ್ ಪರವಾಗಿ ಸಾಕ್ಷಿದಾರನಾಗಿ ಗುರುತಿಸಿಕೊಂಡಿದ್ದ…
ಶಿವಮೊಗ್ಗ ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಪೊಲೀಸರಿಗೆ ಮುಸ್ಲಿಂ ಬಳಗದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿವೆ ಎಂಬ ಮಾಹಿತಿಯನ್ಮ ಪೊಲೀಸರಿಗೆ ಅಮ್ಜದ್ ಗೌಪ್ಯವಾಗಿ ನೀಡುತ್ತಿದ್ದ. ಆತನ ಮಾಹಿತಿ ಪಕ್ಕಾ ನಿಖರವಾಗಿರುತಿತ್ತು. ಇದರಿಂದ ಆಗುವ ಮತೀಯ ಗಲಬೆಗಳನ್ನು ಪೊಲೀಸರು ತಡೆಯೊಡ್ಡಲು ಸಹಕಾರವಾಗುತ್ತಿತ್ತು.
ಅಮ್ಜದ್ಗಿದೆ ದೊಡ್ಡ ಫ್ಯಾನ್ ಬೇಸ್..!
ಅಮ್ಜದ್ ಗೆ ಇಷ್ಟೆಲ್ಲಾ ಅಭಿಮಾನಿಗಳು ಹುಟ್ಟಿಕೊಳ್ಳೊದಕ್ಕೆ ಆತ ಮಾಡುತ್ತಿದ್ದ ಒಳ್ಳೆಯ ಸಮಾಜ ಮುಖಿ ಕೆಲಸಗಳು ಕೈ ಹಿಡಿದಿವೆ. ಆತನಿಗೆ ಮುಸ್ಲಿಂರಲ್ಲದೆ, ಹಿಂದುಗಳ ಪ್ರೀತಿಸುವ ದೊಡ್ಡ ವರ್ಗವೇ ಇದೆ. ಗಣಪತಿ ಹಬ್ಬ ಮಾರಿಹಬ್ಬ, ಕನ್ನಡ ರಾಜ್ಯೋತ್ಸವ ಹಬ್ಬಗಳಿಗೆ ಅಮ್ಜದ್ ಹಣಕಾಸಿನ ನೆರವು ನೀಡುತ್ತಿದ್ದ.ಅಯ್ಯಪ್ಪ ಮಾಲಾಧಾರಿಗಳು ಶಬರಿ ಮಲೈಗೆ ಹೋಗಲು ನೆರವು ನೀಡುತ್ತಿದ್ದ. ಮತೀಯವಾಗಿ ಏನೇ ಗಲಾಟೆಗಳಾದರೂ ಅದನ್ನು ತಡೆಯುವಲ್ಲಿ ಮುಂದೆ ಇರುತ್ತಿದ್ದ.
ಕೆಲ ತಿಂಗಳ ಹಿಂದೆ ರೌಡಿ ಫೌಝಾನ್ ನ್ಯೂ ಮಂಡಲಿ ಪೇಪರ್ ಫ್ಯಾಕ್ಟರಿ ಬಳಿ ಬರ್ತ್ ಡೇ ಸೆಲೆಬ್ರೇಷನ್ ಗೆ ನೂರಾರು ರೌಡಿಗಳನ್ನ ಸೇರಿಸಿದ್ದ. ಅಲ್ಲಿ ಮುಂದಿನ ಕ್ರೈಂ ನೆಟ್ ವರ್ಕ್ ಬಗ್ಗೆ ಪ್ಲಾನ್ ಮಾಡುವ ಸಂಚು ನಡೆದಿತ್ತು..ಈ ಮಾಹಿತಿಯನ್ನ ಪೊಲೀಸರಿಗೆ ನೀಡಿ ಪ್ಲಾನ್ ಪ್ಲಾಪ್ ಮಾಡಿದ್ದೆ ಅಮ್ಜದ್ ಎನ್ನುವುದು ಪೌಝಾನ್ ಅಕ್ರೋಶಕ್ಕೆ ಕಾರಣವಾಗಿತ್ತು.
ಅಂದಿನ ಪೊಲೀಸ್ ದಾಳಿಯಲ್ಲಿ ಗಾಂಜಾ, ಪಿಸ್ತೂಲ್ ಅನ್ನು ಪೊಲೀಸರು ಸೀಜ್ ಮಾಡಿ ಪೌಝಾನ್ ಅಂಡ್ ಟೀಮನ್ನ ಜೈಲಿಗಟ್ಟಿದ್ದರು….ಅಲ್ಲಿಂದ ಶುರುವಾದ ದ್ವೇಷ ಕೊನೆಗೆ ಕೊಲೆಯಲ್ಲಿ ಅಂತ್ಯಕಂಡಿದ್ದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ಸತ್ಯ.ಅಮ್ಜದ್ ಖಾನ್ ಕೊಲೆ ಪ್ರಕರಣದಲ್ಲಿ ಅಟ್ಯಾಕ್ ಮಾಡಿದ ಪ್ರಮುಖ ಆರೋಪಿ ಶೋಯಬ್ ಮಲ್ಲಿಕ್ ಅಲಿಯಾಸ್ ಅಂಡ್ರೆಲಾ ಸಾರ್ವಜನಿಕರಿಂದ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂತರ ಆತನನ್ನು ಬಂಧನಕ್ಕೆ ಒಳಪಡಿಸಲಾಯಿತು.
ಇನ್ನು ಈತನ ಜೊತೆಗಿದ್ದ ಸಹಚರರಾದ ಆರೋಪಿಗಳ ಹೆಸರು ಜುನೇದ್ ,ರುಮಾನ್, ನವಾಜ್ ಅಹ್ಮದ್, ಮಹಮ್ಮದ್ ಸಾಹಿಲ್ ಆಲಿಯಾಸ್ ಬಚ್ಚಾ, ತಂಜಿಂ ಉಲ್ಲಾ ರನ್ನು ಬಂಧಿಸಿ ಪೊಲೀಸರು ಜೈಲಿಗೆಟ್ಟಿದ್ದರು.

ಕೊಲೆ ಆರೋಪಿ ಅಕ್ಬರ್ ಗೆ ಗುಂಡೆಟ್ಟು ಹೊಡೆದಿದ್ದ ಪೊಲೀಸರು
ಅಮ್ಜದ್ ಖಾನ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ರೌಡಿಶೀಟರ್ ಅಕ್ಬರ್ ಎಂಬಾತನ ಮೇಲೆ ಪೊಲೀಸ್ ಫೈರಿಂಗ್ ನಡೆಸಿದ್ದರು ಶಿವಮೊಗ್ಗದ ಪುರಲೆ ಬಳಿಯ ಬೈಪಾಸ್ ರಿಂಗ್ ರೋಡ್ ನಲ್ಲಿ ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಕ್ಬರ್ ಪೊಲೀಸ್ ಪೇದೆ ಚಂದ್ರ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದ. ದೊಡ್ಡಪೇಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ರಿಂದ ಆರೋಪಿ ಕಾಲಿಗೆ ಗುಂಡೇಟು ಹೊಡೆದಿದ್ದರು.
ಗಾಯಗೊಂಡ ಆರೋಪಿ ಅಕ್ಬರ್ ಮತ್ತು ಪೊಲೀಸ್ ಪೇದೆ ಚಂದ್ರ ನಾಯ್ಕ್ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇವೆಲ್ಲದರ ಮಧ್ಯೆ ಅಮ್ಜದ್ ಕೊಲೆ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಇಷ್ಟಕ್ಕೂ ಮೂಲ ಒಂದರ ಪ್ರಕಾರ ಸೆಟಲ್ಮೆಂಟ್ ಗೆ ಸಂಬಂಧಿಸಿದಂತೆ ಹೋಗಿದ್ದ ಅಮ್ಜದ್ ಖಾನ್ ಗೆ ಅದು ರೌಡಿ ಫೌಝಾನ್ ಸಂಬಂಧಿಸಿದ ಎಂಬ ಮಾಹಿತಿ ಗೊತ್ತಾದ ಮೇಲೂ ಸೆಟಲ್ಮೆಂಟ್ ಮಾಡಿಸಿದ್ದ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಪೌಝಾನ್ ಸಹಚರ ಶೋಯಬ್ ಮಲಿಕ್ ಗೆ ಕರೆ ಮಾಡಿದ ಸಂದರ್ಭದಲ್ಲಿ ಆತನ ತಾಯಿಯ ಬಗ್ಗೆ ಕೂಡ ಬೈದಿದ್ದು ಅದೇ ದ್ವೇಷಕ್ಕೆ ಕಾರಣವಾಯಿತು ಎನ್ನಲಾಗಿದೆ. ಆದರೆ ಕೇವಲ ಇದೊಂದೇ ಪ್ರಕರಣವಲ್ಲ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದು ನಟೋರಿಯಸ್ ರೌಡಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಅದೇ ಕಾರಣಕ್ಕೆ ಒಳಗೊಳಗೆ ಕತ್ತಿ ಮಸಿಯುತ್ತಿದ್ದವರೆಲ್ಲ ಒಗ್ಗೂಡಿ ಸ್ಕೆಚ್ ಹಾಕಿ ಕುಂಟು ನೆಪ ಒಂದಕ್ಕೆ ಇನ್ನು ಮೀಸೆ ಚಿಗುರದ ಪುಡಿ ಹುಡುಗರ ಕೈಯಲ್ಲಿ ಅಮ್ಜದ್ ಖಾನ್ ಮರ್ಡರ್ ಮಾಡಿಸಿಬಿಟ್ಟಿದ್ದರು.
ಆದರೆ ಪೊಲೀಸರ ತನಿಖೆ ಮಾತ್ರ ಆಳದಲ್ಲಿ ಇಳಿಯದೇ ಸಾಕಷ್ಟು ಭಯಾನಕ ಸತ್ಯಗಳು ಹೊರಬೀಳಲಿಲ್ಲ ಎಂಬುದು ಮಾತ್ರ ಅಷ್ಟೇ ಸತ್ಯ.



