ಶಿವಮೊಗ್ಗ, ಪೂಜಾ ಗೌಡ ಎನ್ನುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಗರದ ಸೇಲ್ಸ್ಮನ್ ಒಬ್ಬರನ್ನು ಸಂಪರ್ಕಿಸಿದ ಆನ್ಲೈನ್ ವಂಚಕರು ವೆಬ್ ಲಿಂಕ್ ಕಳುಹಿಸಿ ಅದರ ಮೂಲಕ, ಒಟ್ಟು ೫೨, ೯೩,೬೪೬ ನ್ನು ಹಾಕಿಸಿಕೊಂಡು ವಂಚಿಸಿದ ಘಟನೆ ವರದಿಯಾಗಿದೆ.
ತಾವು ಕಳುಹಿಸಿದ್ದ ಲಿಂಕ್ ಓಪನ್ ಮಾಡಿಸಿ ಅಲ್ಲಿಂದ ಆನ್ಲೈನ್ ಸ್ಟೋರ್ ಓಪನ್ ಮಾಡಿಸಿದ್ದರು. ಅದರಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ ಪಿಕಪ್ ಮಾಡುವ ಕೆಲಸ ನೀಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು.
ಇದನ್ನು ನಂಬಿದ ಸೇಲ್ಸ್ಮನ್ ವಿವಿಧ ಹಂತಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಬಂದಂತೆ ತೋರಿಸಿದ್ದಾರೆ. ನಂತರ ಆ ಹಣವನ್ನು ವಿತ್ಡ್ರಾ ಮಾಡಲು ಹೋದಾಗ ತಾಂತ್ರಿಕ ಕಾರಣ ನೀಡಿ ತಡೆಹಿಡಿದಿದ್ದರು.
ತೆರಿಗೆ ಹಾಗೂ ಪೆನಾಲ್ಟಿ ಹೆಸರಿನಲ್ಲಿ ಮತ್ತೆ ಹಣ ಹಾಕಿಸಿಕೊಂಡ ಆರೋಪಿಗಳು ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು.
ಇತ್ತ ಸೇಲ್ಸ್ಮನ್ ಹಣ ವಾಪಸ್ ಬರಬಹುದು ಎಂದು ಕಾಯುತ್ತಿದ್ದರೂ ಬಾರದಿದ್ದಾಗ ತಾನು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದಿದೆ.
ಘಟನೆ ಸಂಬಂಧ ಸೆಲ್ಸ್ಮನ್ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.



