ಚಿಕ್ಕಮಗಳೂರು | ಪತ್ನಿಯ ಶೀಲ ಶಂಕಿಸಿ ಪತಿಯಿಂದ ಪತ್ನಿ ಹತ್ಯೆ

ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಪತಿ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ವಿವರ :

ಬೀರೂರು ಪಟ್ಟಣದ ಕ್ಯಾಂಪ್ ಚೌಡೇಶ್ವರಿ ದೇಗುಲ ಬಳಿ ನಿನ್ನೆ ದಿವಸ ರಾತ್ರಿ ಘಟನೆ ನಡೆದಿದ್ದು, ಪತ್ನಿಯ ವೇಲ್ ನಿಂದ ಪತ್ನಿಯ ಕುತ್ತಿಗೆ ಬಿಗಿದು ಪತಿ ಪತ್ನಿಯನ್ನ ಕೊಲೆ ಮಾಡಿದ್ದಾಗಿ ಮಾಹಿತಿಯಾಗಿದೆ.

ಹೊಸದುರ್ಗ ಮೂಲದ ರಂಗನಾಥ್ (36) ಬಿರೂರಿನಲ್ಲಿ ಪತ್ನಿ ಜೊತೆ ವಾಸವಿದ್ದ, ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಪತ್ನಿ ಮಮತಾ (33)ಮೃತ ದುರ್ದೈವಿಯಾಗಿದ್ದಾರೆ.

ಸ್ಥಳಕ್ಕೆ ಬೀರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author