ಶಿವಮೊಗ್ಗ | ಭದ್ರಾವತಿ ತಹಸೀಲ್ದಾರ್ ಕಿರುಕುಳಕ್ಕೆ ಬೇಸತ್ತು ವಿ.ಎ. ಆತ್ಮಹತ್ಯೆ ಪತ್ರ ವೈರಲ್ ; ತಹಸೀಲ್ದಾರ್ ಪರವಾಗಿ ನಡೆಯಿತು ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಗರದಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಹಶೀಲ್ದಾ‌ರ್ ನೀಡುತ್ತಿರುವ ಮಾನಸಿಕ ಕಿರುಕುಳ ಹಾಗೂ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿರುವುದು ಈಗ ಭದ್ರಾವತಿ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಅಗರದಹಳ್ಳಿ ಗ್ರಾಮ ಲೆಕ್ಕಾಧಿಕಾರಿ (Village Accountant) ಅಭಿಷೇಕ್ ಎಂಬುವವರು ಈ ಆತಂಕಕಾರಿ ಪತ್ರವನ್ನು ಬರೆದಿದ್ದಾರೆ.

ಭದ್ರಾವತಿ ತಹಶೀಲ್ದಾ‌ರ್ ಪರಸಪ್ಪ ಕುರಬರ್ ಅವರು ತಮ್ಮ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ನೇರವಾಗಿ ಆರೋಪಿಸಲಾಗಿದೆ.

ಅಗರದಹಳ್ಳಿಯ 2 2 56, 49 8 508 ಪೌತಿ ಖಾತೆ ಮಾಡಿಸುವ ಜವಾಬ್ದಾರಿಯನ್ನು ತಹಶೀಲ್ದಾ‌ರ್ ಅವರು ವಹಿಸಿಕೊಂಡಿದ್ದು, ಆ ಕೆಲಸಕ್ಕಾಗಿ ತಮ್ಮ ಮೇಲೆ ನಿರಂತರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ವಿಎ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಕಳೆದ 21 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಯಾವುದೇ ಲೋಪವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಬಗ್ಗೆ ತಹಶೀಲ್ದಾ‌ರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಅವರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ.

ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ಹೃದಯವಿದ್ರಾವಕವಾಗಿ ಬರೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌:

ವಿಎ ಅಭಿಷೇಕ್ ಬರೆದಿರುವ ಈ ಪತ್ರವನ್ನು ಭದ್ರಾವತಿಯ ಅಜಿತ್ ಗೌಡ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಭದ್ರಾವತಿಯಲ್ಲಿ ಈಗಾಗಲೇ ಮರಳು ಮತ್ತು ಇಸ್ಪೀಟು ದಂಧೆಯ ಕುರಿತಾದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಘಟನೆ ಈಗ ಜಿಲ್ಲಾಡಳಿತದ ಗಮನ ಸೆಳೆದಿದೆ.

ಪತ್ರ ವೈರಲ್ ಆಗಿ ಗದ್ದಲ ಸೃಷ್ಟಿಸಿದ ಬೆನ್ನಲ್ಲೇ, ತಹಶೀಲ್ದಾ‌ರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ನಡುವೆ ರಾಜಿಯಾಗಿದೆ ಎಂಬ ಮಾಹಿತಿಯಾಗಿದೆ.

ಭದ್ರಾವತಿಯಲ್ಲೊಂದು ಈ ಸಂಬಂಧ ದೊಡ್ಡ ಹೈ ಡ್ರಾಮಾ ಕಥೆ ನಡೆದಿದೆ.

ತಹಶೀಲ್ದಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಗ್ರಾಮ ಆಡಳಿತಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಸೇವೆಯಿಂದ ವಜಗೊಳಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಗ್ರಾಮ ಆಡಳಿತಧಿಕಾರಿ ಆಡಳಿತಧಿಕಾರಿ ಆರ್ ಜಿ ಅಭಿಷೇಕ್ ತಹಸಿಲ್ದಾರ್ ಪರಸಪ್ಪ ಕುರುಬರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕೆಲಸದ ಒತ್ತಡ ಹೇರಿ ಕರ್ತವ್ಯ ನಿರ್ವಹಿಸಲು ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಎಂದು ಅಭಿಷೇಕ್ ಆರೋಪಿಸಿ ಸಿದ್ದಾಪುರ ಚಾನೆಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿ ಪತ್ರ ಬರೆದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾಲೂಕು ಕಚೇರಿಯಲ್ಲಿ ಗ್ರಾಮಾ ಅಡಳಿತಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಗ್ರಾಮಾ ಅಡಳಿತಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೀಶ್ ನಾಯಕ ರವರು ಮುನ್ಸೂಚನೆ ಇಲ್ಲದೆ ಸಭೆ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿ ಯೋಗೀಶ್ ನಾಯಕರ ವಿರುದ್ಧ ಕ್ರಮ ಜರಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇಣ ಮನವಿ ಮಾಡಿದ್ದಾರೆ.

ಆಡಳಿತ ನಡೆಸುತ್ತಿರುವ ತಹಶೀಲ್ದಾರ್ ಪರಸಪ್ಪ ಕುರುಬರ ಹಲವು ವರ್ಷಗಳ ನಂತರ ಭದ್ರಾವತಿಗೆ ಉತ್ತಮ ಸೇವೆ ನೀಡಲು ಆಗಮಿಸಿರುವ ದಕ್ಷ ಅಧಿಕಾರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇಂತಹ ಅಧಿಕಾರಿಗಳನ್ನು ಭದ್ರಾವತಿಯಲ್ಲಿ ಕೇವಲ ರಾಜಕೀಯ ಹೋರಾಟಗಳಲ್ಲ, ಉಳಿಸಿಕೊಳ್ಳಲು ಭದ್ರಾವತಿಯಲ್ಲಿ ಹೋರಾಟಕ್ಕೆ ಸದಾ ಸಿದ್ಧವಿರುವುದಾಗಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನಾ ಭಾಷಣದಲ್ಲಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮುರುಗೇಶ್ ಸೈಯದ್ ರಿಯಾಜ್ ಕುಬೇರಪ್ಪ ನದೀಮ್ ಭಾಷಾ ನಾಗರಾಜರಾವ್ ಅಂಬೋರೆ ಜನ್ನಾಪುರ ಮಂಜುನಾಥ್ ಜಿಂಕ್ ಲೈನ್ ಮಣಿ ಸುರೇಶ್ ಶಶಿಕುಮಾರ್ ಸಂತೋಷ್ ಕುಪೇಂದ್ರ ಎಸ್ ಶಿವಪ್ಪ ಭಾಷಾ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪ ತಹಸೀಲ್ದಾರ್ ಮಂಜ ನಾಯಕ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

Author