ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ, ಆನಂದಪುರದ, ಎಡೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾದಿಬೀಸು ಗ್ರಾಮದ ಕಲ್ಕೆರೆಯ ಮಧು ಎಂ ಆರ್ ಗೆ 2025 – 26 ನೇ ಸಾಲಿನ ಶೌರ್ಯ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಲ್ಕೆರೆ ಗ್ರಾಮದ ರಾಮಚಂದ್ರ ಮತ್ತು ಸುಶೀಲಾ ರವರ ಮಗನಾದ ಎಂ. ಆರ್. ಮಧು ಎಡೆ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಭಾನುವಾರ ಶಾಲೆ ರಜಾ ಇದ್ದ ಸಂದರ್ಭದಲ್ಲಿ ತನ್ನ ಮನೆಯ ಎದುರಿನ ಗದ್ದೆಯಲ್ಲಿ ಬತ್ತದ ಹುಲ್ಲು ಪಿಂಡಿ ಕಟ್ಟುವ ಯಂತ್ರದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ಮದನ್ ಎಂಬುವರ ಕೈಯು ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಆತ ಜೋರಾಗಿ ಕೂಗಿ ಕೊಳ್ಳುತ್ತಿದ್ದ.
ಆ ಸಂದರ್ಭದಲ್ಲಿ ಮಧು ಎಮ್ ಆರ್ ತಕ್ಷಣ ಸ್ಥಳಕ್ಕೆ ಬಂದು ಟ್ಯಾಕ್ಟರ್ ಮಿಷನ್ ಆಫ್ ಮಾಡುವ ಮೂಲಕ ಯಂತ್ರದ ಒಳಗೆ ಸಿಲುಕಿದ ಕೈಯನ್ನ ಹೊರೆ ತೆಗೆಯುವುದರೊಂದಿಗೆ ಚಾಲಕನ ಪ್ರಾಣ ರಕ್ಷಣೆ ಮಾಡಿರುತ್ತಾನೆ.
ಸಮಯ ಪ್ರಜ್ಞೆಯೊಂದಿಗೆ ಚಾಲಕನ ಪ್ರಾಣ ಕಾಪಾಡಿದ ಮಧುಗೆ 2025-26 ನೇ ಸಾಲಿನ ಶೌರ್ಯ ಪ್ರಶಸ್ತಿ ಲಭಿಸುತ್ತಿರುವುದಕ್ಕೆ ಇಡೀ ಗ್ರಾಮವೇ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಿದ್ಯಾರ್ಥಿಯು 8ನೇ ತರಗತಿಯನ್ನು ಸೊರಬ ತಾಲೂಕಿನ ನಿಸರಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.



