ಹಾವೇರಿ | ಶಾಲೆ ಫೀಸ್ ಕಟ್ಟಿ ವಿದ್ಯೆ ಕಲಿಸಿದ ಗುರುವಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ

ಅವರು ನನಗೆ ಕೇವಲ ಶಿಕ್ಷಕರಲ್ಲ. ನಾನು ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವವರೆಗೂ ತಂದೆಯಂತೆ ನನ್ನ ಜೊತೆ ನಿಂತಿದ್ದರು. ನನ್ನ ಜೀವನವನ್ನು ಬದಲಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಬೇಕೆಂಬ ಆಸೆ ಇತ್ತು. ಈ ಕಾರು ನನ್ನ ಜೀವಮಾನವಿಡೀ ಇರುವ ಗೌರವ ಮತ್ತು ಕೃತಜ್ಞತೆಯ ಒಂದು ಸಣ್ಣ ಸಂಕೇತ ಮಾತ್ರ ಎಂದು ನವೀನ್ ಹೇಳುತ್ತಾರೆ. ಹಾನಗಲ್ ಕುಮಾರೇಶ್ವರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಈ ಭಾವನಾತ್ಮಕ ಕ್ಷಣ ಅನಾವರಣಗೊಂಡಿತು. ಹೊಸ ಕಾರನ್ನು ವೇದಿಕೆಯ ಬಳಿ ತಂದು ಅದರ ಕೀಗಳನ್ನು […]

Continue Reading

ಸಿಇಟಿ ಪರೀಕ್ಷೆಯಲ್ಲಿ ಅವಾಂತರ : ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಸಿಬ್ಬಂದಿ

ಈ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ. ಸುಪ್ರಿತ್ ಜನಿವಾರವನ್ನು ತೆಗೆದು ತನ್ನ ಬಳಿ ಇಟ್ಟುಕೊಳ್ಳಲು ಅನುಮತಿ ಕೇಳಿದಾಗ, ಅದನ್ನೂ ಅಧಿಕಾರಿಗಳು ನಿರಾಕರಿಸಿದರೆಂದು ಆರೋಪಿಸಲಾಗಿದೆ.ನಂತರ ಸ್ಥಳಕ್ಕೆ ಬಂದ ಮಹಿಳಾ ಸಿಬ್ಬಂದಿಯೊಬ್ಬರು ಕತ್ತರಿ ಬಳಸಿ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಡೆ ವಿದ್ಯಾರ್ಥಿಗೆ ತೀವ್ರ ಮಾನಸಿಕ ಆಘಾತ ಉಂಟುಮಾಡಿದೆ.ಈ ಅವಮಾನಕರ ಪರಿಸ್ಥಿತಿಯ ನಡುವೆಯೇ ಸುಪ್ರಿತ್ ಪರೀಕ್ಷೆಯನ್ನು ಬರೆದಿದ್ದಾನೆ. ಪರೀಕ್ಷೆ ಮುಗಿದ ನಂತರ, ಕಸದ ಬುಟ್ಟಿಯಲ್ಲಿ ಹಾಕಲಾಗಿದ್ದ ಜನಿವಾರವನ್ನು ಮರಳಿ ತೆಗೆದುಕೊಂಡು ಮನೆಗೆ ಹೋಗಿದ್ದಾನೆ.ಬಳಿಕ […]

Continue Reading

ಶಿವಮೊಗ್ಗ | ಗಾಂಜಾ ಸೇವಿಸಿದ್ದ ಕಾಲೇಜು ವಿದ್ಯಾರ್ಥಿ ಬಂಧನ

ಆಸ್ಪತ್ರೆಯಿಂದ ಬಂದ ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿನೋಬಾನಗರ ಪೊಲೀಸರು ಆತನ ವಿರುದ್ಧ ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

ಹೊಸನಗರ | ಆಕಸ್ಮಿಕವಾಗಿ ಕೆರೆಗೆ ಬಿದ್ದು ವಿದ್ಯಾರ್ಥಿ ದುರ್ಮರಣ

ನೀರಿಗೆ ಬಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಗಮನಿಸಿದ ಸ್ಥಳೀಯರು ಮತ್ತು ಸ್ನೇಹಿತರು ಆತನನ್ನು ರಕ್ಷಿಸಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಆದರೆ, ಆಸ್ಪತ್ರೆಗೆ ದಾಖಲಿಸುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

ದಾವಣಗೆರೆ | ಎಸ್​ಎಸ್​ಎಲ್​ಸಿ ಓದುತ್ತಿರುವ ಮಗಳ ಪುಸ್ತಕಗಳನ್ನು ಸುಟ್ಟಾಕಿದ ತಂದೆ

ಈ ನಡುವೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆರುಂಡಿಯಲ್ಲಿ ಮದ್ಯ ವ್ಯಸನಿಯಾಗಿರುವ ತಂದೆ ಮಗಳ ಪುಸ್ತಕಗಳಿಗೆ ಬೆಂಕಿ ಹಚ್ಚಿ, ಅಮಾನವೀಯತೆ ಪ್ರದರ್ಶಿಸಿದ್ದಾನೆ. ಆತನ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರುಂಡಿ ಗ್ರಾಮದ ನಿವಾಸಿ ತಂದೆ (ಹೆಸರು ಬೇಡ) ಮದ್ಯಪಾನದ ವ್ಯಸನಕ್ಕೆ ಜೋತುಬಿದ್ದು ದಿನನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅಲ್ಲದೆ ಪುತ್ರಿ (ಅಪ್ರಾಪ್ತ ಬಾಲಕಿ)ಗೂ ಶಾಲೆಗೆ ಹೋಗಬೇಡ ಎಂದು ಕಿರಿಕ್ ಮಾಡಿದ್ದಾನೆ.ಇದನ್ನು ಸಹಿಸಿಕೊಳ್ಳದ ಶಾಲಾ ಬಾಲಕಿ, ತನ್ನ ತಂದೆ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ತನ್ನನ್ನು ಶಾಲೆಗೂ […]

Continue Reading

ಶಿವಮೊಗ್ಗ | ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮೂಲತಃ ತುಮಕೂರಿನ ಮಧುಗಿರಿಯವನಾದ ಸಂದೀಪ್ ರಾಜ್ ಎಂಬಿಬಿಎಸ್ ಮುಗಿಸಿ ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯಾಗಿದೆ. ಈ ಸಂಬಂಧ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Continue Reading

ಚಿಕ್ಕಮಗಳೂರು | ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ಪ್ರಾಂಶುಪಾಲರಿಂದ ಥಳಿತ

ವಿಷಯ ತಿಳಿಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಮತ್ತು ಮಾಲಾಧಾರಿಗಳು ಶಾಲೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಜಾಬ್ ವಿಚಾರದಲ್ಲಿ ಕಾನೂನು ಹೇಗಿದೆಯೋ ಇಲ್ಲಿಯೂ ಹಾಗೆಯೇ ವರ್ತಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸರ್ಕಾರದ ಆದೇಶ ಇಲ್ಲದಿದ್ದರೂ ನಿಮ್ಮ ಹಬ್ಬಕ್ಕೆ 15 ದಿನ ರಜೆ ನೀಡುವ ನೀವು ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಬಾಲಕನಿಗೆ ರಜೆ ನೀಡಲು ಏಕೆ ಹಿಂದೇಟು ಹಾಕುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಧಾರ್ಮಿಕ ಭಾವನೆಗೆ […]

Continue Reading

ಶಿವಮೊಗ್ಗ | ಸಮಯ ಪ್ರಜ್ಞೆಯಿಂದ ಚಾಲಕನ ಪ್ರಾಣ ಕಾಪಾಡಿದ, ಮಧು.ಎಂ.ಆರ್ ವಿದ್ಯಾರ್ಥಿಗೆ ಶೌರ್ಯ ಪ್ರಶಸ್ತಿ

ಆ ಸಂದರ್ಭದಲ್ಲಿ ಮಧು ಎಮ್ ಆರ್ ತಕ್ಷಣ ಸ್ಥಳಕ್ಕೆ ಬಂದು ಟ್ಯಾಕ್ಟರ್ ಮಿಷನ್ ಆಫ್ ಮಾಡುವ ಮೂಲಕ ಯಂತ್ರದ ಒಳಗೆ ಸಿಲುಕಿದ ಕೈಯನ್ನ ಹೊರೆ ತೆಗೆಯುವುದರೊಂದಿಗೆ ಚಾಲಕನ ಪ್ರಾಣ ರಕ್ಷಣೆ ಮಾಡಿರುತ್ತಾನೆ. ಸಮಯ ಪ್ರಜ್ಞೆಯೊಂದಿಗೆ ಚಾಲಕನ ಪ್ರಾಣ ಕಾಪಾಡಿದ ಮಧುಗೆ 2025-26 ನೇ ಸಾಲಿನ ಶೌರ್ಯ ಪ್ರಶಸ್ತಿ ಲಭಿಸುತ್ತಿರುವುದಕ್ಕೆ ಇಡೀ ಗ್ರಾಮವೇ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿದ್ಯಾರ್ಥಿಯು 8ನೇ ತರಗತಿಯನ್ನು ಸೊರಬ ತಾಲೂಕಿನ ನಿಸರಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Continue Reading