ಶಿವಮೊಗ್ಗ | ಗಾಂಜಾ ಮಾರಾಟ ; ಇಬ್ಬರ ಬಂಧನ

ಶಿವಮೊಗ್ಗ

ಶಿವಮೊಗ್ಗದ ಲಕ್ಷ್ಮೀಪುರ ಮತ್ತು ಶ್ರೀರಾಮ್ ಪುರದ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಇಬ್ಬರು ಯುವಕರು ಈ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, ತುಂಗ ನಗರ ಪಿಎಸ್ಐ ರಘುವೀರ್ ಅವರು ಮೇಲಾಧಿಕಾರಿಗಳ ಅನುಮತಿ ಮೇರೆಗೆ, ಕ್ರೈಂ ಪೊಲೀಸ್ ಕಿರಣ್ ಮೋರೆ, ಅರುಣ್ ಕುಮಾರ್, ನಾಗಪ್ಪ ಅಡಿವೆಪ್ಪ, ರಂಗನಾಥ್, ಸಂತೋಷ್, ಲೋಕೇಶ್ ರವನ್ನ ಒಳಗೊಂಡ ತಂಡವನ್ನ ರಚಿಸಿಕೊಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ.

ರಸ್ತೆ ಬದಿ ನಿಲ್ಲಿಸಿಕೊಂಡು ಗಾಂಜಾದ ಮಾರಾಟ ಮಾಡುತ್ತಿರುವುದು ತಿಳಿದುಬಂದಿದ್ದು ಪೊಲೀಸರು ಸ್ಕಾರ್ಪಿಯೋ ವಾಹನವನ್ನ‌ ಸೀಜ್ ಮಾಡಿದ್ದಾರೆ.ಈ ಸಂದರ್ಭದಲ್ಲಿ 1.420 ಕೆಜಿ ಗಾಂಜಾ ಪತ್ತೆಯಾಗಿದೆ.

ಪ್ರಕರಣದಲ್ಲಿ ಓಡಿಹೋಗಲು ಯತ್ನಿಸಿದ್ದ ಇಬ್ಬರನ್ನ ಬಂಧಿಸಿದ್ದಾರೆ. ಟಿಪ್ಪುನಗರದ ನಿವಾಸಿ ಶಾಹೀದ್ (37) ಮತ್ತು ಸೂಳೆಬೈಲಿನ ನಿವಾಸಿ ಜಾಫರ್(23) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

Author