ಶಿವಮೊಗ್ಗ ತೀರ್ಥಹಳ್ಳಿ ಸಮೀಪ ಭಾರತೀಪುರ ಭುವನೇಶ್ವರಿ ದೇವಸ್ಥಾನ ಎದುರಿನ ತಿರುವುನಲ್ಲಿ ಕೆ ಎ 19 ಎಫ್ 3539 KSRTC ಬಸ್ ಮಂಗಳೂರಿಂದ ರಾಯಚೂರು ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಸ್ವಿಫ್ಟ್ Dezire ಕಾರು, ರಸ್ತೆಯಲ್ಲಿ ಚಲಿಸುತ್ತಿದ್ದ ಮಹಿಂದ್ರಾ ಟೆಂಪೋ ಹಿಂದಕ್ಕೆ ಹಾಕಿ ಮುಂದೆ ಹೋಗುವ ಸಂದರ್ಭದಲ್ಲಿ ಅತಿವೇಗ ಹಾಗೂ ಅಜಾಗುರೂಕತೆಯಿಂದ ಚಾಲನೆ ಮಾಡುವ ಮೂಲಕ ಎದುರಿಗೆ ಬರುತ್ತಿದ್ದ KSRTC ಬಸ್ ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಫಾತಿಮಾ ಬಿ(70),ಹಾಗೂ ರಿಹಾನ್ (14)ಸ್ಥಳದಲ್ಲೇ ಮೃತಪಟ್ಟರೆ, ರಾಹಿಲ್ (9)ಝಯಾನ್ (12) ಇವರುಗಳು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪ್ಪಟ್ಟಿರುತ್ತಾರೆ.ಒಟ್ಟು 4 ಜನರು ಮೃತಾರಾಗಿದ್ದಾರೆ.
ಕಾರಿನಲ್ಲಿದ್ದ ಶ್ರೀಮತಿ ಝರಿನ (35) ಕುಮಾರಿ ರಿಹಾ (12)ಹಾಗೂ ಆರೋಪಿತ ಕಾರು ಚಾಲಕ ಜಯಾನ್ ಗೂ ಸಹ ಗಾಯಗಳಾಗಿದೆ. ಕಾರಿನಲ್ಲಿದ್ದವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಮೆಣಸೆ ಗ್ರಾಮದವರಾಗಿದ್ದಾರೆ.
ಕಾರು ಚಾಲಕನ ಅಜಾಗುರುಕ ಹಾಗೂ ಅತಿವೇಗ ಚಾಲನೆ ಸಂಬಂಧ, KSRTC ಚಾಲಕ ದೂರು ನೀಡಿದ್ದು ಈ ಸಂಬಂಧ ಕಾರು ಚಾಲಕನ ಮೇಲೆ ಬಿ ಎನ್ ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಮುಂದಿನ ಕ್ರಮ ಜರುಗಿಸುವಂತೆ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಹಾಗೂ ಸೂಚನೆ ನೀಡಿದ್ದಾರೆ.



