ಶಿವಮೊಗ್ಗ,ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇಧಿಕೆ (CRPF ) ಶಿವಮೊಗ್ಗ ಶಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ದಲಿತ ವಿರೋಧಿ ನಿಲುವು ಕುರಿತು ಮನವಿ ಪತ್ರವನ್ನು ವೃತ್ತನಿರೀಕ್ಷಕರುಕೊಟೆ ಪೊಲೀಸ್ ಠಾಣೆ ಶಿವಮೊಗ್ಗ ಇವರಿಗೆ ಮನವಿ ಸಲ್ಲಿಸಿ ಈ ಕೆಳಗಿನ ಮಾಹಿತಿಯನ್ನ ಮನವಿ ಪಾತ್ರದಲ್ಲಿ ತಿಳಿಸಿದ್ದಾರೆ.
ಅದೇನಂದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕ ಮಹನೀಯರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಾಪಿಸಿದ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ ಯಾಗಿದೆ. ಆದರೆ ಪ್ರಸ್ತುತ ಆಡಳಿತ ಮಂಡಳಿ ಮೇಲ್ವಾತಿಗೆ ಸೇರಿದ ನೌಕರರಿಗೆ ಮನ್ನಣೆಯನ್ನು ನೀಡುತ್ತಾ ಬಂದಿದ್ದು ಆನೇಕ ದಲಿತ ಮತ್ತು ಹಿಂದುಳಿದ ವರ್ಗದ ನೌಕರರನ್ನು ಶೋಷಣೆ ಮಾಡುತ್ತಲೇ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ದಲಿತರನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಉದಾಹರಣೆ ಎಂಬಂತೆ ಇತ್ತೀಚಿಗೆ ಬಿ ಆರ್ ಪ್ರಾಜೆಕ್ಟ್ ನಲ್ಲಿರುವ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ (ಇಂಗ್ಲೀಷ್) ಉಪನ್ಯಾಸಕಿಯ ಮೇಲೆ ಆದಂತಹ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದೊಡ್ಡ ಸಾಕ್ಷಿಯಾಗಿದೆ ಎಂದು ಮಾನವಿಯಲ್ಲಿ ಉಲ್ಲೇಖಸಿದ್ದಾರೆ.
ಭದ್ರಾವತಿ ಬಿ.ಆರ್ ಪ್ರಾಜೆಕ್ಟ್ ನ ಶಾಂತಿನಗರದಲ್ಲಿರುವ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸಂತ್ರಸ್ಥೆಯು ಕೆಲಸಮಾಡಿಕೊಂಡಿದ್ದು ಅದೇ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾದ ಶ್ರೀಪಾದ್ ಹಗ್ಡೆ ರವರು ಪರಿಶಿಷ್ಟಜಾತಿಗೆ ಸೇರಿದ ಸಂತ್ರಸ್ಥೆಯ ಮೇಲೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ ಎಂಬ ಆರೋಪವಾಗಿದೆ.
ಅಲ್ಲದೆ ಅಲ್ಲಿನ ಇತರೇ ಸಿಬ್ಬಂದಿಗಳಾದ ಮಂಗಳ ಮತ್ತು ವಸುಂಧರ ರವರು ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುತ್ತಾರೆ. ಈ ವಿಷಯವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಆದರೂ ಕೂಡ ಇಲ್ಲಿಯವರೆಗೂ ಪೊಲೀಸರು ಆರೋಪಿಗಳಿಗೆ ಬಂದಿಸಿರುವುದಿಲ್ಲ, ಪೊಲೀಸರು ಆಡಳಿತ ಬಂಡಳಿಯವರೊಂದಿಗೆ ಶಾಮೀಲಾಗಿರುವ ಶಂಖೆ ಮೂಡಿರುತ್ತದೆ ಎಂದು ಸಂಘಟನೆ ಶಂಕೆ ವ್ಯಕ್ತಪಡಿಸಿದೆ.
ಜಿಲ್ಲಾ ರಕ್ಷಾಣಾಧಿಕಾರಿಗಳು ಸಂತ್ರಸ್ಥೆಗೆ ರಕ್ಷಣೆ ನೀಡಲು ಮುಂದಾಗಬೇಕು. ಈ ಮಧ್ಯೆ ಆಡಳಿತ ಮಂಡಳಿ ಸಂತ್ರಸ್ಥೆಯನ್ನು ಕೆಲಸದಿಂದ ತೆಗೆದುಹಾಕಿರುತ್ತಾರೆ ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಇದರಿಂದ ಪರಿಶಿಷ್ಟಜಾತಿಯ ಸಮುದಾಯಗಳಿಗೆ ರಕ್ಷಣೆ ಇಲ್ಲದಂತಾಗಿದೆ ಅಲ್ಲದೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಆಡಳಿತ ಮಂಡಳಿಯು ದಲಿತ ವಿರೋದಿ ನಿಲುವರನ್ನು ಮೌನವಾಗಿ ವ್ಯಕ್ತಪಡಿಸುತ್ತಿದೆ.

ಆದ್ದರಿಂದ ಸಂತ್ರಸ್ಥೆಯನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ರದ್ದು ಪಡಿಸಿ ಆಡಳಿತ ಮಂಡಳಿಯು ತಕ್ಷಣವೇ ಜಾರಿಗೆ ಬರುವಂತೆ ಸಂತ್ರಸ್ಥಯನ್ನು ವೃತ್ತಿಯಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸುತ್ತೇವೆ.ಒಂದು ವೇಳೆ ಆಡಳಿತ ಮಂಡಳಿಯು ಸಂತ್ರಸ್ಥಯನ್ನು ಕಲಸಕ್ಕೆ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ವಿರುದ್ಧ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸುತ್ತೇವೆ ಎಂದಿದ್ದಾರೆ.
ರಕ್ಷಣಾ ಇಲಾಖೆಯವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.



