ಶಿವಮೊಗ್ಗ | ಭೀಕರ ಅಪಘಾತದಲ್ಲಿ ಬೈಕ್ ಸವಾರ ದುರ್ಮರಣ

ಶಿವಮೊಗ್ಗ

ಶಿವಮೊಗ್ಗದ ವಿದ್ಯಾನಗರ ಫ್ಲೈಓವರ್ ಬಳಿ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಲಾರಿಯ ಹಿಂಬದಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.ಬೈಕ್ ಸವಾರ ಚನ್ನಗಿರಿ ಮೂಲದ ರಾಘವೇಂದ್ರ ಎಂದು ತಿಳಿದುಬಂದಿದೆ.

ಪೂರ್ವ ಟ್ರಾಫಿಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವಿದ್ಯಾನಗರ ಫ್ಲೈಓವರ್ ಬಳಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ನಾಗರಿಕರು ಹಾಗೂ ಕರವೇ ಸ್ವಾಭಿಮಾನಿ ಬಣ ಬಹಳ ಹಿಂದೆಯೇ ಒತ್ತಾಯ ಮಾಡಿದ್ದರು, ಇಲ್ಲಿವರೆಗೂ ಇಲ್ಲಿಗೆ ಸಿಗ್ನಲ್ ಲೈಟ್ ಅಳವಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಜೊತೆಗೆ ನಿರಂತರವಾಗಿ ಇಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಫ್ಲೈಓವರ್ ಕೆಳಗೆ ನಿಂತು ವಾಹನಗಳಿಗೆ ದಂಡ ವಿಧಿಸುತ್ತಿರುತ್ತಾರೆ. ಪೊಲೀಸರಿಗೆ ಹೆದರಿ ಬಹಳಷ್ಟು ವಾಹನಸವಾರರು ರಸ್ತೆಯ ವಿರುದ್ದ ದಿಕ್ಕಿನಲ್ಲಿ ಬೈಕ್ ಹಾಗೂ ಇನ್ನಿತರೆ ವಾಹನ ಸವಾರರು ಚಾಲನೆ ಮಾಡುತ್ತಾರೆ. ಇದರಿಂದ ಕೂಡ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಹಾಗೂ ಇ ಫ್ಲೈಓವರ್ ಬಳಿ ಚಿತ್ರದುರ್ಗ ರಸ್ತೆ ಮಾರ್ಗ, ಹಾಗೂ ಭದ್ರಾವತಿ ಮಾರ್ಗ ಮತ್ತು ನಗರೊದೊಳಗೆ ಬರುವ ವಾಹನಗಳಿಗೆ ಇದು ಮುಖ್ಯ ರಸ್ತೆಯಾಗಿದೆ ಹೀಗಾಗಿ ಇಲ್ಲಿಗೆ ಸಿಗ್ನಲ್ ಅವಶ್ಯಕತೆ ಹೆಚ್ಚಾಗಿದೆ ಇನ್ನು ಮುಂದಿನ ದಿನಗಳಲ್ಲಿ ಆದರೂ ಸಿಗ್ನಲ್ ಲೈಟ್ ಅಳವಡಿಸುವ ಮುಖೇಣ ಸುಗಮ ಸಂಚಾರಕ್ಕೆ ಅನುವ ಮಾಡಿಕೊಡಲಿದ್ದಾರ ಅಧಿಕಾರಿಗಳು? ಕಾದು ನೋಡಬೇಕಿದೆ.

Author