ಶಿವಮೊಗ್ಗ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು, ಮಹಿಳೆಯೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಬಗ್ಗೆ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ತಾಲೂಕು ಒಂದರ ಮಹಿಳೆಯೊಬ್ಬರಿಗೆ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ) ಕಳೆದ ಕೆಲವು ದಿನಗಳಿಂದ ಅಪರಿಚಿತ ನಂಬರ್ಗಳಿಂದ ನಿರಂತರವಾಗಿ ಫೋನ್ ಕರೆಗಳು ಬರಲು ಆರಂಭವಾಗಿದ್ದವು.
ಈ ಕರೆಗಳನ್ನು ಮಹಿಳೆ ನಿರ್ಲಕ್ಷಿಸಿ ನಿರಾಕರಿಸಿದ್ದರು. ಆದರೆ, ಇದರಿಂದ ಕೆರಳಿದ ದುಷ್ಕರ್ಮಿಗಳು ಮರುದಿನವೇ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಮಹಿಳೆಯ ಹೆಸರಿನಲ್ಲೇ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆದುಷ್ಕರ್ಮಿಗಳು ಮಹಿಳೆಯ ಫೊಟೋವನ್ನು ಅಶ್ಲೀಲ ಚಿತ್ರಗಳೊಂದಿಗೆ ಮಾರ್ಫಿಂಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಮಹಿಳೆ ಹಾಗೂ ಅವರ ಪತಿಯ ಫೋಟೋವನ್ನು ಸ್ಟೇಟಸ್ ಹಾಕಿಕೊಂಡು, ಅದರ ಕೆಳಗೆ ಅತ್ಯಂತ ಕೆಟ್ಟದಾದ ಹಾಗೂ ಅವಹೇಳನಕಾರಿ ಶಬ್ದಗಳನ್ನು ಬಳಸಿ ಬ್ಲಾಗ್ ಮಾದರಿಯಲ್ಲಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.



