ಶಿವಮೊಗ್ಗ | ತಾರಾ ಹೋಟೆಲ್ ಸಿಬ್ಬಂದಿ ಮೇಲೆ ಪೊಲೀಸರಿಂದ ಹಲ್ಲೆ ; ಪೊಲೀಸರು ಮಾಡಿದ್ದೂ ತಪ್ಪ?

ಶಿವಮೊಗ್ಗ

ಶಿವಮೊಗ್ಗದ ತಾರಾ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ದೊಡ್ಡಪೇಟೆ ಪೊಲೀಸರು ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.

ನಿನ್ನೆ ರಾತ್ರಿ 11-50 ರ ಸಮಯದಲ್ಲಿ ದೊಡ್ಡಪೇಟೆ ಪೊಲೀಸರು ತಾರಾ ಹೋಟೆಲ್ ಹೊರಗಡೆ ನಿಂತು, ಸಮಯ ಮೀರಿದೆ ಹೋಟೆಲ್ ಬಂದ್ ಮಾಡಿ ಎಂದು ಸೂಚಿಸಿದ್ದರು.

ಈ ಘಟನೆ ಸಂಬಂಧ ಪೊಲೀಸರದ್ದೇ ತಪ್ಪು ಎನ್ನುವಂತೆ ಬಿಂಬಿಸಲು ಹೊರಟಿರುವುದು ಆಘಾತಕಾರಿಯಾಗಿದೆ. ಪೊಲೀಸರು ಹಲ್ಲೆ ಮಾಡಿರುವದೇ ವೈಭವಿಕರಿಸುವುದಾದರೆ.

ವಾಸ್ತವ ಘಟನೆಯ ಸತ್ಯ ಸತ್ಯತೆ ಪರಿಶೀಲನೆ ನಡಿಸಿದಾಗ ನಮ್ಮ ಇ -ಕನ್ನಡ ಮಾಧ್ಯಮಕ್ಕೆ ಸಿಕ್ಕಂತ ವಾಸ್ತವ ವಿಷಯ ಏನಂದರೆ ಪ್ರತಿನಿತ್ಯ ನಗರದ ಮುಖ್ಯ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಬ್ರೈಟ್ ಹೋಟೆಲ್, ತಾರ ಹೋಟೆಲ್ ಹಾಗೂ ಇನ್ನಿತರ ಹೋಟೆಲ್ ಗಳು ಇದೆ.

ಇವರುಗಳು ದಿನ ನಿತ್ಯ ರಾತ್ರಿ 11 ಗಂಟೆ ಆದರೂ ಬಾಗಿಲು ಹಾಕುವುದಿಲ್ಲ ಸಮಯ ಮೀರಿ ವ್ಯಾಪಾರ ಮಾಡುತ್ತ, ಕಿಟಕಿಯಿಂದ, ಅರ್ಧ ಶೆಟರ್ ಹಾಕಿ ಅಲ್ಲಿಂದ ಹೋಟೆಲ್ ಗೆ ಬರುವವರಿಗೆ ಆಹಾರ ನೀಡುವುದು ಮಾಡುತ್ತಾರೆ ಜೊತೆಗೆ ಸಮಯ ಮೀರಿದರು ಬಾಗಿಲು ಹಾಕಿರುವುದಿಲ್ಲ ಜೊತೆಗೆ ಸರ್ಕಾರಿ ಬಸ್ ನಿಲ್ದಾಣದ ಒಳಗೆ ಹೋಟೆಲ್ ವ್ಯವಸ್ಥೆಯಿದೆ.

ನಗರದಲ್ಲಿ ಗಾಂಜಾ ಹಾವಳಿ, ಪುಂಡ ಪೋಕರಿಗಳು ಹಾಗೂ ಮತ್ತಿತರೇ ಸಮಾಜ ಘಾತಕ ಶಕ್ತಿಗಳು ರಾತ್ರಿ ವೇಳೆಯಲ್ಲಿ ಓಡಾಡುತ್ತಿರುತ್ತಾರೆ ಆದ ಕಾರಣ ಸಾರ್ವಜನಿಕರ ರಕ್ಷಣೆ ಸಂಬಂಧ ಪೊಲೀಸರು ಸಮಯ ಮೀರಿದ ಮೇಲು ತೆರೆಯುವ ಅಂಗಡಿ ಮುಂಗಟ್ಟು, ಹೋಟೆಲ್ ಇತ್ಯಾದಿಗಳನ್ನು ಮುಚ್ಚಿಸುತ್ತಾರೆ. ವಾಸ್ತವದಲ್ಲಿ ಕಾನೂನು ವ್ಯಾಪಾರಸ್ಥರು ಪಾಲಿಸಬೇಕು ಅವರು ಕಾನೂನು ಪಾಲಿಸದ ಕಾರಣ ಪೊಲೀಸ್ ಇಲಾಖೆ ಕರ್ತವ್ಯ ಮಾಡುತ್ತಿದೆ.

ನಿನ್ನೆ ಘಟನೆಯಲ್ಲಿ ಆಗಿದ್ದು ಏನು?

ಪೊಲೀಸರು ಸಹ ನಿನ್ನೆ ರಾತ್ರಿ ಬಹಳಷ್ಟು ಬಾರಿ ತಾರ ಹೋಟೆಲ್ ನವರಿಗೆ ಮನವಿ ಮಾಡಿದ್ದಾರೆ ಬಾಗಿಲು ಹಾಕಿ ಅಂತ, ಪೊಲೀಸರ ಮನವಿಗೆ ಬಗ್ಗದೆ ಪೊಲೀಸರಿಗೆ ತಮ್ಮ ಕರ್ತವ್ಯ ಹೇಗೆ ಮಾಡಬೇಕು ಎಂದು ಪೊಲೀಸರಿಗೆ ತಿಳಿಸುವ ಮುಖೇಣ ದರ್ಪ ತೋರಿಸಿದ್ದಾರೆ ಹಾಗೂ ಪಕ್ಕದಲ್ಲಿ ಇರುವ ಬ್ರೈಟ್ ಹೋಟೆಲ್ ಬಂದ್ ಮಾಡಿಸಿ ಆಮೇಲೆ ನಾವು ಮಾಡುತ್ತೇವೆ ಎಂದು ಪೊಲೀಸರೊಂದಿಗೆ ವಾದಕ್ಕೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಪೊಲೀಸರ ಮನವಿ ಯಾವದಕ್ಕೂ ಬಗ್ಗದೆ ಹೋದಾಗ ಪೊಲೀಸರು ತಮ್ಮ ರೀತಿಯಲ್ಲಿ ತಿಳಿಸುವ ಮೂಲಕ ಹೋಟೆಲ್ ಬಾಗಿಲು ಹಾಕಿಸಿದ್ದಾರೆ.

ಇನ್ನು ಸಿಸಿ ಟಿವಿ ದೃಶ್ಯ ಸಮಯ, ಪೊಲೀಸರವರು ಸ್ಥಳಕ್ಕೆ ಬಂದಿರುವ ಸಮಯ ಬೇರೆ ಆಗಿದೆ. ಸಿ ಸಿ ಟಿ ವಿ 10:50 ರಾತ್ರಿ ಸಮಯ ತೋರಿಸುತ್ತೆ ಆದರೆ ವಾಸ್ತವದಲ್ಲಿ ಪೊಲೀಸರು ಬಂದಿರುವುದು ನೆನ್ನೆ ರಾತ್ರಿ 11:50 ಗಂಟೆಗೆ ಎಂಬ ಮಾಹಿತಿಯಾಗಿದೆ.

ಈ ಪ್ರಕರಣ ಕುರಿತು ದೊಡ್ಡಪೇಟೆ ಸಬ್ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿ ನಮ್ಮೊಂದಿಗೆ ಮಾತನಾಡಿ ಅವರು ತೋರಿಸುತ್ತಿರುವ ಸಿಸಿಟಿವಿ ಸಮಯ ತಪ್ಪಾಗಿದೆ, ಘಟನೆ ಆಗಿದ್ದು ನಿನ್ನೆ ರಾತ್ರಿ 11:50 ರ ಸಮಯ, ಘಟನೆ ಮುನ್ನ ನಾವು ಬಹಳಹೊತ್ತು ನಿಂತು ಮನವಿ ಮಾಡಿದೆವು. ಅವರು ಹೋಟೆಲ್ ಬಾಗಿಲು ಹಾಕಲು ನಿರಾಕರಿಸಿದಮೇಲೆ ಘಟನೆ ಆಗಿದ್ದು ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಈ ಸುತ್ತಮುತ್ತಲಿನ ಹೋಟೆಲ್ ಅವರು ಸಮಯ ಮೀರಿದ ಮೇಲು ಹೋಟೆಲ್ ತೆರೆದು ಈ ರೀತಿ ಸಮಸ್ಯೆ ಮಾಡುತ್ತಾರೆ. ನಮಗೆ ಇಲಾಖೆಯಿಂದ ಕಟ್ಟುನಿಟ್ಟಾಗಿ ಸಮಯ ಮುಗಿದಮೇಲೆ ಹೋಟೆಲ್ ಮತ್ತಿತರೇ ಬಾಗಿಲು ಹಾಕಿಸಲೇಬೇಕು ಎಂಬ ನಿರ್ದೇಶನ ಅನುಸಾರ ನಾವು ಕರ್ತವ್ಯ ಮಾಡಿರುತ್ತೇವೆ.

ಹೋಟೆಲ್ ನವರು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ನಮ್ಮ ಮೇಲೆ ಆರೋಪ ಮಾಡಿರುವುದು ಬೇಸರ ತಂದಿದೆ ಇನ್ನು ಮುಂದೆ ಇನ್ನು ಕಟ್ಟುನಿಟ್ಟಿನ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ತವ್ಯ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಪೊಲೀಸರು ಅವರ ಕರ್ತವ್ಯ ಅವರು ಮಾಡಿದ್ದಾರೆ ಹಾಗಾಗಿ ಇದರಲ್ಲಿ ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಲವೊಮ್ಮೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಆಗಿರತ್ತೆ.

ಈ ಘಟನೆ ಸಂಬಂಧ ಶಿವಮೊಗ್ಗ ಜಿಲ್ಲ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮುಂದಿನ ದಿನಗಳಲ್ಲಿ ಈ ರೀತಿ ಸಮಯ ಮೀರಿದ ಮೇಲೂ ಬಾಗಿಲು ತೆರೆದು ತೊಂದರೆ ಉಂಟು ಮಾಡುವವರ ಮೇಲೆ ಇನ್ನು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುತ್ತಾರ ಮತ್ತಷ್ಟು ಈ ಕುರಿತು ಏನೆಲ್ಲಾ ಬೆಳವಣಿಗೆ ಆಗಲಿದೆ ಕಾದು ನೋಡಬೇಕಿದೆ.

Author