ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಗ್ರಾಮದ ಬಳಿ ಸೋಮವಾರ ರಾತ್ರಿ 10.45ರ ಸುಮಾರಿಗೆ ನವಜಾತ ಗಂಡು ಶಿಶು ಪತ್ತೆಯಾಗಿದೆ.
ಸಾಸ್ಟೆಹಳ್ಳಿ ಗ್ರಾಮದ ಕುಶ ತಮ್ಮ ದೊಡ್ಡಪ್ಪನ ಮಗ ತಿಪ್ಪೇಶ ಅವರಿಗೆ ಆನಾರೋಗ್ಯದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುವಾಗಸಮೀಪದ ಮಲ್ಲಾಪುರ ಗ್ರಾಮದ ಬಳಿ ಮಗು ಅಳುವ ಶಬ್ದ ಕೇಳಿಸಿದೆ.
ಬಳಿಕ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ 2-3 ದಿನದ ಗಂಡು ಮಗು ಪತ್ತೆಯಾಗಿದೆ.
ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗುವು ಯಾರಿಗೂ ಸಂಬಂಧಪಟ್ಟಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಅವರು ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ.



