ಶಿವಮೊಗ್ಗ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನರೇಗಾ ಹೆಸರು ಬದಲಾವಣೆ, ಇಡಿ ದುರ್ಬಳಕೆ ವಿರೋಧಿಸಿ ನಗರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಸಲುವಾಗಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬಂದೋಬಸ್ತ್ ಗೆ ಕರ್ತವ್ಯ ಮೇಲೆ ನಿಯೋಜನೆಯಾಗಿದ್ದ ಕೋಟೆ ಪೊಲೀಸ್ ಠಾಣೆಯ (ಎ ಎಸ್ ಐ) ಮಹಿಳಾ ಪೊಲೀಸ್ ಸಿಬ್ಬಂದಿಯ 60 ಗ್ರಾಂ ಮಾಂಗಲ್ಯ ಸರ ಕಳವು ಆಗಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.
ಈ ಸಂಬಂಧ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಠಾಣೆಗೆ ದೂರು ನೀಡುವುದಾಗಿ ತಿಳಿದುಬಂದಿದೆ.



