ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ಶಾಶ್ವತ ಅಂಗವೈಕಲ್ಯ : ₹2.77 ಕೋಟಿ ಪರಿಹಾರ ನೀಡಲು ಜಿಬಿಎಗೆ ಹೈಕೋರ್ಟ್ ಆದೇಶ

ಮರ ಕತ್ತರಿಸಲು ಅನುಮತಿ ನೀಡಲು 13 ದಿನ ತೆಗೆದುಕೊಂಡಿರುವುದು ಅಸಾಮಾನ್ಯ ವಿಳಂಬವಲ್ಲ. ಮರ ಖಾಸಗಿ ಜಾಗದಲ್ಲಿದೆ ಮತ್ತು ಘಟನೆ ದೈವಿಕ ಕಾರಣದಿಂದ ಸಂಭವಿಸಿದೆ ಎಂಬ ಬಿಬಿಎಂಪಿಯ ವಾದ ಒಪ್ಪಲಾಗುವುದಿಲ್ಲ. ಅಪಾಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಬಂದ ಬಳಿಕವೂ ಮರ ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಕಾನೂನುಬದ್ಧ ಕರ್ತವ್ಯ. ಅಪಾಯ ತಿಳಿದಿದ್ದ ಸಂದರ್ಭದಲ್ಲಿ ಪ್ರಕೃತಿ ಕಾರಣವನ್ನು ನೆಪವಾಗಿ ಬಳಸಲಾಗದು ಎಂದು ಪೀಠಹೇಳಿದೆ.

Continue Reading