ತೀರ್ಥಹಳ್ಳಿ | (KFD) ಮಂಗನ ಕಾಯಿಲೆಗೆ ಮಹಿಳೆ ಬಲಿ

ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿ ಗ್ರಾಮದ ಯುವಕನೊಬ್ಬ ಕೂಡ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದನು. ಇದರಿಂದಾಗಿ ತಾಲೂಕಿನಲ್ಲಿ ಈ ವರ್ಷ ಸಾವಿನ ಸಂಖ್ಯೆ ಎರಡುಕ್ಕೇರಿದೆ.ತಾಲೂಕಿನಲ್ಲಿ ಇದುವರೆಗೆ ಒಟ್ಟು 29 ಕೆಎಫ್‌ಡಿ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ 5 ಮಂದಿ ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಒತ್ತುವರಿ‌ ಮಾಡಿ ಟೆಂಟ್ ಹಾಕಿದ್ದನ್ನು‌ ಕಿತ್ತಿದ್ದಕ್ಕೆ ವಿರೋಧ, ಗಲಾಟೆ

ಅಲ್ಲಿ ಟೆಂಟ್​ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಪಂಚಾಯಿತಿ ಆಡಳಿತ ಮಂಡಳಿ ಮೊನ್ನೆ ಶನಿವಾರದಂದು ಕಾರ್ಯಾಚರಣೆ ನಡೆಸಿ ಒತ್ತುವರಿಯಾದ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆದರೆ ಈ ತೆರವು ಕಾರ್ಯಾಚರಣೆಗೆ ಒತ್ತುವರಿದಾರರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. 1991ನೇ ಇಸವಿಯಲ್ಲಿಯೇ ಗ್ರಾಮ ಪಂಚಾಯಿತಿಯು ತಮಗೆ ಅಧಿಕೃತವಾಗಿ ಹಕ್ಕುಪತ್ರವನ್ನು ನೀಡಿದ್ದು, ಆ ದಾಖಲೆಗಳು ತಮ್ಮ ಬಳಿ ಸುರಕ್ಷಿತವಾಗಿವೆ ಎಂಬುದು ಅವರ ಸಮರ್ಥನೆಯಾಗಿದೆ. ಇದೆ ಕಾರಣಕ್ಕೆ ಒತ್ತುವರಿದಾರರು ಹಾಗೂ ತೆರವು ಕಾರ್ಯಾಚರಣೆಗೆ ಮುಂದಾದ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು […]

Continue Reading

ಶಿವಮೊಗ್ಗ | ಸಹ್ಯಾದ್ರಿ ಕಲಾ ಕಾಲೇಜಿನ ಕಾಮುಕ ಪ್ರಾಧ್ಯಪಕನ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಮಸಿ ಬಳಿಯುತ್ತೇವೆ NSUI ಎಚ್ಚರಿಕೆ..!

ಈ ಬಗ್ಗೆ ನೊಂದ ವಿದ್ಯಾರ್ಥಿನಿಯರು ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳದೆ ನೆಪ ಮಾತ್ರಕ್ಕೆ ತಿಳುವಳಿಕೆ ಪತ್ರವನ್ನು ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದನ್ನು ಎನ್.ಎಸ್.ಯು.ಐ. ಸಹಿಸುವುದಿಲ್ಲ. ಅನೇಕ ಮಹನೀಯರುಗಳು ಕಲಿತು, ಕಲಿಸಿದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ನೊಂದ ವಿದ್ಯಾರ್ಥಿನಿಯರು ದೂರು ಕೊಟ್ಟರೂ ಪ್ರಾಂಶುಪಾಲರು ಕ್ರಮ ಕೈಗೊಂಡಿಲ್ಲ. ನಂತರ ಎನ್.ಎಸ್.ಯು.ಐ. ಕುಲಸಚಿವರನ್ನು ಸಂಪರ್ಕಿಸಿ ಘಟನೆಯ ವಿವರಗಳನ್ನು ನೀಡಲಾಗಿತ್ತು. ಆಗ ಕುಲಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. […]

Continue Reading

ಸಾಗರ | ಯುದ್ಧ ನಿಂತು ಜಗತ್ತಿನಲ್ಲಿ ಶಾಂತಿ ನೆಲೆಸಲಿ : ಶಾಸಕ ಗೋಪಾಲಕೃಷ್ಣ ಬೇಳೂರು

ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಇತಿಹಾಸ ಪ್ರಸಿದ್ದವಾದ ಗಣಪತಿ ರಥೋತ್ಸವ ಯಶಸ್ವಿಯಾಗಿ ನಡೆದಿದೆ. ಜಾತ್ರೆ ಯಶಸ್ಸಿಗೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದಾರೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ಜಾತ್ರೋತ್ಸವಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು. ಪ್ರಪಂಚದಲ್ಲಿ ಯುದ್ದದ ವಾತಾವರಣ ಕವಿದಿದ್ದು, ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವಿನ ಯುದ್ದ ಜಾಗತಿಕ ಶಾಂತಿಗೆ ಧಕ್ಕೆಯುಂಟು ಮಾಡಿದೆ. […]

Continue Reading

ಶಿಕಾರಿಪುರದಲ್ಲಿ ಚಿರತೆ ದಾಳಿ!

ಎಲ್ಲೆಲ್ಲೆ ದಾಳಿ? : ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬವರು ಎಂದಿನಂತೆ ಬೆಳಿಗ್ಗೆ ಗದ್ದೆಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ . ಅಡಗಂಟಿ ಗ್ರಾಮದ ಸುದೀಪ್ ಎಂಬವರು ಸಂಜೆ ವೇಳೆ, ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿನಲ್ಲಿ, ಜಾನುವಾರುಗಳಿಗೆ ಮೇವು ತರಲು ತೆರಳಿದ್ದರು. ಈ ವೇಳೆ ಇವರ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ. ಇವರನ್ನು ಕೂಡ ಮೆಗ್ಗಾನ್ […]

Continue Reading

ಶಿವಮೊಗ್ಗ | ಮೃಗಲಾಯದಲ್ಲಿ ನೀರಾನೆ ಹಠಾತ್ ದಾಳಿ ; ಪಶು ವೈದ್ಯೆ ಸಾವು : ತನಿಖೆಗೆ ಅದೇಶಿಸಿದ ಸಚಿವರು

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 6:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕಷವಾಗಿ ತನಿಖೆ ನಡೆಸಲಿದೆ. […]

Continue Reading

ಶಿವಮೊಗ್ಗ | ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಉತ್ಸವ

ಮಾ.19 (ಗುರುವಾರ) – ಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ಶ್ರವಣ, ಮಹಾವಿಷ್ಣು ಅಲಂಕಾರ ಮಾ.20 (ಶುಕ್ರವಾರ) – ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ ಮಾ.21 (ಶನಿವಾರ) – ಉಪನ್ಯಾಸ ಕಾರ್ಯಕ್ರಮ (ಸೀತಾ ಪರಿಹಾರ), ಅಹಲ್ಯಾ ಶಾಪ ವಿಮೋಚನೆ ಅಲಂಕಾರ ಮಾ.22 (ಭಾನುವಾರ) – ಶಾಸ್ತ್ರೀಯ ಸಂಗೀತ, ಸೀತಾ ಕಲ್ಯಾಣ ಅಲಂಕಾರ ಮಾ.23 (ಸೋಮವಾರ) – ಗಮಕ ವಾಚನ ಹಾಗೂ ಉಪನ್ಯಾಸ, ಗುಹಾ ಅತಿಥ್ಯ ಅಲಂಕಾರ ಮಾ.24 (ಮಂಗಳವಾರ) – ಸಂಗೀತ ಕಾರ್ಯಕ್ರಮ, […]

Continue Reading

ಸಾಗರ | ಹಾವು ಕಚ್ಚಿ ರೈತ ಸಾವು

ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಕೂಡಲೇ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:45ರ ಸುಮಾರಿಗೆ ಹುಚ್ಚಪ್ಪ ಅವರು ಕೊನೆಯುಸಿರೆಳೆದಿದ್ದಾರೆ.

Continue Reading

ಶಿವಮೊಗ್ಗ | ಜೇನುಹುಳುಗಳ ದಾಳಿ ; ಆಸ್ಪತ್ರೆಗೆ ದಾಖಲು

ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಈ ದಾಳಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಾಲ್ ಟಿಕೆಟ್ ಪಡೆಯಲು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಸರ್ಕಾರಿ ಶಾಲೆಯ ಬಾಲಕ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ದಾಳಿಯಲ್ಲಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಉಪಚರಿಸಲಾಗಿದೆ.

Continue Reading

ತೀರ್ಥಹಳ್ಳಿ | ಮಹಿಳಾ ಕಾಂಗ್ರೆಸ್ ನಿಂದ ಮಾ. 20ರಂದು ಪ್ರತಿಭಟನೆ : ಕಿಮ್ಮನೆ ರತ್ನಾಕರ್ ಹೇಳಿಕೆ

ಮೂರು ತಿಂಗಳಿಗೆ ಆಗುವಷ್ಟು ಸ್ಟಾಕ್ ನಮ್ಮ ಬಳಿ ಆಯಿಲ್ ಇದೆ ಎಂದು ಹೇಳಿದ್ದರು. ಈಗ ಅದಕ್ಕೆ ಹಣವನ್ನು ಜಾಸ್ತಿ ಮಾಡಿದ್ದಾರೆ. ಇವರು ಬಿಸಿನೆಸ್ ಮಾಡ್ತಾ ಇದ್ದಾರಾ? ಇರುವ ಸ್ಟಾಕ್ ಗೆ ಜನರ ಮೇಲೆ ಹೊರೆ ಹಾಕುತ್ತಿರುವುದು ಸರಿಯೇ? ಇನ್ನು ಎಂಟು ದಿನ ಯುದ್ಧ ನಡೆದರೆ ಹಲವರು ಮನೆ ಸೇರಬೇಕಾಗುತ್ತದೆ ಎಂದರು. ಜ್ಞಾನೇಂದ್ರ ಅಸೆಂಬ್ಲಿಯಲ್ಲಿ ಹೀರೊ, ಇಲ್ಲಿ ಮರಳು ಹೊಡೆಯುತ್ತಿದ್ದರೂ ಕೇಳುವುದಿಲ್ಲ ಆದರೆ ಅಲ್ಲಿ ಜ್ಞಾನೇಂದ್ರ ಮಾತನಾಡುವುದು ನೋಡಿದರೆ ಇವರಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ತಿಳಿಯಬೇಕು. ಜ್ಞಾನೇಂದ್ರ […]

Continue Reading