ಶಿಕಾರಿಪುರ | ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ : ಮಧು ಬಂಗಾರಪ್ಪ
ಜನರ ತೆರಿಗೆ ಹಣದಿಂದಲೇ ನಾವು ವೇತನ ಪಡೆಯುತ್ತಿದ್ದೇವೆ. ಪ್ರಜೆಗಳೇ ಪ್ರಭುಗಳು, ಸಾಮಾನ್ಯ ಜನರೇ ನಮ್ಮ ನಿಜವಾದ ಮಾಲೀಕರು ಎಂಬುದನ್ನು ಅಧಿಕಾರಿಗಳು ಅರಿತುಕೊಳ್ಳಬೇಕು. ಪ್ರಜಾಸೇವೆ ಕಾರ್ಯಕ್ರಮವನ್ನು ಆದ್ಯತೆಯಾಗಿ ಪರಿಗಣಿಸಿ, ಜನರ ಸಮಸ್ಯೆಗಳಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಪ್ರಜಾಸೇವೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಜನಸ್ನೇಹಿ ಆಡಳಿತಕ್ಕೆ ಆದ್ಯತೆ: ಆಡಳಿತವನ್ನು ಜನಸ್ನೇಹಿ, ಪಾರದರ್ಶಕ ಹಾಗೂ ಉತ್ತರದಾಯಿತ್ವಯುತವಾಗಿಸುವುದು ಪ್ರಜಾಸೇವೆಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಕೆ, ಪ್ರಮಾಣಪತ್ರ ಪಡೆಯುವುದು, […]
Continue Reading




