ದಾವಣಗೆರೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ ; ಜಮೀರ್ ವಿರುದ್ಧ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಿಟ್ಟಿನಿಂದ ಬೆಂಬಲಿಗರ ಮುಂದೆ ಗುಡುಗಿದ ಸಿದ್ದರಾಮಯ್ಯ, “ಅವನು ನನ್ನ ಪರಮಾಪ್ತ ಅಂತ ನೀವೆಲ್ಲ ಹೇಳ್ತೀರಾ, ಆದರೆ ಅವನು ಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ” ಎಂದು ಗರಂ ಆಗಿ ಹೇಳಿದ್ದಾರೆ. ಅದಕ್ಕೆ ಬೆಂಬಲಿಗರು ಸಮಜಾಯಿಷಿ ನೀಡಲು ನೋಡಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜಮೀರ್ ಅಹ್ಮದ್ ಖಾನ್ ಅವರು ವಸತಿ ಸಚಿವರಾಗಿ ಪ್ರಭಾವಿ ಖಾತೆಯನ್ನು ನಿಭಾಯಿಸಿದ್ದರು. ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಜಮೀರ್ ಇರುತ್ತಿದ್ದರು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯಲು ಜಮೀರ್ ಹರಸಾಹಸ ಪಡುತ್ತಿದ್ದಾರೆ.
Continue Reading
