ಶಿವಮೊಗ್ಗ ಎಸ್ ಪಿ ಹೆಸರಲ್ಲಿ‌ ನಕಲಿ ಫೇಸಬುಕ್ ಅಕೌಂಟ್ ; ಪ್ರತಿಕ್ರಿಯಿಸದಿರಲು ಮನವಿ

ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫೇಸ್‌ಬುಕ್ ಖಾತೆ ನಕಲಿಯಾಗಿದ್ದು, ಸಾರ್ವಜನಿಕರು ಆ ಖಾತೆಯನ್ನು ಫಾಲೋ ಮಾಡಬಾರದು ಹಾಗೂ ಅಲ್ಲಿಂದ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಅನುಮಾನಾಸ್ಪದ ಖಾತೆಗಳ ಕುರಿತು ಸಂಬಂಧಿತ ಸಾಮಾಜಿಕ ಜಾಲತಾಣದಲ್ಲಿ ದೂರು ದಾಖಲಿಸುವುದು ಹಾಗೂ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ‌ ಮಾಡಿದ್ದಾರೆ.

Continue Reading