ಇಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಆಚರಿಸಿ ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿದಿದ್ದು ಯಾಕೆ?

ಫೆಬ್ರವರಿ 2024 ರಲ್ಲಿ ಕತಾರ್‌ಗೆ ನನ್ನ ಕೊನೆಯ ಭೇಟಿಯ ಸಮಯದಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ. ಇದಲ್ಲದೆ, ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ಶೀಘ್ರದಲ್ಲೇ ಕತಾರ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಬಹಳಷ್ಟು ಜನಕ್ಕೆ ಇದರ ಮಾಹಿತಿ ಕೊರತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿ ಕೂಡ ಕೆಲವರು ಧ್ವಜ ಅರ್ಧಕ್ಕೆ ಹರಿಸಿದ ಅಧಿಕಾರಿಗಳು ವಿರುದ್ಧ […]

Continue Reading

ಉತ್ತಮ ಆದಾಯ ಪಡೆಯುವ ಪೋಷಕರ ಮಕ್ಕಳಿಗೆ ಮೀಸಲಾತಿ ಯಾಕೆ? : ಸುಪ್ರೀಂ ಕೋರ್ಟ್ ಪ್ರಶ್ನೆ?

“ಇದು ನಾವೆಲ್ಲರೂ ಕಾಳಜಿ ವಹಿಸುವ ವಿಚಾರ. ಅದರ ಲಾಭವೇನು? ನಿಮಗೆ ಮೀಸಲಾತಿ ನೀಡಲಾಗಿದೆ. ಪೋಷಕರಿಬ್ಬರು ಕಲಿತಿದ್ದಾರೆ, ಅವರು ಉತ್ತಮ ಕೆಲಸದಲ್ಲಿದ್ದಾರೆ. ಅವರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆದರೆ ಅವರ ಮಕ್ಕಳಿಗೆ ಮತ್ತೆ ಮೀಸಲಾತಿ ಬೇಕಂತೆ. ಅವರು ಮೀಸಲಾತಿಯಿಂದ ಹೊರಬರಬೇಕು” ಎಂದು ನ್ಯಾ.ನಾಗರತ್ನ ಹೇಳಿದರು. ಅರ್ಜಿದಾರರ ಪೋಷಕರು ಇಬ್ಬರೂ ರಾಜ್ಯ ಸರ್ಕಾರಿ ನೌಕರರಾಗಿದ್ದು, ಅವರನ್ನು ಮೀಸಲಾತಿಯಿಂದ ಹೊರಗಿಡುವುದನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು […]

Continue Reading

ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು! ಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು

ಪಾದ್ರಿಯಾಗಿ ಕೆಲಸ ಮಾಡುತ್ತಿದ್ದ ಆನಂದ್, ತಮ್ಮ ಮೇಲೆ ಕೆಲವರು ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿಗಳು ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಅವರು ಎಸ್‌ಸಿ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ವಾದಿಸಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ಆನಂದ್ ಅವರ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ತೀರ್ಪು ಮತಾಂತರ ಮತ್ತು ಮೀಸಲಾತಿ ಹಕ್ಕುಗಳ ನಡುವಿನ ಕಾನೂನು ಸಂಘರ್ಷಕ್ಕೆ ಸ್ಪಷ್ಟವಾದ ದಿಕ್ಕನ್ನು […]

Continue Reading

ಭಾರತ ಅಂಧ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವನ್ನು ಶ್ಲಾಘಿಸಿದ ಪ್ರಧಾನಿ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ನೇಪಾಳವನ್ನು 114/5 ರನ್‌ಗಳಿಗೆ ಸೀಮಿತಗೊಳಿಸಿದ ಬಳಿಕ ಕೇವಲ 12 ಓವರ್‌ಗಳಲ್ಲಿ 117/3 ರನ್‌ ಬಾರಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ವಿಶೇಷವೆಂದರೆ—ನವಿ ಮುಂಬೈನಲ್ಲಿ ಮಹಿಳಾ ವಿಶ್ವಕಪ್ 2025 ಗೆದ್ದು ಕೇವಲ ಮೂರು ವಾರಗಳಲ್ಲಿ ಮತ್ತೊಂದು ವಿಶ್ವಕಪ್—ಇದು ಭಾರತೀಯ ಮಹಿಳಾ ಕ್ರಿಕೆಟ್ ವಲಯಕ್ಕೆ ದ್ವಿಗುಣ ಗೌರವ ತಂದುಕೊಟ್ಟಿದೆ. ಈ ಜಯಶೀಲ ವಿಶ್ವಕಪ್ ತಂಡದಲ್ಲಿ ಕರ್ನಾಟಕದಿಂದ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದು, ಅವರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಪ್ರತಿಭೆ ಕಾವ್ಯ ವಿ […]

Continue Reading