ಕೇಂದ್ರ ಸರ್ಕಾರದಿಂದ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ನಿಯೋಜನೆ ಅವಧಿ ಒಂದು ವರ್ಷಕ್ಕೆ ವಿಸ್ತರಣೆ
ಲೋಕಾಯುಕ್ತದಲ್ಲಿದ್ದ ಭ್ರಷ್ಟಾಚಾರ ಜಾಲ ಹಾಗೂ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳನ್ನು ಬಯಲಿಗೆಳೆದ ಕೀರ್ತಿ ಇವರದು. 2016 ರಿಂದ ಕೇಂದ್ರ ಸೇವೆಗೆ ನಿಯೋಜನೆಗೊಂಡ ಇವರು, ರಾಷ್ಟ್ರೀಯ ತನಿಖಾ ದಳ (NIA) ಮತ್ತು ಜಾರಿ ನಿರ್ದೇಶನಾಲಯ (ED) ದಂತಹ ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇದೀಗ ಸಿಐಎಸ್‌ಎಫ್‌ನಲ್ಲಿ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದ್ದು, ಒಟ್ಟಾರೆಯಾಗಿ ಕಳೆದ 13 ವರ್ಷಗಳಿಂದ ಅವರು ಯಶಸ್ವಿಯಾಗಿ ಕೇಂದ್ರ ನಿಯೋಜನೆಯಲ್ಲಿಯೇ ಮುಂದುವರಿದಂತಾಗಿದೆ.
Continue Reading