ಭಿಕ್ಷಾಟನೆ ನಡುವೆಯೂ ಶೇ.86ರಷ್ಟು ಅಂಕ ಗಳಿಸಿದ ಅಲೆಮಾರಿ ವಿದ್ಯಾರ್ಥಿನಿ
ಭಿಕ್ಷಾಟನೆ ನಡುವೆಯೂ ಜ್ಞಾನದ ಹಸಿವು ಮೂಲತಃ ಅಲೆಮಾರಿ ಸಮುದಾಯವಾದ ಗೊಲ್ಲರ ಜನಾಂಗಕ್ಕೆ ಸೇರಿದ ಸುಜಾತಾ ಅವರದ್ದು ಅನಕ್ಷರಸ್ಥ ಕುಟುಂಬ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಈಕೆಯದು. ಒಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದರೂ, ಮನಸ್ಸಿನಲ್ಲಿ ಮಾತ್ರ ಶಿಕ್ಷಣದ ಕನಸಿತ್ತು. ಅಲೆಮಾರಿ ಬದುಕಿನ ಕಷ್ಟಗಳ ನಡುವೆ, ಸರ್ಕಾರಿ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತ ಈ ಪ್ರತಿಭೆ, ಇಂದು ತಾನು ಪಡೆದ ಅಂಕಗಳ ಮೂಲಕ ಬಡತನಕ್ಕೆ ಉತ್ತರ. ಉಳ್ಳವರು ಶಿವಾಲಯ ಮಾಡುವರು, […]
Continue Reading