ಬೆಳಗಾವಿ | ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವ ಮೂಲಕ ಮಾದರಿಯಾದ ನವಜೋಡಿ

ಅಂಗಾಂಗ ದಾನದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುವುದು ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ದೇಹ, ಹಲವು ಜನರಿಗೆ ಉಪಯೋಗಕ್ಕೆ ಬರಲಿ ಎಂದು ಮದುವೆ ದಿನವೇ ಅಂಗಾಂಗ ದಾನದ ಪ್ರತಿಜ್ಞೆಗೈದು, ಅದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಆರೋಗ್ಯ ಇಲಾಖೆ ವೆಬ್​ಸೈಟಿನಲ್ಲಿ ನೋಂದಣಿ ಕಾರ್ಯ ಪೂರ್ಣ ಮಾಡಿದ್ದಾರೆ.

Continue Reading

ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಪ್ರತಿಭಟನೆ ; ಜೇಬು ತುಂಬಿಸಿಕೊಳ್ಳುವ ಯೋಜನೆ ಎಂದ ಎ.ಟಿ. ರಾಮಸ್ವಾಮಿ

ಪ್ರೊ. ಬಿ ಎಂ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅದರ ಅಧಿಕಾರಿ ಪ್ರಣೀತಾ ಕೌಲ್ ನೀಡಿದ ವರದಿಯಲ್ಲಿ ಈ ಭಾಗದಲ್ಲಿ ಸಿಂಗಳಿಕ, ಮುಂಗಟ್ಟೆ ಹೆಚ್ಚು ವಾಸಿಸುತ್ತಿವೆ. ಇದರಿಂದ ಇಲ್ಲಿ ಅಭಿವೃದ್ಧಿ ಸಲ್ಲದು ಎಂದು ವರದಿ ನೀಡಿದ್ದರೂ, ರಾಜ್ಯದ ಅರಣ್ಯ ಅಧಿಕಾರಿ ಸೆಂಥಿಲ್‌ಕುಮಾರ್, ಇಲ್ಲಿ ಯೋಜನೆಯಿಂದ ಯಾವುದೇ ಪ್ರ್ರಾಣಿ-ಪಕ್ಷಿಗೆ ಸಮಸ್ಯೆಯಾಗುವುದಿಲ್ಲ. ಈ ಯೋಜನೆ ಜಾರಿಮಾಡಬಹುದು ಎಂದಿರುವುದು ದುರಂತದ ವಿಷಯ ಎಂದರು.

Continue Reading

ಶಿವಮೊಗ್ಗ | ಮಹಿಳೆಯರ, ಮಕ್ಕಳ ಅನೈತಿಕ ಸಾಗಾಣಿಕೆ ದುರದೃಷ್ಟಕರ : ನ್ಯಾ. ಸಂತೋಷ್‌ಎಂ.ಎಸ್

ಸಾಮಾನ್ಯ ಜನರ ಆಸೆ-ಆಕಾಕ್ಷೆಗಳನ್ನು ಬಳಸಿ ಲಾಭಗಳಿಸುತ್ತಿರುವ ಮಾನವ ಸಾಗಾಣಿಕೆದಾರರು ಅವರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾನವ ಸಾಗಾಣಿಕೆದಾರರನ್ನು ಕಾನೂನಿನ ಪರಿಮಿತಿಯೊಳಗೆ ತರುವುದು ಮಾತ್ರವಲ್ಲದೆ ಸಂತ್ರಸ್ಥರಿಗೆ ಸುರಕ್ಷಿತ ಮತ್ತು ಉತ್ತಮ ಪುನರ್ವಸತಿ ಕಲ್ಪಿಸಲು ಬದ್ಧವಾಗಿದೆ ಎಂದರು. ಕಳೆದ ಒಂದೂವರೆ ವರ್ಷದಲ್ಲಿ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲದಿರುವುದು ಸಮಾಧಾನದ ಸಂಗತಿಯೇ ಆಗಿದ್ದರೂ ೨೦೦ಕ್ಕೂ ಹೆಚ್ಚಿನ ಫೋಕ್ಸೋ ಮತ್ತು ೫೦ಕ್ಕೂ ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರುವುದು ವಿಷಾದದ ಸಂಗತಿಯಾಗಿದೆ […]

Continue Reading

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ರಾಹುಲ್ ಗಾಂಧಿ ಅವರು ಜಾರ್ಜ್ ಸೊರೊಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್ ಮತ್ತು ಯುಎಸ್ಐಐಡಿನಂತಹ ವಿದೇಶಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಕೇಂದ್ರ ಬಜೆಟ್ ಬಗ್ಗೆ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದರು. ಈ ಭಾಷಣದ ಬೆನ್ನಲ್ಲೇ ನಿಲುವಳಿ ಸೂಚನೆ ಮಂಡನೆಯಾಗಿದೆ.ಇದು ಸಾಮಾನ್ಯ ಹಕ್ಕುಚ್ಯುತಿ ನಿರ್ಣಯಕ್ಕಿಂತ ಗಂಭೀರವಾದದ್ದು ಎಂದು ದುಬೆ ಹೇಳಿದ್ದಾರೆ.

Continue Reading

ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಕೇಂದ್ರ ಅರಣ್ಯ ಮಂತ್ರಾಲಯ ಒಪ್ಪಿಗೆ ನೀಡಿಲ್ಲ : ಕೇಂದ್ರ ಅರಣ್ಯ-ಪರಿಸರ ಸಚಿವ ಯಾದವ್ ಸ್ಪಷ್ಟನೆ

ಈ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರು “ಫೆಡರಲ್ ವ್ಯವಸ್ಥೆಯಲ್ಲಿ ಕೇಂಧ್ರ-ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಪಶ್ಚಿಮ ಘಟ್ಟದ ನದೀ ಕಣಿವೆಗಳ ಉಳಿವಿಗೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಬಾರದು. ಭಾರೀ ಭೂಕುಸಿತ, ಜಲ ಸಂಕಷ್ಟದ ಇಂದಿನ ಸಂದರ್ಭದಲ್ಲಿ. ಸಹ್ಯಾದ್ರಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಶರಾವತಿ, ಕಾವೇರಿ, ಬೇಡ್ತಿ-ಅಘನಾಶಿನಿ, ಕಾಳಿ ಕಣಿವೆಗಳ ಅರಣ್ಯ, ಜೀವವೈವಿಧ್ಯ ಅತಿ ಅಮೂಲ್ಯ. ಎಂದು ಅಭಿಪ್ರಾಯ ಪಟ್ಟರು. ಪಶ್ಚಿಮ ಘಟ್ಟ ಉಳಿಸಿ ನಿಯೋಗದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕಾ ಸಚಿವ ಮಂಕಾಳು […]

Continue Reading

ಶಿವಮೊಗ್ಗ | ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಭೆ

ಕುಮ್ಮಾರನಹಳ್ಳಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ, ಮೆಸ್ಕಾಂ, ಆರೋಗ್ಯ, ಆಹಾರ ಮತ್ತು ಪಡಿತರ ಇಲಾಖೆ ಸಮಸ್ಯೆಗಳನ್ನು ಬಗೆಹರಿಸಿದ ಶಾಸಕರು. ಈ ಒಂದು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಭದ್ರಾವತಿ ಶಾಸಕರಾದ ಸಂಗಮೇಶ್ ಅವರು ಬಡವರ ಆಶಾಕಿರಣ ಯೋಜನೆಗೆ ಮಹತ್ವಪೂರ್ಣ ಅರ್ಥ ಕಲ್ಪಿಸಿದ್ದಾರೆ.

Continue Reading

ಶಿವಮೊಗ್ಗ | ಸಿಇಎನ್ ಡಿಎಸ್ಪಿ ಸಹಿತ ಹಲವು ಸಿಪಿಐ ಗಳ ವರ್ಗಾವಣೆ

ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿದ್ದೇಗೌಡ ಹೆಚ್.ಎಂ.ರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ. ಸತ್ಯನಾರಾಯಣ ವೈ. ದೊಡ್ಡಪೇಟೆಗೆ ನೂತನ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಕರ್ನಾಟಕ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಯನಗರ ಪೊಲೀಸ್ ಠಾಣೆಗೆ ರವಿ ಸಂಗನಗೌಡ ಪಾಟೀಲ್ ಅವರು ವರ್ಗಾವಣೆಯಾಗಿ ಬಂದಿದ್ದಾರೆ. ಈ ಮೊದಲು ಇವರು ದೊಡ್ಡ ಪೇಟೆ ವೃತ್ತದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು. ಮಹಿಳಾ ಪೊಲೀಸ್ ಠಾಣೆಗೆ ಸುರೇಶ್​ ಇನ್ಸ್‌ಪೆಕ್ಟರ್ ಆಗಿ ಆಗಮಿಸಿದ್ದಾರೆ. ಇವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದಲ್ಲಿ (SIT) […]

Continue Reading

ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಚಿಯನ್ ಫೆಡರೇಷನ್​ ದೂರು

ಕ್ರೈಸ್ತರ ಒಕ್ಕೂಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹಸಚಿವರು, ಸೆನ್ಸರ್ ಬೋರ್ಡ್​​ಗೂ ದೂರು ನೀಡಲಾಗಿದ್ದು, ಈ ವಿಚಾರವಾಗಿ ಚಿತ್ರತಂಡ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಲಾಗಿದೆ. ಅಲ್ಲದೆ, ಸಿನಿಮಾ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ.

Continue Reading

ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ತಂದೆ, ದಂತವೈದ್ಯೆ ತಾಯಿಯನ್ನು ಕೊಂದ ಟೆಕ್ಕಿ

ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ನೆರೆಮನೆಯವರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ. ಮಾಧವಿ ನಾಯರ್ ನೀಡಿದ ದೂರಿನ ಆಧಾರದ ಮೇಲೆ, ರೋಹನ್ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಶವಗಳನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ದಂಪತಿಯ ಮಗಳು ಅಮೆರಿಕದಿಂದ ಆಗಮಿಸುತ್ತಿದ್ದು, ಅವರು ಬಂದ ನಂತರ ಶವಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Continue Reading