ಶಿವಮೊಗ್ಗ | ಭಗವದ್ಗೀತೆ ಟೀಕಿಸುವ ಸಿದ್ದರಾಮಯ್ಯ, ಮಹಾತ್ಮ ಗಾಂಧಿಯನ್ನು‌ ಮನುವಾದಿ ಎನ್ನುವರೇ, ಈಶ್ವರಪ್ಪ ಪ್ರಶ್ನೆ?

ಮಹಾಭಾರತದ ಯುದ್ಧ ಭೂಮಿಯಲ್ಲಿ ವಿಚಲಿತನಾಗಿ ಕುಳಿತ ಅರ್ಜುನನಿಗೆ ಶ್ರೀ ಕೃಷ್ಣ ಭೋದಿಸಿದ ಗೀತೆ ಮಹಾತ್ಮ ಗಾಂಧಿಯವರನ್ನೊಳಗೊಂಡು ವಿಶ್ವದ ಹಲವು ಮಹಾನ್ ನಾಯಕರುಗಳಿಗೆ ಜೀವನ ಸ್ಪೂರ್ತಿಯಾಗಿದೆ ಎಂದರು. ಈ ನಿಟ್ಟಿನಲ್ಲಿ ರಾಷ್ಟ್ರದ ಮಕ್ಕಳಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಭಗವದ್ಗೀತೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದಿರುವುದು ಒಂದು ಮಹತ್ತರ ನಡೆಯಾಗಿದೆ. ಧರ್ಮೇಂದ್ರ ಪ್ರಧಾನ್ ಅವರೂ ಸಹಾ ಕುಮಾರಸ್ವಾಮಿಯವರ ಪತ್ರವನ್ನು ಸಕಾರತ್ಮಕವಾಗಿ ಪರಿಗಣಿಸಿದ್ದು ಸಂತಸ ತಂದಿದೆ […]

Continue Reading

ಶಿವಮೊಗ್ಗ | ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಾರ್ಡ್ ಸಭೆ

ಶಾಲೆಯ ಶೌಚಾಲಯ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಬೇಡಿಕೆ ವ್ಯಕ್ತಪಡಿಸಿದರು. ಮಕ್ಕಳಿಗೆ ಆಟದ ಮೈದಾನವಿಲ್ಲದ ಕಾರಣ, ಆಟದ ಮೈದಾನದ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದರು. ಮಳೆಗಾಲದಲ್ಲಿ ಊಟ ಮಾಡಲು ದೊಡ್ಡ ತೊಂದರೆ ಎದುರಾಗುತ್ತಿರುವುದರಿಂದ ಊಟದ ಹಾಲ್ ನಿರ್ಮಿಸಿ ನೀಡುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಮಕ್ಕಳು ತಮ್ಮ ಅಗತ್ಯಗಳನ್ನು ಹಿಂಜರಿಯದೆ ಧೈರ್ಯವಾಗಿ ಅಧಿಕಾರಿಗಳ ಮುಂದೆ ಮಂಡಿಸಿದ ರೀತಿಗೆ ಅತಿಥಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಡಿಕೆಗಳನ್ನು ಆದ್ಯತೆಯಂತೆ ಪರಿಗಣಿಸುವುದಾಗಿ ಭರವಸೆ ನೀಡಿದರು. ಭದ್ರಾಪುರ […]

Continue Reading

ಶಿವಮೊಗ್ಗ | ಗೋವುಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿ ಕಾಯ್ದೆ ಬೇಡ : ವಿಎಚ್ ಪಿ ಬಜರಂಗದಳ ಪ್ರತಿಭಟನೆ

ರಾಜ್ಯದಲ್ಲಿ ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿರುವುದು ಕಂಡು ಬರುತಿತ್ತು. ಮೇಲ್ಕಾಣಿಸಿದ ಕಾಯಿದೆ 2021 ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆದದ್ದು ಕಂಡುಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ಕಂಡುಬಂದಿದೆ ಇದನ್ನು ಹಸು ಮಾಲೀಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಸುಲಭವಾಗಿ ಸಾಗಾಟ […]

Continue Reading

ಶಿವಮೊಗ್ಗ | ಸಿದ್ದರಾಮಯ್ಯನವರೇ ಕ್ಷಮೆ ಕೇಳಿ ; ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ

ಒಬ್ಬ ಮುಖ್ಯಮಂತ್ರಿಯಾಗಿ ಅವರು ಬಳಸಿದ ಭಾಷೆ ಅತ್ಯಂತ ಕೀಳುಮಟ್ಟದ್ದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ಸಮಸ್ತ ಮಹಿಳಾ ಸಮುದಾಯದ ಪ್ರತಿಬಿಂಬ. ಅವರ ಬಗ್ಗೆ ಬಳಸಿದ ಅಸಭ್ಯ ಪದಗಳು ರಾಜ್ಯದ ಎಲ್ಲಾ ಮಹಿಳೆಯರಿಗೆ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕ ಜೀವನದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಈ ರೀತಿಯ ಹೇಳಿಕೆಗಳು ಬರುವುದು ಅತ್ಯಂತ ವಿಷಾದನೀಯ ಎಂದು ಬೇಸರಿಸಿದೆ. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ […]

Continue Reading

ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದಿಂದ ಹಳದಿ, ಕೆಂಪು ಕನ್ನಡ, ಬಾವುಟದ ಪೇಟ ತೋಡುವ ಮೂಲಕ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದಂತ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಳದಿ, ಕೆಂಪು ಕನ್ನಡದ ಬಾವುಟದ ಪೇಟವನ್ನು ಧರಿಸಲಾಗಿತ್ತ. ನಂತರ ಸಾರ್ವಜನಿಕವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಪ್ರೀತಮ್ ಮೆಲೋಡಿಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕಾರಿಪುರದ ಪದಾಧಿಕಾರಿಗಳು ಸಾಗರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಶ್ರೀರವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆ ನೆರವೇರಿಸಿದರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

Continue Reading

ಶಿವಮೊಗ್ಗ | ಅಪಘಾತದಲ್ಲಿ ಮೃತರಾಗಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಕುಟುಂಬಕ್ಕೆ 1 ಕೋಟಿ ಪರಿಹಾರ

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಕ ಟಿ.ಆರ್. ನವೀನ್, ಎಸ್‌ಬಿಐ ಅಧಿಕಾರಿಗಳು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಹವಾಮಾನಾಧಾರಿತ ಬೆಳೆವಿಮೆ ನಿರ್ಧರಣೆ ನ್ಯೂನತೆ ಸಮರ್ಪಕಗೊಳಿಸಿ : ಸಂಸದ ಬಿ.ವೈ.ಆರ್ ಸೂಚನೆ

ಒಂದೊಮ್ಮೆ ನೆರೆಯ ಗ್ರಾಮ ಪಂಚಾಯಿತಿಗಳಲ್ಲಿನ ಮಳೆ ಪ್ರಮಾಣವನ್ನು ಗುರುತಿಸುವುದಾದರೆ ರಸ್ತೆಯ ದೂರವನ್ನಾಧರಿಸಿ ಅಥವಾ ವೈಮಾನಿಕ ದೂರವನ್ನು ಅಂದಾಜಿಸಿ ಮಳೆಯ ಮಾಪನ ಕೇಂದ್ರವನ್ನು ಗುರುತಿಸಲಾಗುವುದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ನಿಖರವಾದ ಮಾಹಿತಿ ಇಲ್ಲ. ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ, ದತ್ತಾಂಶ ಸಂಗ್ರಹಣೆಯಲ್ಲಿನ ನ್ಯೂನತೆಗಳಂತಹ ಅವೈಜ್ಞಾನಿಕವಾದ ಕಾರಣಗಳಿಂದಾಗಿ ಸಂತ್ರಸ್ಥ ರೈತರಿಗೆ ಶೋಷಣೆ ಮಾಡುತ್ತಿರುವುದು ಸೂಕ್ತವಲ್ಲ ಎಂದ ಅವರು, ಸಂಬಂಧಿಸಿದ ಇಲಾಖೆಗಳ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳು ಕೂಡಲೇ ಗಮನಹರಿಸಿ, ಅಸಮರ್ಪಕ ವಿಮಾ ಮೊತ್ತದ ವಿತರಣೆಯನ್ನು ಸರಿಪಡಿಸಿಕೊಂಡು […]

Continue Reading

ಶಿವಮೊಗ್ಗ | ಸಮಾಜಸೇವಕ ಪ್ರಫುಲ್ಲ ಚಂದ್ರ ಹುಟ್ಟುಹಬ್ಬದ ಪ್ರಯುಕ್ತ ಅಂಧ ಮಕ್ಕಳಿಗೆ ಊಟ ಹಾಗೂ ಸಿಹಿ ವಿತರಣೆ

ಶಿವಮೊಗ್ಗ ಜಿಲ್ಲಾ ಪತ್ರಿಕಾ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಜೀವನ್ ನಾಗರಾಜ್ ರವರು ಪ್ರಫುಲ್ಲ ಚಂದ್ರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಫುಲ್ಲಚಂದ್ರ ರವರು ಮಲೆನಾಡು ಆರ್ ಎಂ ಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು. ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು. ಹಿಂದೂ ಸಮನ್ವಯ ಸಮಿತಿ ಸದಸ್ಯರು. ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರು ಸಕ್ರಿಯವಾಗಿ ಕೆಲ ಹೋರಾಟಗಳಲ್ಲಿ ಭಾಗವಹಿಸಿ ನಗರದಲ್ಲಿಡೆ ಚಿರಪರಿಚಿತರಾಗಿದ್ದು ಇವರ ಈ ಸೇವೆ ಹೀಗೆ […]

Continue Reading