ಶಿವಮೊಗ್ಗ | ವಿಮಾ ಪರಿಹಾರ ನೀಡದ ಕೆನರಾ ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗೆ ದಂಡ

ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಪಾಲಿಸಿ ರದ್ದುಗೊಳಿಸಿರುವುದು ಸೇವಾ ನ್ಯೂನತೆ ಎಂದು ಆರೋಪಿಸಿ ಪತ್ನಿ ಸುಮ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಆಯೋಗದ ತೀರ್ಪು: ದೂರು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ವಿಮಾ ಸಂಸ್ಥೆ ಮತ್ತು ಬ್ಯಾಂಕ್‌ನಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ: ಪಾಲಿಸಿಯ ಫಲವತ್ತೆಯ ಮೊತ್ತ ರೂ. 20,00,000 (ಇಪ್ಪತ್ತು ಲಕ್ಷ ರೂ.) ಅನ್ನು ದಿನಾಂಕ 04/07/2023 ರಿಂದ […]

Continue Reading

ಶಿವಮೊಗ್ಗ ವಿಮಾನ ನಿಲ್ದಾಣ ಖಾಸಗಿ ಸಂಸ್ಥೆ ಪಾಲಿಗೆ : ನಿರ್ವಹಣೆ,ಕಾರ್ಯಾಚರಣೆ ವಹಿಸಲು KSIIDCಯಿಂದ EOI ಆಹ್ವಾನ

ಈ ನಡುವೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ಸೇವೆಗಳ ಗುಣಮಟ್ಟ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಾಗಬಹುದೆಂಬ ನಿರೀಕ್ಷೆಯೊಂದೆಡೆ ಇದ್ದರೆ, ಪ್ರಯಾಣಿಕರ ಮೇಲಿನ ಶುಲ್ಕ, ಸೇವೆಗಳ ದರ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರದಲ್ಲಿ ಸರ್ಕಾರದ ನಿಯಂತ್ರಣ ಹೇಗಿರಲಿದೆ ಎಂಬ ಪ್ರಶ್ನೆಗಳೂ ಎದುರಾಗಿವೆ. EOI ಪ್ರಕ್ರಿಯೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಹಣಾ ಕಂಪನಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳು ಭಾಗವಹಿಸುವ ಅವಕಾಶವಿದೆ. ಮುಂದಿನ ಹಂತದಲ್ಲಿ ಅರ್ಹ ಸಂಸ್ಥೆಯ ಆಯ್ಕೆ ಹಾಗೂ ನಿರ್ವಹಣಾ ಒಪ್ಪಂದದ ಷರತ್ತುಗಳು ಅಂತಿಮಗೊಳ್ಳುವ […]

Continue Reading

ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ಗ್ರಾಮಸ್ಥರಿಂದ ರಸ್ತೆಗಾಗಿ ವಿನೂತನ ಪ್ರತಿಭಟನೆ ; ಶಾಸಕರ ವಿರುದ್ಧ ಜನಾಕ್ರೋಶ

ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ರಸ್ತೆಯನ್ನು ಹಲವು ವರ್ಷಗಳಿಂದ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರಿಗೂ ಮನವಿ ಸಲ್ಲಿಸಿ, ರಸ್ತೆ ಪರಿಶೀಲನೆಗೆ ಕರೆದುಕೊಂಡು ಬಂದಿದ್ದರೂ, ಪ್ರತಿ ಬಾರಿ ‘ಅನುದಾನ ಬರಲಿ, ರಸ್ತೆ ಮಾಡೋಣ’ ಎಂಬ ಹಾರಿಕೆ ಉತ್ತರವೇ ಸಿಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಗ್ರಾಮಸ್ಥರೊಬ್ಬರು ; ನಮಗೆ ವಿಷ ಕೊಟ್ಟು ಬಿಡಿ ನಾವು ನಿಮಗೆ ಹೇಳೋದು – ಕೇಳೋದು ಎಲ್ಲಾ ಮುಗಿಯಲಿ ಎಂದು ಅಸಮಾಧಾನ […]

Continue Reading

ಶಿವಮೊಗ್ಗ | ಪರಿಷ್ಕೃತ ಬಿಆರ್‌ಸಿ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 17 ರೊಳಗಾಗಿ ಸಲ್ಲಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ; ಆಧುನಿಕ ಸೌಲಭ್ಯಗಳು, ನಿರಂತರ, ಉತ್ತಮ ವಿಮಾನ ಸಂಪರ್ಕ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾದ ಸಂಸದ ಬಿ.ವೈ. ರಾಘವೇಂದ್ರ

ನವೆಂಬರ್ ನಂತರವೂ ವಿಮಾನ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ತೆಗೆದುಕೊಳ್ಳಿ: ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಸ್ಟಾರ್ ಏರ್‌ನ ಪ್ರಸ್ತುತ ವಿಮಾನ ಸೇವೆಯನ್ನು ನವೆಂಬರ್ 2026ರ ನಂತರವೂ ಮುಂದುವರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಸೇವೆಯು ನವೆಂಬರ್ 2023ರಿಂದ RCS-UDAN ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಲಭ್ಯವಿರುವ ಏಕೈಕ ನಿಗದಿತ ವಿಮಾನ ಸೇವೆಯಾಗಿದೆ. ಈ ಸೇವೆಗೆ ದೊರೆಯುತ್ತಿರುವ ಮೂರು ವರ್ಷಗಳ ಪ್ರಸ್ತುತ ಆರ್ಥಿಕ […]

Continue Reading

ನಿಖಿಲ್ ಕುಮಾರಸ್ವಾಮಿ ನೇತೃತ್ವದ ಬಿಡದಿ ಪಾದಯಾತ್ರೆಗೆ ಶಿವಮೊಗ್ಗ ನಗರ ಜೆಡಿಎಸ್‌ನಿಂದ ಭರ್ಜರಿ ಬೆಂಬಲ

ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಬಿ. ಪ್ರಸನ್ನ ಕುಮಾರ್ ಅವರು, “ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟ. ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ದೇವೇಗೌಡರಂತಹ ಹಿರಿಯ ನಾಯಕರು ಪಾಲ್ಗೊಂಡಿರುವುದು ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ. ರೈತರ ಭೂಮಿಯನ್ನು ಕಬಳಿಸುವ ಯಾವುದೇ ಯೋಜನೆಯನ್ನು ನಾವು ಸಹಿಸುವುದಿಲ್ಲ. ಶಿವಮೊಗ್ಗ ನಗರ ಜೆಡಿಎಸ್ ಈ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತದೆ. ಸರ್ಕಾರ ತಕ್ಷಣ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು” ಎಂದು ಹೇಳಿದರು. ನಗರ ಜೆಡಿಎಸ್ ಅಧ್ಯಕ್ಷ […]

Continue Reading

ಚಿಕ್ಕಮಗಳೂರು | “ಬೀರೂರಿನ ಪ್ರೀತಿ ಕ್ಯಾಂಟೀನ್ನಲ್ಲಿ ದೋಸೆ ಸವಿದ ಸಚಿವ ಮಧು ಬಂಗಾರಪ್ಪ”

ಬಳಿಕ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಮಾಲೀಕರೊಂದಿಗೆ ಸಚಿವರು ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ತಿಂಡಿ-ತಿನಿಸುಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಕ್ಯಾಂಟೀನ್‌ನ ಸೇವೆಯನ್ನು ಈ ವೇಳೆ ಪ್ರಶಂಸಿಸಿದರು. ಈ ಭೇಟಿಯು ಸ್ಥಳೀಯ ಸಾರ್ವಜನಿಕರು ಮತ್ತು ಅಭಿಮಾನಿಗಳಲ್ಲಿ ಹರ್ಷ ತಂದಿದ್ದು, ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್. ಬಂಗಾರಪ್ಪ ಅವರೊಂದಿಗಿನ ಹಳೆಯ ಒಡನಾಟವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವಂತೆ ಮಾಡಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.

Continue Reading

ಶಿವಮೊಗ್ಗ ರಂಗಾಯಣ : ರೆಪರ್ಟರಿಗೆ ತಂತ್ರಜ್ಞರ ಮತ್ತು ಕಲಾವಿದರ ನೇಮಕಕ್ಕೆ ಅರ್ಜಿ ಆಹ್ವಾನ

ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ. ಊಟ, ವಸತಿ ವ್ಯವಸ್ಥೆಯನ್ನು ತಂತ್ರಜ್ಞರೇ ಮಾಡಿಕೊಳ್ಳಬೇಕು. ತಂತ್ರಜ್ಞರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ. ತಂತ್ರಜ್ಞರ ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ. ತಂತ್ರಜ್ಞರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ. ಕಲಾವಿದರ ನೇಮಕದ ನಿಬಂಧನೆಗಳು:- ರಂಗಾಯಣ, ಶಿವಮೊಗ್ಗದ ರೆಪರ್ಟರಿಗೆ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುವುದು. 12 ಜನ ಕಲಾವಿದರಲ್ಲಿ ಕನಿಷ್ಠ 04 ಮಹಿಳೆಯರಿಗಾಗಿ ಮೀಸಲಾಗಿದೆ. ಹಾಗೂ 04 ಪರಿಶಿಷ್ಟ ಜಾತಿ/ವರ್ಗದ […]

Continue Reading