Author: News E-Kannada
ಸಿನಿಮಾ ಪ್ರಚಾರಕ್ಕಾಗಿ ಅಮುಕು ಡುಮುಕು ಮಂಜುವಿನಿಂದ ಪೆಟ್ರೋಲ್ ಕುಡಿದಂತೆ ನಾಟಕ ; ದಾಖಲಾಯಿತು FIR
ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒದ್ದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇತ್ತೀಚೆಗೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ಪ್ರಚಾರಕ್ಕಾಗಿ ಹೇಗೆಲ್ಲಾ ಕೀಳುಮಟ್ಟಕ್ಕಿಳಿಯುತ್ತಿದ್ದಾರೆ ಅನ್ನೋದಕ್ಕೆ ಅಮುಕು ಡುಮುಕು ಮಂಜು ಘಟನೆ ತಾಜಾ ಉದಾಹರಣೆಯಾಗಿದೆ. ಸೂರಿ ಅಣ್ಣ ಸಿನಿಮಾದ ಪ್ರಚಾರಕ್ಕಾಗಿ ನಕಲಿ ಪೆಟ್ರೋಲ್ ಸೇವಿಸಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ವಿರುದ್ಧ ಕೇಸ್ ದಾಖಲಾಗಿದೆ. […]
Continue Readingಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವು?
ಇಸ್ರೇಲ್ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮೇಲೆ ಅಮೆರಿಕ ವೈಮಾನಿಕ ಪಡೆಗಳು ದಾಳಿ ನಡೆಸಿದ್ದು, ಇದು ಪ್ರಮುಖ ಮಿಲಿಟರಿ ಕಾರ್ಯಾಚರಣೆಯಾಗಿದೆ. ಅಮೆರಿಕ ಸೇನಾಪಡೆ ಇರಾನ್ ಮೇಲಿನ ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.ಇರಾನ್ ದುರಾಡಳಿತವನ್ನು ಕೊನೆಗಾಣಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಅಲ್ಲದೇ ಇರಾನ್ ನ ಮಿಸೈಲ್ ಇಂಡಸ್ಟ್ರಿ ಹಾಗೂ ಪರಮಾಣು ನೆಲೆಯನ್ನು ನಿಷ್ಕ್ರಿಯಗೊಳಿಸುವ ಉದ್ದೇಶ ಹೊಂದಿರುವುದಾಗಿ ಟ್ರಂಪ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
Continue Reading‘ಧುರಂಧರ್ 2’ Vs ಟಾಕ್ಸಿಕ್ ನಡುವೆ ಬಿಗ್ ಫೈಟ್ ; ಮಾರ್ಚ್ 19 ರಂದು ಸಿನಿ ಪ್ರಿಯರಿಗೆ ಹಬ್ಬ
ವಿದೇಶಿ ಮಾರುಕಟ್ಟೆಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಫ್ರೆಂಚ್ ವಿತರಣಾ ಸಂಸ್ಥೆಗಳು ಸಿನಿಮಾ ಮುಂದೂಡಿಕೆಯಾಗುವುದಿಲ್ಲ ಎಂದು ಖಚಿತಪಡಿಸಿವೆ. ಇದರಿಂದಾಗಿ ಅಭಿಮಾನಿಗಳ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ. ಪ್ರೀ-ಬುಕಿಂಗ್ ಟ್ರೆಂಡ್ ನೋಡಿದರೆ ಮೊದಲ ದಿನವೇ ಸಿನಿಮಾ ಹೊಸ ದಾಖಲೆ ಬರೆಯುವ ಮುನ್ಸೂಚನೆ ಸಿಕ್ಕಿದೆ. ರಣವೀರ್ ಸಿಂಗ್ ಕ್ರೇಜ್ ಮಾರುಕಟ್ಟೆಯಲ್ಲಿ ಜೋರಾಗಿದೆ. ಬಾಲಿವುಡ್‌ನ ‘ಧುರಂಧರ್ 2’ ಮತ್ತು ಸ್ಯಾಂಡಲ್‌ವುಡ್‌ನ ‘ಟಾಕ್ಸಿಕ್’ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬರುವುದರಿಂದ ಚಿತ್ರಮಂದಿರಗಳ ಹಂಚಿಕೆಯಲ್ಲಿ ಪೈಪೋಟಿ ಶುರುವಾಗಿದೆ. ಇದು […]
Continue Readingದಾವಣಗೆರೆ | ರಾಜ್ಯಮಟ್ಟದ ಕೃಷಿ ಮೇಳ, ರೈತರ ಬದುಕು ಹಸನಾಗಬೇಕು ; ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ
‘ರೈತರ ಬದುಕು ಅತಂತ್ರವಾಗಿದೆ. ಅವರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ರಾಜ್ಯಮಟ್ಟದ ಕೃಷಿಮೇಳ ಆಯೋಜನೆ ಮಾಡಿದ್ದು, ಕೃಷಿಗೆ ಸಂಬಂಧಿಸಿದ ಹೊಸ ಹೊಸ ವಿಷಯಗಳ ಚರ್ಚೆ, ಆವಿಷ್ಕಾರಗಳನ್ನು ಪರಿಚಯ ಮಾಡಿಕೊಡುವ ಉದ್ದೇಶವಿದೆ. ಕಡಿಮೆ ಸಮಯದಲ್ಲಿ ಎಲ್ಲರ ಸಹಕಾರದಿಂದ ಮೇಳ ಆಯೋಜಿಸಲಾಗಿದೆ’ ಎಂದು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ‘ಹಿರೇಕಲ್ಮಠದ ಸ್ವಾಮೀಜಿ ರೈತರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ಕೃಷಿಮೇಳ ನಡೆಸಲು ಮುಂದಾಗಿರುವುದು ಇಡೀ ದೇಶಕ್ಕೆಮಾದರಿ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು. ‘ಹಾಲಿನ ದರ ನಿಗದಿ ಮಾಡಿದಂತೆ […]
Continue Readingಶಿವಮೊಗ್ಗ | SSLC ವಿದ್ಯಾರ್ಥಿ ಹತ್ಯೆ ಖಂಡಿಸಿ ABVP ಪ್ರತಿಭಟನೆ
ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ, ಕಳೆದ ಫೆಬ್ರವರಿ 24ರಂದು ಶಾಲಾ ವಿದ್ಯಾರ್ಥಿಗಳ ನಡುವಿನ ಗಲಾಟೆಯಲ್ಲಿ ಸಂಕೇತ್ ಎಂಬ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ ವಿಚಾರ ಎಂದು ತಿಳಿಸಲಾಗಿದೆ. ಈ ಕೃತ್ಯ ಎಸಗಿದವರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದ್ದರೂ ಸಹ, ಪೊಲೀಸರು ಯಾವುದೇ ಹಸ್ತಕ್ಷೇಪಕ್ಕೆ ಒಳಗಾಗದೆ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ. ನಗರದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮತ್ತು ಗಾಂಜಾ ಪದಾರ್ಥಗಳು ಅತಿ ಸುಲಭವಾಗಿ […]
Continue Readingಶಿವಮೊಗ್ಗ | ಗಲಾಟೆ ಪ್ರಕರಣ ; ಆರೋಪಿಗಳಿಗೆ ತಲಾ 1 ವರ್ಷ ಜೈಲು, ₹80,000 ಪರಿಹಾರಕ್ಕೆ ನ್ಯಾಯಾಲಯ ಆದೇಶ
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 448, 504, 323, 354, 506, 427 ಸಹಿತ 149 ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ತನಿಖಾಧಿಕಾರಿ ಕೃಷ್ಣ ನಾಯ್ಕ್ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಶ್ರೀ ತಿಪ್ಪೇಶ್ ರಾವ್ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ 1ನೇ ಎ.ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶ ಶ್ರೀ ರವಿ ಕುಮಾರ್ ವಿ. ಅವರು 26-02-2026 ರಂದು […]
Continue Readingವಿದ್ಯಾರ್ಥಿಗಳಿಗೆ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಪಾಠ ; NCERT ಗೆ ಸುಪ್ರೀಂ ಕೋರ್ಟ್ ಚಾಟಿ
8ನೇ ತರಗತಿಯ ಪಠ್ಯಕ್ರಮದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಕುರಿತು ಅಧ್ಯಾಯವನ್ನು ಸೇರಿಸುವುದಕ್ಕೆ ಸಿಜೆಐ ಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭೂಮಿಯ ಮೇಲಿನ ಯಾರಿಗೂ ನ್ಯಾಯಾಂಗವನ್ನು ಕೆಣಕಲು ಅಥವಾ ಅದರ ಸಮಗ್ರತೆಯ ಮೇಲೆ ದಾಳಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ. ಈ ವಿಷಯವನ್ನು ಸ್ವತಃ ಗಮನಿಸಿರುವುದಾಗಿ ಹೇಳಿದ ಸಿಜೆಐ, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು. ವಿವಾದ ಏನು? 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಚಿಸಲಾದ ಹೊಸ NCERT ಸಮಾಜ ವಿಜ್ಞಾನ […]
Continue Readingಶಿವಮೊಗ್ಗ | ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ : ಶಾಸಕ ಎಸ್.ಎನ್. ಚನ್ನಬಸಪ್ಪ
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Continue Reading

