ಉತ್ತಮ ಸ್ನೇಹಿತರಿಂದ ಮಹಿಳೆಯರ ಯಶಸ್ಸಿನ ಹಾದಿ ಸುಗಮ : ಅರ್ಚನಾ ನಿರಂಜನ್

ಶಿವಮೊಗ್ಗ

ಶಿವಮೊಗ್ಗದಲ್ಲಿ ಮಹಿಳಾ ದಸರಾ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.

ಕ್ರೀಡೆಯ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ, ಆರೋಗ್ಯ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ವಿವಿಧ ವಿಭಾಗಗಳಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಪ್ರತಿಭೆ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ರೀಡಾಕೂಟವು ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಹಾಗೂ ಪರಸ್ಪರ ಸ್ನೇಹ-ಸೌಹಾರ್ದಕ್ಕೆ ವೇದಿಕೆಯಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯರು ಆಗಿರುವಂತ ಅರ್ಚನಾ ನಿರಂಜನ್ ಮಾತನಾಡಿ ಮಹಿಳೆಯರು ಸಾಧನೆ ಹಾಗೂ ಸ್ಫೂರ್ತಿದಾಯಿಕವಾಗಿ ಇರಬೇಕು. ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹಳ ಮಹತ್ವದ್ದು. ಉತ್ತಮ ಸ್ನೇಹಿತರು ಇದ್ದರೆ ಮಹಿಳೆಯರು ಯಶಸ್ಸಿನ ಹಾದಿ ಸುಗಮವೆಂದು ಅಭಿಪ್ರಾಯಪಟ್ಟರು. ಹಾಗೂ ಈ ಸಂದರ್ಭದಲ್ಲಿ ಅನುಪಮಾ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿದೆ ಹಾಗೂ ಎಲ್ಲರು ಈ ಒಂದು ಕ್ರೀಡಾ ಕೂಟವನ್ನು ಕ್ರೀಡಾ ಸ್ಫೂರ್ತಿಯಾಗಿ ತೆಗೆದುಕೊಳ್ಳಿ ಮತ್ತು ಅನುಪಮಾ ಅವರ ಸಂಗಡಿಗರು ಕಾರ್ಯಕ್ರಮವನ್ನು ಚೆನ್ನಾಗಿ ನೆಡಿಸಿಕೊಂಡು ಬಂದಿದ್ದಾರೆ ಎಂದು ಮೆಲುಕು ಹಾಕಿದರೂ.

ಈ ಒಂದು ಕಾರ್ಯಕ್ರಮದಲ್ಲಿ ಸುವರ್ಣ ಶಂಕರ್, ರೂಪ ಹಲವರು ಉಪಸ್ಥಿತರಿದ್ದರು.

Author