ಶಿವಮೊಗ್ಗ ನಗರದ ಪ್ರಸಿದ್ಧ”ಸುಬ್ಬಾಭಟ್ಟ ಅಂಡ್ ಸನ್ಸ್ ” ವಾಚ್ ಅಂಗಡಿಯ ಮಾಲೀಕರಾಗಿದ್ದಂತಹ ಎ. ಪಿ ನಾಗಭೂಷಣ ಭಟ್ ಇನ್ನಿಲ್ಲ..!

ಶಿವಮೊಗ್ಗ

ಶಿವಮೊಗ್ಗ ವಿಪ್ರ ಸಮಾಜದ ಪ್ರಮುಖರು ನಗರದ ಪ್ರಸಿದ್ಧ”ಸುಬ್ಬಾಭಟ್ಟ ಅಂಡ್ ಸನ್ಸ್ ” ವಾಚ್ ಅಂಗಡಿಯ ಮಾಲೀಕರಾಗಿದ್ದಂತಹ ಎ ಪಿ ನಾಗಭೂಷಣ ಭಟ್ ರವರು ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ವೈಕುಂಠ ವಾಸಿಗಳಾದ್ದಾರೆ.ಅವರಿಗೆ 74 ವರ್ಷ ವಯಸ್ಸಾಗಿತ್ತು.

ಅವರು, ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ, ಸಹೋದರ ಕುಮಾರ್, ಆರು ಜನ ಸಹೋದರಿಯರು ಮತ್ತು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಅವರು ಶಿವಮೊಗ್ಗ ನಗರದ ಸಮಾಜಮುಖಿ ಕಾರ್ಯಗಳಿಗೆ ಸದಾ ತಮ್ಮ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದರು.

ಅವರ ಅಗಲಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಹಾಲಿ ಶಾಸಕರಾದ ಎಸ್ ಎನ್ ಚೆನ್ನಬಸಪ್ಪ, ಮಾಜಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಭಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ನಟರಾಜ್ ಭಾಗವತ್ ಇನ್ನೂ ಅನೇಕರು ತಮ್ಮ ತೀವ್ರ ಸಂತಾಪ ತಿಳಿಸಿದ್ದಾರೆ.

Author