ಬೆಂಗಳೂರಿನ ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಯಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ಕೂಲಿ ಕಾರ್ಮಿಕರ ಮಕ್ಕಳಿಗೆ ಹಾಲು, ಹಣ್ಣು, ಮೊಸರು, ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇತಿಹಾಸ ತಜ್ಞ ಮತ್ತು ಲೇಖಕರಾದ ಡಾ. ಪಾಂಡುಕುಮಾರ್ ಮಾತನಾಡಿ ನಾಗರಪಂಚಮಿ ದಿನ ಹುತ್ತಗಳಿಗೆ ಹಾಲು ಹಾಕುವ ಬದಲು ಕೂಲಿಕಾರ್ಮಿಕರ ಮಕ್ಕಳಿಗೆ ಹಾಲು, ಮೊಸರು, ಹಣ್ಣು ನೀಡುವ ಮೂಲಕ ನಾಗರ ಪಂಚಮಿಯನ್ನು ಆಚರಿಸುತ್ತಿರುವುದು ಸಂತೋಷದ ವಿಷಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಶ್ರೀಮತಿ ಬಿಂದು ಶಿವಪ್ರಕಾಶ್ ಮತ್ತುಇಸ್ರೋ ವಿಶ್ರಾಂತ ವಿಜ್ಞಾನಿ ಶಿವಪ್ರಕಾಶ್ ಅವರು ಭಾಗವಹಿಸಿ ಮಾತನಾಡಿ ನಾಗರಪಂಚಮಿ ಹಬ್ಬ ಎಂದರೆ ಸಹೋದರ ಸಹೋದರಿಯರ ಹಬ್ಬ ಎಂದು ಹೇಳಲಾಗುತ್ತಿದೆ, ನಮ್ಮ ಸಹೋದರ ಸಹೋದರಿಯರು ಮಕ್ಕಳಿಗೆ ಹಾಲು ಹಣ್ಣನ್ನು ವಿತರಿಸುವ ಮೂಲಕ ಇಂದು ನಾಗರಪಂಚಮಿಯ ಸಂಭ್ರಮದ ಹಬ್ಬವನ್ನು ಆಚರಿಸಿದ್ದೇವೆ ಒಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಆಯೋಜಿಸಿದ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ರವರು ಹಾಲು, ಮೊಸರು, ಹಣ್ಣನ್ನು ಮಕ್ಕಳಿಗೆ ವಿತರಿಸಿದ್ದ ನಂತರ ಮಕ್ಕಳ ಮುಖದಲ್ಲಿ ಮೂಡುವ ಮಂದಹಾಸ ವರ್ಣಿಸಲಸಾಧ್ಯ ಎಂದು ಹೇಳಿದರು, ಹಾಗೂ ಮೂಡನಂಬಿಕೆಗಳಿಂದ ಜನರು ದೂರವಿದ್ದು ವಿಜ್ಞಾನದಡೆಗೆ ಹೆಜ್ಜೆ ಹಾಕಬೇಕೆಂದು ತಿಳಿಸಿದರು.
ನಾಗರಪಂಚಮಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದು ಸಂತೋಷವಾಗಿದೆ ಎಂದು ಕಾನೂನು ಮಾಪನ ಶಾಸ್ತ್ರದ ವಿಶ್ರಾಂತ ಅಧಿಕಾರಿ ಜಿ. ಏನ್ ನರಸಿಂಹಮೂರ್ತಿಯವರು ಹರ್ಷ ವ್ಯಕ್ತಪಡಿಸಿದರು.





