ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್ಸಿ ಸಿಟಿ ರವಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿ ಪ್ರತಿಕ್ರಿಯಿಸಿರುವ ಸಿಟಿ ರವಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು ‘ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ’
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಅವರು ಒತ್ತಾಯಿಸುತ್ತಿದ್ದಾರೆ. ನಾನು ಈ ಅನಕ್ಷರಸ್ಥ ಜನರನ್ನು ಕೇಳಲು ಬಯಸುತ್ತೇನೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಸಿಎಎ ಮತ್ತು ಎನ್ಆರ್ಸಿಗೂ ಏನು ಸಂಬಂಧ? ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸುವ ರಾಷ್ಟ್ರವಿರೋಧಿ ಅಂಶಗಳು ಮತ್ತು ‘ತುಕ್ಡೆ ತುಕ್ಡೆ ಗ್ಯಾಂಗ್’ ಸದಸ್ಯರು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದಾರೆ ಎಂದು ರವಿ ಹೇಳಿದ್ದಾರೆ.
ನನ್ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಪೆಟ್ರೋಲ್ ಟ್ಯಾಂಕ್ಗೆ ಕಡ್ಡಿ ಗೀರಲು ಹೋದ ಮುಲ್ಲಾನ ಬಗ್ಗೆ ನಾನು ಮಾತನಾಡಿದ್ದೇನೆ, ಜೀಪಿಗೆ ಬೆಂಕಿ ಹಚ್ಚು ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಸಾವಿರ ಮಾತನಾಡುತ್ತೇನೆ ಎಂದು ವಿಡಿಯೋ ಸಮೇತ ಸಾಕ್ಷಿ ತೋರಿಸಿದ ಸಿಟಿ ರವಿ ಅವರು, ನಾನು ದೇಶ ವಿರೋಧಿ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಮುಸ್ಲಿಮರ ಬಗ್ಗೆ ಮಾತನಾಡಿಲ್ಲ. ಮುಸ್ಲಿಮರ ಬಗ್ಗೆ ಒಂದು ಪದವೂ ಮಾತನಾಡಿಲ್ಲ. ನಾಗರೀಕ, ದೇಶಭಕ್ತ, ನೀಟ್ ವಿದ್ಯಾರ್ಥಿಗಳು ಈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡೋಲ್ಲ. ಸಂವಿಧಾನ ಕಾಳಜಿ ಇರೋರು ಇಂಥ ಕೆಲಸ ಮಾಡೋಲ್ಲ. ಅವನ ಎದೆ ಸೀಳಿದರೆ ಮೂರಕ್ಷರ ಇರಲ್ಲ, ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದವನ ಬಗ್ಗೆ ಮಾತನಾಡಿದರೆ ಕೇಸ್ ಹಾಕ್ತೀರಾ?
ಪಹಲ್ಗಾಂ ನಲ್ಲಿ ಕಲ್ಮಾ ಹೇಳದಿದ್ದಕ್ಕೆ ಸಾಯಿಸಿದ್ರಲ್ಲ ಅದಕ್ಕೆ ಏನು ಹೇಳ್ತೀರಾ? ನನ್ನ ಮೇಲೆ ಕೇಸ್ ಕೊಟ್ಟಿರೋನಿಗೂ, ಅವನಿಗೂ ಏನು ಸಂಬಂಧ? ಮೊದಲು ಪೊಲೀಸರು ಈ ಬಗ್ಗೆ ತನಿಖೆ ಮಾಡಲಿ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ, ಆದರೆ ಜಿಹಾದಿಗಳ ಒಳ್ಳೆಯವರು ಅಂತಾ ನಾನು ಹೇಳೋಲ್ಲ ಎಂದರು.
