ಶಿವಮೊಗ್ಗ | ಎಸ್ಡಿಪಿಐ ಪಕ್ಷದ “ಜಿಲ್ಲಾ ಪ್ರತಿನಿಧಿಗಳ ಸಭೆ”

ಶಿವಮೊಗ್ಗ

ಶಿವಮೊಗ್ಗ, ನಗರದ ಎನ್.ಟಿ ರಸ್ತೆಯಲ್ಲಿರುವ ಫಲಕ್ ಪ್ಯಾಲೇಸ್ ಸಭಾಂಗಣದಲ್ಲಿ ಇಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲಾ ಅಧ್ಯಕ್ಷರಾದ ಜೀಲಾನ್ ಖಾನ್ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಈ ಸಭೆಗೆ ಚಾಲನೆ ನೀಡಿದರು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಭಾಗವಹಿಸಿದ್ದರು, ಅತಿಥಿ ಗಳಾಗಿ ರಾಜ್ಯ ಕಾರ್ಯದರ್ಶಿ ಅಕ್ರಂ ಮೈಸೂರು ರವರು ಭಾಗವಹಿಸಿದ್ದರು.ಇವರ ಜೊತೆಗೆ ವೇದಿಕೆ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್ ಅಹ್ಮದ್ ಮತ್ತು ಅಬ್ದುಲ್ ಜಮೀರ್, ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಖಾನ್ ಮತ್ತು ಖಜಾಂಚಿ ಅಬ್ದುಲ್ ರಹೀಂ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲೆಯ ಕಳೆದ 18 ತಿಂಗಳ ಪಕ್ಷದ ಕಾರ್ಯಚಟುವಟಿಕೆಗಳು ಸಂಕ್ಷಿಪ್ತ ರಿಪೋರ್ಟ್ ಮಂಡಿಸಲಾಯಿತು. ನಂತರ ಕೆಲವೊಂದು Resolutions ಗಳನ್ನು ಪಾಸ್ ಮಾಡಲಾಗಿದೆ.

ಇದರ ಸಂಪೂರ್ಣ ಮಾಹಿತಿ.

ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗಕ್ಕೆ ನೀಡಲು ಎಸ್‌ಡಿಪಿಐ ಆಗ್ರಹ.ಶಿವಮೊಗ್ಗ: ರಾಜ್ಯ ಸರ್ಕಾರವು ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗ ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಎಸ್‌ಡಿಪಿಐ (SDPI) ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್ ಒತ್ತಾಯಿಸಿದ್ದಾರೆ.

ಇಂದು ನಡೆದ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ಹೈಕೋರ್ಟ್ ಸಂಚಾರಿ ಪೀಠವನ್ನು ನೀಡುವುದು ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಶಿವಮೊಗ್ಗ ನಗರವು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸುಲಭವಾಗಿ ತಲುಪಬಹುದಾದ ಕೇಂದ್ರ ಬಿಂದುವಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಹೈಕೋರ್ಟ್ ಸಂಚಾರಿ ಪೀಠದ ಲಾಭ ಪಡೆಯಲು ಬರುವ ಸಾರ್ವಜನಿಕರಿಗೆ ಶಿವಮೊಗ್ಗದಲ್ಲಿ ಉತ್ತಮ ಬಸ್, ರೈಲು ಹಾಗೂ ವಿಮಾನ ಯಾನದ ಸೌಕರ್ಯಗಳಿದ್ದು, ಸುಗಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಶಿವಮೊಗ್ಗ ಜಿಲ್ಲೆಗೆ ಹೈಕೋರ್ಟ್ ಸಂಚಾರಿ ಪೀಠವನ್ನು ತುರ್ತಾಗಿ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಶಿವಮೊಗ್ಗ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರತಿ ತಾಲೂಕಿನಲ್ಲಿ ಉನ್ನತ ವೈದ್ಯರಿಗೆ ನೇಮಕ ಮಾಡಬೇಕು ಮತ್ತು ಉನ್ನತ ಪೀಠೋಪಕರಣಗಳು ಅಳವಡಿಸಿ ಜನರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಎಸ್ಡಿಪಿಐ ಪಕ್ಷದ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಖಾನ್ ಅವರ ಇಂದು ನಡೆದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ಅದಕ್ಷಟು ಬೇಗ ನಡೆಸಲು ಒತ್ತಾಯ.ಇಂದು ನಡೆದ ಎಸ್ಡಿಪಿಐ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಹ್ಮದ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿ ಹಲವು ಸಮಸ್ಯೆಗಳಿದ್ದು ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಬದಗಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವ ಕಾರ್ಪೋರೇಟರ್ ಇಲ್ಲದೆ ಜನರು ಪರದಾಡುತ್ತಿದ್ದಾರೆ.ಮಹಾನಗರ ಪಾಲಿಕೆಯ ವಾರ್ಡ್ಗಳು ಅನಾಥವಾಗಿದ್ದು. ಕಳೆದ ಮೂರು ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಾಗಿತ್ತು ಆದರೇ, ವಾರ್ಡ್ ವಿಂಗಡಣೆ ನೆಪ ಹೇಳಿಕೊಂಡು ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದು ಖಂಡನೀಯ.ಜನರ ಸಮಸ್ಯೆಗಳನ್ನು ಆಲಿಸಬೇಕಾದ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಸಾಗಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲಾ ಸಮಸ್ಯೆಗಳಿಗೆ ಚುನಾವಣೆಯೇ ಸೂಕ್ತ ಪರಿಹಾರ.ಅದೆಷ್ಟು ಬೇಗ ಚುನಾವಣೆ ಆಯೋಗವು ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

S.I.R ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಯಾವ ಒಬ್ಬ ಶಿವಮೊಗ್ಗ ಜಿಲ್ಲೆಯ ಮತದಾರನು ಹೊರ ಉಳಿಯಬಾರದು, ಪ್ರತಿ ಬೂತ್ ಮಟ್ಟದಲ್ಲಿ ಜನರಿಗೆ ಸಹಕರಿಸಲು ಮತ್ತು ಬೂತ್ ಲೆವೆಲ್ ಆಫಿಸರ್ಸ್ BLOಗಳು ನಿರ್ಲಕ್ಷ್ಯ ವಹಿಸದೇ ಜನರಿಗೆ ಸಹಕರಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಮೀರ್ ಇಂದು ನಡೆದ ಎಸ್ಡಿಪಿಐ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಜೊತೆಗೆ ಉನ್ನತ ಗೈನಿಕ್ ವೈದ್ಯರನ್ನು ನೇಮಕ ಮಾಡಿ ಎಂದು ಜಿಲ್ಲಾ ಖಜಾಂಚಿ ಅಬ್ದುಲ್ ರಹೀಂ ಅವರು ಇಂದು ನಡೆದ ಎಸ್ಡಿಪಿಐ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

IIT, AIMS ಮಾದರಿಯ ಸಂಸ್ಥೆಗಳನ್ನು ಶಿವಮೊಗ್ಗ ಜಿಲ್ಲೆಗೆ ತಂದೆ ಉನ್ನತ ಶಿಕ್ಷಣ ಪಡೆಯುವ ಯುವ ಜನತೆಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸಮಿತಿ ಸದಸ್ಯರಾದ ಮಹಮ್ಮದ್ ಗೌಸ್ ರವರು ಇಂದು ನಡೆದ ಎಸ್ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಒತ್ತಾಯಿಸಿದ್ದಾರೆ..

S.I.R ಪ್ರಕ್ರಿಯೆಯಲ್ಲಿ ಸಹಾಯಕ್ಕಾಗಿ ಪ್ರತಿ ಬೂತ್ ಮಟ್ಟದ SDPI ವತಿಯಿಂದ ಬೂತ್ ಲೆವೆಲ್ ಅಸಿಸ್ಟೆಂಟ್ BLA ಸಾಧ್ಯವಾದ ಬೂತ್ ಮತ್ತು ವಾರ್ಡ್ ಗಳಲ್ಲಿ ನೆಮಿಸಿ ಜನರಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಸಮಿತಿ ಸದಸ್ಯರಾದ ಇಸಾಕ್ ಅಹ್ಮದ್ ಅವರು ಇಂದು ನಡೆದ ಎಸ್ಡಿಪಿಐ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

Author