ಶಿವಮೊಗ್ಗ ಕೆಲವು ದಿನಗಳ ಹಿಂದೆ ನಗರದ ಮುಖ್ಯ KSRTC ಬಸ್ ನಿಲ್ದಾಣದಲ್ಲಿ ಶೌಚಾಲಯದ ಸಿಬ್ಬಂದಿಗಳು ಅಧಿಕ ಹಣ ವಸೂಲಿ ಹಾಗೂ ಕೆಟ್ಟದಾಗಿ ನಿಂದನೆ ಅಸಭ್ಯ ವರ್ತಿಸುವ ಕುರಿತಾಗಿ ಫೇಸ್ಬುಕ್ ನಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು, ವೈರಲ್ ಆಗಿದ್ದ ವಿಡಿಯೋದಲ್ಲಿ, ಹಲವಾರು ಮಹಿಳೆಯರು ಫೇಸ್ ಬುಕ್ ವಿಡಿಯೋದಲ್ಲಿ ಶೌಚಾಲಯದ ಬಳಿ ಸಿಬ್ಬಂದಿಗಳು ಕೆಟ್ಟದಾಗಿ ವರ್ತಿಸುವುದು ಹಾಗೂ ದುಪ್ಪಟ್ಟು ಹಣ ಕೇಳುವುದು ಹಾಗೆಯೇ ಬಸ್ ನಿಲ್ದಾಣದ ಶೌಚಾಲಯ ಬಳಿ ತಮಗಾದಂತಹ ಕೆಟ್ಟ ಅನುಭವವನ್ನು ಫೇಸ್ಬುಕ್ ಕಾಮೆಂಟ್ ಸೆಕ್ಷನ್ ನಲ್ಲಿ ಬರೆಯುವ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದರು.
ಈ ವಿಡಿಯೋ ಗಮನಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯೆಯಾದ ಅರ್ಚನಾ ನಿರಂಜನ್ ಅವರು ಮಹಿಳಾ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ, ನೋವು ಕುರಿತು ಖುದ್ದಾಗಿ ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಆಗಮಿಸಿ, KSRTC ಡಿಸಿ ನವೀನ್ ಅವರನ್ನು ಭೇಟಿಯಾಗಿ ಈ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಹಾಗೂ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್ ಗಳು ನಗರದೊಳಗೆ ಸಂಚಾರ ಮಾಡುತ್ತಿವೆ ಹಾಗೂ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಸಂಚಾರ ಮಾಡಬಾರದೆಂದು ಜಿಲ್ಲಾಧಿಕಾರಿ ಆದೇಶವಿದ್ದರೂ, ಆದೇಶ ಯಾಕೆ ಪಾಲನೆ ಮಾಡುತ್ತಿಲ್ಲ, ಅಪಘಾತಗಳು ಸಂಭವಿಸಿದ್ದಲ್ಲಿ ಯಾರು ಜವಾಬ್ದಾರಿ ಆಗುತ್ತಾರೆ?
ಮತ್ತು ಬಸ್ ನಿಲ್ದಾಣ ಶೌಚಾಲಯದಲ್ಲಿ ಹೆಣ್ಣಮಕ್ಕಳೊಂದಿಗೆ ಅಸಭ್ಯ ನಡೆದುಕೊಳ್ಳುತ್ತಿದ್ದಾರೆ ಅಲ್ಲಿ ಕೆಲಸ ಮಾಡುವುವರು ಎಂಬ ದೂರುಗಳು ಬರುತ್ತಿವೆ ಹಾಗೂ ಶೌಚಾಲಯಕ್ಕೆ ಎಷ್ಟು ಹಣ ನೀಡಬೇಕು ಅದನ್ನಾದರೂ ತಿಳಿಸಿ ಎಂಬಿತ್ಯಾದಿ ಪ್ರಶ್ನೆಗಳನ್ನು KSRTC ಡಿಸಿ ಮುಂದಿಟ್ಟರು.

ಇದಕ್ಕೆ ಸ್ಪಂದಿಸಿದ ಡಿಸಿ ನವೀನ್ ಶೌಚಾಲಯ ಬಳಿ ಸಿಸಿಟಿವಿ ಯಿದೆ ಹಾಗೆಯೇ ಶೌಚಾಲಯದಲ್ಲಿ ಆಗುತ್ತಿದ್ದ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಹಾಗೆಯೇ ಮುಂಚೆಗಿಂತ ಈಗ ತುಂಬಾ ಕಡಿಮೆ ಆಗಿದೆ ಸಮಸ್ಯೆ ಬಹಳಷ್ಟು ಸುಧಾರಿಸಿದ್ದೇವೆ ಎಂದು ತಿಳಿಸಿದರು. ಹಾಗೆಯೇ ವಿಡಿಯೋ ಮಾತ್ರ ಕಾಣಿಸುತ್ತೆ ಸಿಸಿಟಿವಿ ಯಲ್ಲಿ ಎರಡು ಮೂರು ದಿನದಲ್ಲಿ ಸಂಭಾಷಣೆ ಕೇಳುವ ರೀತಿ ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಶೌಚಾಲಯ ಮೂತ್ರ ವಿಸರ್ಜನೆ ಎಲ್ಲವನ್ನು ಉಚಿತ ಮಾಡಿದರೆ ಈ ಸಮಸ್ಯೆ ಆಗುವುದಿಲ್ಲ ಹಾಗಾಗಿ ಇದರ ಬಗ್ಗೆ ಕೂಡ ಯೋಚಿಸುತ್ತಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು ನಗರದ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಕಾರಣ ಮತ್ತೆ ಕೆಲವು ಹೊಸ ಚಾಲಕರು ದಾವಣಗೆರೆ ಅಥವಾ ಶಿಕಾರಿಪುರ ತೆರಳುವ ಹಾಗೂ ಅಲ್ಲಿಂದ ಬರುವ ಬಸ್ ಗೊತ್ತಿಲ್ಲದೇ ನಗರದೊಳಗೆ ಸಂಚಾರ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಿಕೊಡುತ್ತೇವೆ ಎಂದರು.
ಹಾಗೆಯೇ ಚಿತ್ರದುರ್ಗ ತೆರಳುವ ಬಸ್ ಚಾಲಕರು ನಿರ್ವಾಹಕರು ನಗರದೊಳಗೆ ಸಂಚರಿಸುತ್ತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಸ್ವತಃ ಸರ್ಕಲ್ ಇನ್ಸ್ಪೆಕ್ಟರ್ ಅವರೇ ಬಸ್ ಗಳನ್ನು ತಡೆದು ವಾಪಾಸ್ ನಗರದೊಳಗೆ ಬರಬೇಡಿ ಎಂದು ತಿಳಿಸಿದ್ದಾರೆ ಅಲ್ಲವೇ ಎಂಬ ಮರು ಪ್ರಶ್ನೆಗೆ ಉತ್ತರಿಸಿದ ನವೀನ್ ಪರಿಶೀಲನೆ ಮಾಡುತ್ತೇವೆ ಇನ್ನ ಮುಂದೆ ಕಠಿಣವಾಗಿ ನಗರದೊಳಗೆ ಸಂಚಾರ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಶೌಚಾಲಯ ಸಮಸ್ಯೆ ಕುರಿತಾಗಿ ರಿಯಾಲಿಟಿ ಚೆಕ್ ನಡೆಸಿದ ಅರ್ಚನಾ ಅವರಿಗೆ ತಪಾಸಣೆ ವೇಳೆ ಕಾದಿತ್ತು ಶಾಕ್!
KSRTC ಬಸ್ ನಿಲ್ದಾಣದಲ್ಲಿರುವ ಮೂರು ಶೌಚಾಲಯ ಬಳಿ ತೆರಳಿ ನೋಡಿದಾಗ ಅಲ್ಲಿದ್ದಂತ ಸಿಬ್ಬಂದಿಗಳು ಮಹಿಳಾ ಪ್ರಯಾಣಿಕರಿಂದ ಮೂತ್ರ ವಿಸರ್ಜನೆಗೆ 10 ₹ ಪಡೆಯುತ್ತಿರುವುದು ಕಂಡು ಬಂತು,
ಈ ವೇಳೆ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡ ಅರ್ಚನಾ ಅವರು ಶೌಚಾಲಯ ಮೇಲೆ 2₹ ಅಂತ ನಾಮಫಲಕ ಹಾಕಿದ್ದರು ಕೂಡ ಯಾಕೆ ಹೀಗೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು? ಈ ವೇಳೆ ಶೌಚಾಲಯ ಸಿಬ್ಬಂದಿಗಳು ತಬ್ಬಿಬ್ಬಾದರೂ ಯಾವದೇ ಪ್ರತಿಕ್ರಿಯೆ ನೀಡದೆ ಸುಮ್ಮನಾದರೂ.

ಇದೆ ವೇಳೆಯಲ್ಲಿ ಮಹಿಳಾ ಪ್ರಯಾಣಿಕರು ಕೂಡ ಅರ್ಚನಾ ಅವರಿಗೆ ದಿನ ನಿತ್ಯ ಇಲ್ಲೇ ಇದೆ ತರ ತುಂಬಾ ಸಮಸ್ಯೆ ಆಗುತ್ತಿದೆ, ಕೆಟ್ಟದಾಗಿ ಮಾತನಾಡುತ್ತರೆ, ಅಸಭ್ಯ ವರ್ತನೆ ತೋರುತ್ತಾರೆ ಎಂದು ದೂರಿದರು.
ಹಾಗೆಯೇ ಶೌಚಾಲಯ ಸಿಬ್ಬಂದಿಗಳನ್ನ ಪ್ರಯಾಣಿಕರು ಸಹ ಇದೆ ವೇಳೆ ತರಾಟೆಗೆ ತೆಗೆದುಕೊಂಡರು. ಇದೆ ವೇಳೆ ಸ್ನಾನ ಮಾಡಲು ಬಂದಿದ್ದ ಪ್ರಯಾಣಿಕರೋಬ್ಬರಿಗೆ 40₹ ರಿಂದ 50₹ ಪಡೆದಿದ್ದರೂ ನಂತರ ಅದನ್ನು ಹಿಂತಿರಿಗಿಸುವ ಮೂಲಕ 10₹ ಪಡೆದರು.ಹಲವು ಮಹಿಳಾ ಪ್ರಯಾಣಿಕರು ಅರ್ಚನಾ ಅವರ ಬಳಿ ತಮ್ಮ ನೋವನ್ನು ಅಲವತ್ತುಕೊಂಡರು.
ನಂತರ ಶೌಚಾಲಯದ ಸಿಬ್ಬಂದಿಗಳಿಗೆ ಈ ರೀತಿ ಮುಂದೆ ನಡೆಯಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟು ತೆರಳಿದರು.
ಈ ವೇಳೆಗೆ KSRTC ನಿಲ್ದಾಣ ಅಧಿಕಾರಿ ಶೌಚಾಲಯ ಇದ್ದರೆ ತಾನೇ ಸಮಸ್ಯೆಯೆಂದು ಬಾಗಿಲು ಹಾಕಿಸಿದ್ದರು ಎಂಬ ಮಾಹಿತಿಯಾಗಿದ್ದು ನಂತರ ಅರ್ಚನಾ ಅವರು KSRTC ಡಿಸಿ ಅವರಿಗೆ ಕರೆ ಮೂಲಕ ಮಾತನಾಡಿ ಶೌಚಾಲಯ ಬಳಸಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿಯಾಗಿದೆ.

ಮಹಿಳಾ ಪ್ರಯಾಣಿಕರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ಬಂದ ಅರ್ಚನಾ ನಿರಂಜನ್ ಬಗ್ಗೆ ಸಾರ್ವಜನಿಕರು, ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಒಟ್ಟಿನಲ್ಲಿ ಕೆಲವೇ ಕೆಲವು ದಿನಗಳ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಮೇಲೂ ಸಹ ನಗರದ KSRTC ಬಸ್ ನಿಲ್ದಾಣದಲ್ಲಿ ಅದರಲ್ಲೂ ಶೌಚಾಲಯ ಬಳಸುವ ವಿಚಾರಕ್ಕೆ ಮಹಿಳಾ ಪ್ರಯಾಣಿಕರು ಸಾರ್ವಜನಿಕರಿಗೆ ಈ ರೀತಿ ಕೆಟ್ಟ ಅನುಭವ ಆಗುತ್ತಿರುವುದು ದುರಂತವೇ ಸರಿ!
ನಾಗಲಕ್ಷ್ಮಿ ಚೌಧರಿ ಅವರು ಮತ್ತೊಮ್ಮೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಏರ್ಪಟ್ಟಿದ್ದಿಯ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ?



