ಗೃಹ ಬಳಕೆ ವಿದ್ಯುತ್ ದರ ಧಿಡೀರ್ ಏರಿಕೆ

ಕರ್ನಾಟಕ

ಬೆಂಗಳೂರು , ಧಿಡೀರ್ ಆಗಿ ಗೃಹ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಯೂನಿಟ್ ಗೆ 56 ಪೈಸೆ ಏರಿಕೆಯಾಗಿದೆ. ನೂತನ ದರ ಮೇ ತಿಂಗಳಿನಿಂದ ಅನ್ವಯವಾಗಲಿದೆ.

ಎಸ್ಕಾಂಗಳು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದವು. ಮತ್ತೊಂದೆಡೆ 2024-25 ರ ಆರ್ಥಿಕ ವರ್ಷದಲ್ಲಿ 34,084 ಕೋಟಿ ಆದಾಯವನ್ನು ಕೆಇಆರ್’ಸಿ ನಿರೀಕ್ಷೆ ಮಾಡಿತ್ತು.

ಆದರೆ 32,019 ಕೋಟಿ ರೂ. ಸಂಗ್ರಹವಾಗಿತ್ತು. 2,068 ಕೋಟಿ ರೂ. ಕೊರತೆ ಎದುರಾಗಿತ್ತು.ಮತ್ತೊಂದೆಡೆ, ಆರ್ಥಿಕ ಸಂಕಷ್ಟ ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಎಸ್ಕಾಂಗಳು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿಕೊಂಡಿದ್ದವು.

ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ದರ ಹೆಚ್ಚಳ ಆದೇಶ ಹೊರಡಿಸಿದೆ.

Author