ರಾಮನಗರ: ಮಂಗವೊಂದು ತನಗೆ ಆಹಾರ ಹಾಕಿದ ವೃದ್ಧೆಯ ಸಾವಿಗೆ ಮರುಗಿದ ದೃಶ್ಯ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಂಗವೊಂದು ತನಗೆ ಅನ್ನಹಾಕಿದ ವೃದ್ಧೆ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮುತ್ತಿಕ್ಕಿದ ಮನಕಲಕುವ ಪ್ರಸಂಗ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ಆಹಾರ ಕೊಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದರು.
ಅವರ ಮೃತದೇಹವನ್ನು ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿ, ಶವವನ್ನು ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ.
ಸದ್ಯ ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ದೃಶ್ಯವನ್ನು ನೋಡಿದವರು ಪ್ರಾಣಿಗಳಿಗೂ ಮನಸ್ಸಿದೆ ಎಂದು ಭಾವುಕರಾಗುತ್ತಿದ್ಧಾರೆ.



