ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೊಸ ಜಾತಿಯ ಏಡಿ ಆವಿಷ್ಕಾರ

ವಿಶೇಷ ಲೇಖನ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ (ದೇವಲಮಕ್ಕಿ) ಭಾರತದ ಮಧ್ಯ ಪಶ್ಚಿಮ ಘಟ್ಟದಲ್ಲಿ ಗಸ್ತು ಅರಣ್ಯ ಪಾಲಕರಾದ ಗೋಪಾಲ ನಾಯ್ಕ್ ಮತ್ತು ಸುನಿಲ ಗೌಡ ಸಿಹಿನೀರಿನ ಹೊಸ ಜಾತಿ ಏಡಿ ಯನ್ನು ಆವಿಷ್ಕರಿಸಿದ್ದಾರೆ.

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ ಈ ಸಿಹಿನೀರಿನ ಏಡಿಯ ಗುರುತನ್ನು ದೃಢಪಡಿಸಿದೆ. ಇದು ಭಾರತದಲ್ಲಿ ಕಂಡುಬರುವ 77 ನೇ ಏಡಿಯಾಗಿದೆ ಮತ್ತು ಘಟಿಯಾನಾ ಕುಲದ 14 ನೇ ಪ್ರಭೇದಗಳಲ್ಲಿ ಒಂದಾಗಿದೆ, ಈ ಪೈಕಿ ಏಳು ಕರ್ನಾಟಕದಲ್ಲಿ ಕಾಣಸಿಗುತ್ತವೆ.ಘಟಿಯಾನ ಧೃತಿಯರಮ್ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮರದ ಪೋಟರೆ ಮತ್ತು ಜಂಬುಮಣ್ಣಿನ(ಲ್ಯಾಟರೈಟ್ ಸಾಯಿಲ್) ಬಂಡೆಗಳ ನೀರು ತುಂಬಿದ ರಂಧ್ರಗಳಲ್ಲಿ ವಾಸಿಸುತ್ತದೆ, ಇದು ಮುಖ್ಯವಾಗಿ ಪ್ರಮಾಣಾನುಗುಣವಾಗಿ ವಿಶಾಲವಾದ ಕ್ಯಾರಪೇಸ್, ನೀಳ ವಾದ ಕಣ್ಣಿನದಂಡ (eyestalk)or ಕಣ್ಣಿನ ತೊಟ್ಟುಗಳನ್ನು ಹೊಂದಿವೆ ಈ ರಚನೆ ಏಡಿಗಳ ದೃಷ್ಟಿ ಹೆಚ್ಚಿಸುತ್ತದೆ.

ಇದರ ಇನ್ನೊಂದು ವೈಶಿಷ್ಟ ಎಂದರೆ ಜೀವನ ಚಕ್ರದ ಮೂರು ಹಂತದಲ್ಲಿ ಇದರ ದೇಹವು ಮೂರು ವಿಭಿನ್ನ ಬಣ್ಣವನ್ನು ಹೊಂದಿರುತ್ತದೆ. ಇದು ಜೀವನದ ಮೂರು ಹಂತಗಳಲ್ಲಿ ಮೂರು ಬಣ್ಣಗಳಲ್ಲಿ ಕಂಡುಬರುತ್ತದೆ.

ಇದು ಮರಿ ಹಂತದಲ್ಲಿ ತಲೆಮೇಲೆ ಕಪ್ಪು ಮತ್ತು ಕಾಲುಗಳು ಸಹ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಮೇಲಿನ ಭಾಗವು ಹಾಲಿನ ಕೆನೆ ಬಣ್ಣ ಮತ್ತು ಕಪ್ಪು ಬಣ್ಣದಿಂದ,ಕೆಳಗೆ ನೇರಳೆ ಬಣ್ಣದಿಂದ್ ಕೂಡಿದೆ. ಪ್ರೌಢಾವಸ್ಥೆಯ ಹಂತದಲ್ಲಿ ಕಾಲುಗಳು ಸಂಪೂರ್ಣ ಕಿತ್ತಳೆ ಬಣ್ಣಹೊಂದಿರುತ್ತವೆ.ಈ ಏಡಿಗಳು ಪರಿಸರಕ್ಕೆ ತನ್ನದೇ ಆದರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇವುಗಳ ಬಗ್ಗೆ ಹಲವು ವರ್ಷದಿಂದ ಅಧ್ಯಯನ ನಡೆಸುತ್ತಿರುವ ವನಪಾಲಕ ಗೋಪಾಲ ನಾಯ್ಕ ರವರು ಹೇಳುವಂತೆ ಇವು ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಸಂವೃದ್ಧ ಅರಣ್ಯ ಪರಿಸರವಿದೆ ಎಂದರ್ಥ ಹಾಗೂ ಈ ಜಾತಿ ಏಡಿ ಸ್ಥಳೀಯವಾಗಿ ಕಾರವಾರ ನಿತ್ಯ ಹರಿದ್ವರ್ಣ ಮತ್ತು ಹುಲ್ಲುಗಾವಲು ಅರಣ್ಯಕ್ಕೆ ಸ್ಥಳೀಯವಾಗಿ ಸೀಮಿತಗೊಂಡಿವೆ..( ಶಿರವೆ )

ಕೌತುಕದ ಅವಲೋಕನಗಳು:

ಏಡಿ ನಿತ್ಯಹರಿದ್ವರ್ಣ ಕಾಡು ಅಥವಾ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತದೆ, ಇದು ಲಕ್ಷಾಂತರ ವರ್ಷಗಳ ಹಿಂದೆ ನೈಸರ್ಗಿಕವಾಗಿ ರೂಪುಗೊಂಡಿರುವ ಜಂಬೂ ಮಣ್ಣಿನ ಬಂಡೆಗಳ ಪೊಟರೆಗಳಲ್ಲಿ ಮತ್ತು ಮರಗಳ ಟೊಳ್ಳು ಪೊಟರೆಗಳಲ್ಲಿ ಮುಂಗಾರು ಋತುವಿನಲ್ಲ ಮಾತ್ರ ಕಾಣಸಿಗುತ್ತವೆ, ಹೀಗಾಗಿ ಇದು ವಾಸಿಸುವ ಸ್ಥಳಗಳ ಪರಿಸರದ ಆರೋಗ್ಯ್ ಸೂಚಕ ಪ್ರಭೇದಗಳಾಗಿವೆ.

ಇದು ಶಿಲೀಂಧ್ರ ಮತ್ತು ಸತ್ತ ಕೀಟ ತಿಂದು(ಸರ್ವ ಭಕ್ಷಕ) ಜಾಡಮಾಲಿ ಕೆಲಸ ಮಾಡುತ್ತದೆ. ಇದು ಟೊಳ್ಳಾದ ಮರದ ಕಾಂಡಗಳಲ್ಲಿ ವಾಸಿಸುತ್ತಿದ್ದರೂ, ಇದು ತೇವಾಂಶ ಮತ್ತು ನೀರಿನ ಸ್ಥಳಗಳಿಗೆ ಆದ್ಯತೆ ನೀಡುತ್ತದೆ.

ಕಾರವಾರ ಡಿ ಸಿ ಎಫ್ ಸಿ ರವಿಶಂಕರ ಹೊಸ ಏಡಿ ಆವಿಷ್ಕಾರ ಕುರಿತು ಮಾತಾಡಿ:

ನಮ್ಮ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿ ZSI-Zoological Survey of India ಜೊತೆಗೂಡಿ, ಘಟಿಯಾನಾ ಕುಲದ ಮತ್ತೊಂದು ಜಾತಿಯ ಏಡಿ ಆವಿಷ್ಕರಿಸಿದ್ದನು ತಿಳಿದು ಸಂತೋಷವಾಗಿದೆ. ನಮ್ಮ ಗಸ್ತು ವನ ಪಾಲಕರಾದ ಗೋಪಾಲ್ ನಾಯ್ಕ್ ಮತ್ತು ಸುನಿಲ್ ಗೌಡರ ಕಾರವಾರ ವಿಭಾಗದ ಶಿರವೆ ಬೆಟ್ಟಗಳಿಂದ ಘಟಿಯಾನ ಧೃತಿಯರಮ್ ಎಂಬ ಹೊಸ ಪ್ರಭೇದವನ್ನು ಕಂಡುಹಿಡಿದಿದ್ದಾರೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ.

ನಮ್ಮ ಮುಂಚೂಣಿ ಸಿಬ್ಬಂದಿ ತೋರಿದ ವೈಜ್ಞಾನಿಕ ಮನೋಭಾವ ಶ್ಲಾಘನೀಯ ಮತ್ತು ಉತ್ತೇಜನಕಾರಿಯಾಗಿದೆ ಎಂದರು.

ಏಡಿಗಳು ಜಲಚರ ಪರಿಸರ ವ್ಯವಸ್ಥೆಯ ಆರೋಗ್ಯಕರ ಸೂಚಕಗಳಾಗಿವೆ, ಭಾರತದ ಪಶ್ಚಿಮ ಘಟ್ಟಗಳು ವಿಶ್ವದ ಎಂಟು ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದ್ದು (Biodiversity Hotspot )ಇಲ್ಲಿ ಅನೇಕ ಹೊಸ ಪ್ರಭೆದ, ಜಾತಿಯ ಪ್ರಾಣಿ ಮತ್ತು ಸಸ್ಯಗಳು ಆವಿಷ್ಕಾರವಾಗುತ್ತಲಿವೆ ಎಂದು ಮಂಜುನಾಥ ಎಸ್ ನಾಯಕ್ ಜೀವವೈವಿಧ್ಯ ಸಂಶೋಧಕರು ತಿಳಿಸಿದ್ದಾರೆ.

Author