ಇರಾನ್ ಮೇಲೆ ಅಮೇರಿಕ-ಇಸ್ರೇಲ್ ಜಂಟಿ ದಾಳಿ

ವಿದೇಶ

ನವದೆಹಲಿ,ಇರಾನ್‌ ಮೇಲೆ ಇಸ್ರೇಲ್‌ ಮುಂಜಾಗ್ರತಾ ದಾಳಿ ನಡೆಸಿದ ಬೆನ್ನಲ್ಲಿಯೇ ಅಮೆರಿಕ ಕೂಡ ಇರಾನ್‌ ಮೇಲೆ ದಾಳಿ ಆರಂಭಿಸಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ನಿವಾಸದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗಿದೆ. ಇದರ ಜೊತೆಗೆ, ಹಲವಾರು ಮಂತ್ರಿಗಳ ಮನೆಗಳು ಮತ್ತು ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆದಿದೆ. ಗುಪ್ತಚರ ಸಂಸ್ಥೆಯ ಕಚೇರಿಗಳ ಮೇಲೂ ದಾಳಿ ನಡೆದಿದೆ. ಇರಾನ್‌ನ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್‌ಸ್ಫೋಟದ ಸದ್ದು ಕೇಳಿಬಂದಿದ್ದುಮ ಇರಾನ್ ಕೂಡ ದಾಳಿಯನ್ನು ದೃಢಪಡಿಸಿದೆ. ಸುಪ್ರೀಂ ಲೀಡರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಇರಾನ್ ಹೇಳಿದೆ. ಆದಾಗ್ಯೂ, ದಾಳಿಯ ಸ್ಥಳಗಳನ್ನು ಇರಾನ್ ಇನ್ನೂ ಬಹಿರಂಗಪಡಿಸಿಲ್ಲ.

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಿಂದಾಗಿ ಪೂರ್ವ ಮತ್ತು ಪಶ್ಚಿಮ ಟೆಹ್ರಾನ್‌ನ ಕೆಲವು ಭಾಗಗಳಲ್ಲಿ ಸಂವಹನ ಮಾರ್ಗಗಳು ಕಡಿತಗೊಂಡಿದ್ದು, ಮೊಬೈಲ್ ಸಂಪರ್ಕ ಕಡಿತಗೊಂಡಿದೆ, ಆದರೆ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಅಸ್ತವ್ಯಸ್ತವಾಗಿದೆ.

ವೆನುಜುವೇಲ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಅರಿತಿರುವ ಇರಾನ್‌ನ ಸುಪ್ರೀಂ ನಾಯಕ ಖಮೇನಿ ಗುಪ್ತ ಸ್ಥಳಕ್ಕೆ ಶಿಫ್ಟ್‌ ಆಗಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಟೆಹ್ರಾನ್‌ನಲ್ಲಿಲ್ಲ ಮತ್ತು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ನಂತರ ಅವರನ್ನು ‘ಸುರಕ್ಷಿತ’ ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

Author