ಶಿವಮೊಗ್ಗ | ತಪ್ಪು ಮಾಹಿತಿ ನೀಡಿ ಅಂಗನವಾಡಿ ಕಾರ್ಯಕರ್ತೆ ಕೆಲಸ ಗಿಟ್ಟಿಸಿಕೊಂಡಿದ್ದರ ವಿರುದ್ದ ಡಿಸಿಗೆ, ದೂರು ನೀಡಿದ ಹರಮಘಟ್ಟ ರಂಗಪ್ಪ

ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕು, ನಿದಿಗೆ ಹೋಬಳಿ, ಗಾಜನೂರು ಗ್ರಾಮದಲ್ಲಿ ಈ ಹಿಂದೆ ಪರಿಶಿಷ್ಟ ವರ್ಗದ ಮಹೇಶ್ ಎಂಬುವವರು ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅವರು ಅಕಾಲಿಕ ಮರಣಕ್ಕೆ ತುತ್ತಾಗಿರುತ್ತಾರೆ. ಸರ್ಕಾರದ ಸುತ್ತೋಲೆ ಪ್ರಕಾರ ಗ್ರಾಮ ಸಹಾಯಕರನ್ನು ನೇಮಕ ಮಾಡಿಕೊಳ್ಳುವಾಗ ವಂಶಪಾರಂಪರಿಕ ಗ್ರಾಮ ಚಾಕರಿ ಮಾಡಿದ ಕುಟುಂಬಗಳಿಗೆ ಆದ್ಯತೆ ನೀಡುವುದು,

ಉಳಿದಂತೆ ಸರ್ಕಾರದ ಸುತ್ತೋಲೆ ಸಂಖ್ಯೆ ಆರ್.ಡಿ.132 ಎಂ.ವಿ.ಎಸ್.79 ದಿನಾಂಕ:22.03.1979 ರಲ್ಲಿ ಸೂಚಿಸಿದ ಕುಟುಂಬದ ವರ್ಗದ ಅಭ್ಯರ್ಥಿಗಳನ್ನು ಪರಿಗಣಿಸುವುದು ಹಾಗೂ ಗ್ರಾಮ ಸಹಾಯಕರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಆದೇಶದಂತೆ ತಳವಾರ, ತೋಟೆಗಳು, ನೀರುಗಂಟಿಗಳು, ವಾಲೀಕಾರ, ಮಹರ್ಸ್, ಬರ್ಕಸ್್ರ, ನೀರಾಡಿಗಳು, ಬೂಲಾತಿದರ್ಸ್, ಪೆಟ್ಟಿ, ಊರ್‌ಗಾನಿಷ್ಟೆ, ಕುಡುವಾಡಿಕೆ ಹಾಗೂ ಗ್ರಾಮದಲ್ಲಿ ವಾದ್ಯದ ಮುಖಾಂತರ ಗ್ರಾಮ ಸೇವೆ ಮಾಡುವರ ಮಕ್ಕಳಿಗೆ ಆಯ್ಕೆ ಮಾಡಬೇಕೆಂಬ ಸ್ಪಷ್ಟ ನಿರ್ದೇಶನ ಇದ್ದರೂ ಕೂಡ, ಮಾನ್ಯ ತಹಸೀಲ್ದಾರ್, ಶಿವಮೊಗ್ಗ ತಾಲ್ಲೂಕು ಇವರು ಸರ್ಕಾರದ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ. ಗ್ರಾಮದಲ್ಲಿ ಗ್ರಾಮ ಸಹಾಯಕರ ಆಯ್ಕೆಯಾಗಿ ನಾಲ್ಕು ಜನ ಅರ್ಜಿ ಸಲ್ಲಿಸಿದ್ದರೂ ಸಹ, ಯಾರ ಅರ್ಜಿಯನ್ನೂ ಪರಿಗಣಿಸದೆ ಸುಮಾರು 10-12 ಎಕರೆ ಅಡಿಕೆ ತೋಟ ಹೊಂದಿದ್ದು, ಸರ್ಕಾರಿ ನೌಕರಿಯಲ್ಲಿರುವ ತಿಪ್ಪೇಸ್ವಾಮಿ ಇವರ ಮಗನಾದ ಗಣೇಶ ಇವರ ಆಯ್ಕೆಯನ್ನು ಮಾಡಿರುವುದು ಕಾನೂನುಬಾಹಿರವಾಗಿರುತ್ತದೆ. ಹಾಗೂ ಮುಂದುವರೆದು ಮೇಲ್ಕಂಡ ವಿಷಯ ಮನವಿ ಮೂಲಕ ತಿಳಿಸಿದ್ದಾರೆ ,

ಸರ್ಕಾರಿ ನೌಕರರಾದ ತಿಪ್ಪೇಸ್ವಾಮಿ ಇವರ ಇನ್ನೊಬ್ಬ ಮಗನಾದ ಅಣ್ಣಪ್ಪಸ್ವಾಮಿ ಇವರ ಹೆಂಡತಿಯಾದ ಶ್ರೀಮತಿ ಶಿಲ್ಪಕುಮಾರಿ ಇವರು ಸರ್ಕಾರಕ್ಕೆ ಸುಳ್ಳು/ತಪ್ಪು ಮಾಹಿತಿ ನೀಡಿ ಅಂಗನವಾಡಿ ಕಾರ್ಯಕರ್ತೆಯ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮುಂದುವರೆದು ಪಡಿತರ ಚೀಟಿ ಸಂಖ್ಯೆ: SHIR00131501 ಸಂಖ್ಯೆಯ ಬಿ.ಪಿ.ಎಲ್. ಕಾರ್ಡಿನಲ್ಲಿ ಸರ್ಕಾರಿ ನೌಕರಿಯಲ್ಲಿರುವ ತಿಪ್ಪೇಸ್ವಾಮಿಯವರು ತಮ್ಮ ಹೆಸರನ್ನು ಮಾತ್ರ ಪಡಿತರ ಚೀಟಿಯಿಂದ ಕೈಬಿಡಿಸಿಕೊಂಡು ತನ್ನ ಹೆಂಡತಿಯಾದ ಕೊಟ್ರಮ್ಮ ಇವರ ಹೆಸರನ್ನು ಬಿ.ಪಿ.ಎಲ್. ಕಾರ್ಡಿಗೆ ಸೇರಿಸಿರುತ್ತಾರೆ.

ತಿಪ್ಪೇಸ್ವಾಮಿ ಇವರ ಮಗನಾದ ಗಣೇಶ್ ಇವರು ಮೇಲ್ಕಂಡ ಸರ್ಕಾರದ ಅಧಿಸೂಚನೆ ಹಾಗು ಷರತ್ತುಗಳಿಗೆ ಅನರ್ಹರಾಗಿರುವುದರಿಂದ ಮಾನ್ಯ ತಹಸೀಲ್ದಾ‌ರ್, ಶಿವಮೊಗ್ಗ ತಾಲ್ಲೂಕು ಇವರು ಮೇಲ್ಕಂಡ ಗಾಜನೂರು ಗ್ರಾಮಕ್ಕೆ ಮಾಡಿರುವ ಗ್ರಾಮ ಸಹಾಯಕರ ಆಯ್ಕೆಯಲ್ಲಿ ತುಂಬಾ ಲೋಪದೋಷಗಳನ್ನು ಮಾಡಿದ್ದು, ಈಗಾಗಲೇ ಗ್ರಾಮ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು ಅಕಾಲಿಕ ಮರಣಕ್ಕೆ ತುತ್ತಾಗಿರುವ ಕುಟುಂದ ಕಡೆಯಿಂದ ಯಾವುದೇ ಅರ್ಜಿ ಬಂದಿಲ್ಲವಾದ್ದರಿಂದ ಗಣೇಶನ ಜೊತೆಗೆ ಅರ್ಜಿ ಸಲ್ಲಿಸಿದ್ದ ಸುಮಾರು 03 ಜನಗಳ ಪೈಕಿ ನಂತರ ಸ್ಥಾನದಲ್ಲಿರುವ ರಂಜಿತ್‌ಕಿರಣ್ ಜಿ.ಎಸ್. ಸೋಮಶೇಖರ ಇವರು ಸರ್ಕಾರದ ಆಯ್ಕೆ ಸುತ್ತೋಲೆಯಂತೆ ಗ್ರಾಮ ಸಹಾಯಕರ ನೇಮಕಾತಿಗೆ ವಾಲೀಕಾರ(ಓಲಗ ಮಾಡುವವರು ಮತ್ತು ಗ್ರಾಮದ ಸೇವೆ ಸಲ್ಲಿಸುವವರು) ಗುಂಪಿಗೆ ಸೇರಿದ ಅಭ್ಯರ್ಥಿಯಾಗಿರುವುದರಿಂದ,

ಸದರಿ ಮೇಲ್ಕಂಡ ಅಭ್ಯರ್ಥಿಯಾದ ಶ್ರೀ ಗಣೇಶ್ ಇವರ ಆಯ್ಕೆಯನ್ನು ತತ್‌ ಕ್ಷಣವೇ ರದ್ದುಪಡಿಸಿ, ಶ್ರೀ ರಂಜಿತ್ ಕಿರಣ್ ಜಿ.ಎಸ್. ಸೋಮಶೇಖರ ಇವರನ್ನು ಆಯ್ಕೆ ಮಾಡಿಸಿಕೊಡಬೇಕೆಂದು ಈ ಮೂಲಕ ಸಮಿತಿಯು ಒತ್ತಾಯಿಸುತ್ತದೆ.

ಸದರಿ ಅಭ್ಯರ್ಥಿಯಾದ ಗಣೇಶ್ ಬಿನ್ ತಿಪ್ಪೇಸ್ವಾಮಿ ರವರು ಮೂಲತಃ ಚನ್ನಗಿರಿ ತಾಲ್ಲೂಕು, ಹೊದಿಗೆರೆ ಗ್ರಾಮದ ವಾಸಿಯಾಗಿದ್ದು, ಸರ್ಕಾರಿ ನೌಕರಿ ವರ್ಗಾವಣೆ ಮೇರೆಗೆ ಗಾಜನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಬಂದು ಇಲ್ಲಿಯೇ ನಿವೃತ್ತಿ ಹೊಂದಿರುತ್ತಾರೆ.

ಒಂದು ವೇಳೆ ತಾವುಗಳು ಸದರಿ ವಿಚಾರದಲ್ಲಿ ವಿಳಂಬ/ನಿರ್ಲಕ್ಷ್ಯ ಮಾಡಿದ್ದಲ್ಲಿ ಸಮಿತಿಯ ವತಿಯಿಂದ ತಮ್ಮ ಕಛೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ತಿಳಿಸಿದ್ದಾರೆ .

ಈ ಮನವಿಯೊಂದಿಗೆ ಗಣೇಶ ಇವರ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತು ಮಾಡಿರುತ್ತೇವೆ ಎಂದು ಈ ಮೂಲಕ ತಿಳಿಸಿದ್ದಾರೆ.

Author