ಶಿವಮೊಗ್ಗ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ (ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ) ಹೊಸದಾಗಿ ಲೇಸರ್ ಆಂಜಿಯೋಪ್ಲಾಸ್ಟಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಗಟ್ಟಿಯಾದ, ಕ್ಯಾಲ್ಸಿಯಂ ಶೇಖರಣೆಗೊಂಡ ಅಥವಾ ಹಿಂದೆ ಚಿಕಿತ್ಸೆ ನೀಡಲು ಕಷ್ಟಕರವಾಗಿದ್ದ ರಕ್ತನಾಳದ ಅಡೆತಡೆಗಳನ್ನು ಹೊಂದಿರುವ ರೋಗಿಗಳು ಈಗ ಬೈಪಾಸ್‌ನಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಬದಲಿಗೆ ಕನಿಷ್ಠ ಆಕ್ರಮಣಕಾರಿ/ಮಿನಿಮಲಿ ಇನ್ವೆಸಿವ್ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ವಿಭಾಗದ ಸಲಹೆಗಾರರಾದ ಡಾ. ಅನುಷಾ ಎ ರಾವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು,ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಆತಂಕ ಹುಟ್ಟಿಸುವಷ್ಟು ಹೆಚ್ಚುತ್ತಿವೆ.
ಕರ್ನಾಟಕದಲ್ಲಿ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 2024-25ರಲ್ಲಿ ಸುಮಾರು 608 ಹೃದಯ ಸಂಬಂಧಿ ಸಾವುಗಳು ವರದಿಯಾಗಿವೆ ಎಂದರು.
ಈ ಲೇಸರ್ ತಂತ್ರಜ್ಞಾನವು ಎದೆಯನ್ನು ಕತ್ತರಿಸದೆ ಬಹು ಸ್ಟಂಟ್‌ಗಳು, ತೀವ್ರವಾದ ಅಪಧಮನಿ ಕಾಠಿಣ್ಯ/ಅಥೆರೋಸ್ಟೆರೋಸಿಸ್ಮತ್ತು ಸಂಕೀರ್ಣ ಅಪಧಮನಿಯ ಕಿರಿದಾಗುವಿಕೆಗೆ/ಇಂಟ್ರಿಕೇಟ್ ಆರ್ಟೀರಿಯಲ್ ಚಿಕಿತ್ಸೆ ನೀಡುವ ಮಾರ್ಗವನ್ನು ಒದಗಿಸುತ್ತದೆ.
ಇದು ಒಂದು ಕಾಲದಲ್ಲಿ ಸಾಂಪ್ರದಾಯಿಕ ಆಂಜಿಯೋಪ್ಲಾಸ್ಟಿಗೆ ಸೂಕ್ತವಲ್ಲ ಎಂದು ಪರಿಗಣಿಸಲ್ಪಟ್ಟ ರೋಗಿಗಳಿಗೆ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು.
ಲೇಸರ್ ಆಂಜಿಯೋಪ್ಲಾಸ್ಟಿಯಲ್ಲಿ ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿ, ಕ್ಯಾಲ್ಸಿಯಂ ಶೇಖರಣೆಗೊಂಡಿರುವ ಅಥವಾ ಗಟ್ಟಿಯಾದ ಪದರಗಳನ್ನು ನಿಖರವಾಗಿ ಕರಗಿಸಲಾಗುತ್ತದೆ. ಇದು ರಕ್ತನಾಳಗಳ ಗೋಡೆಗಳ ಮೇಲೆ ಕನಿಷ್ಠ ಒತ್ತಡವನ್ನು ಬೀರುತ್ತದೆ. ಈ ವಿಧಾನವು ರಕ್ತದ ಹರಿವನ್ನು ಸುಗಮಗೊಳಿಸಲು, ಅಪಾಯವನ್ನು ಕಡಿಮೆ ಮಾಡಲು ಮತ್ತು ಹೃದಯ ರೋಗಿಗಳಿಗೆ ಚೇತರಿಕೆಯ ಸಮಯ ಹಾಗೂ ಆಸ್ಪತ್ರೆಯಲ್ಲಿ ಉಳಿಯು ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ಇಂಟರ್‌ವೆನ್ಶನಲ್ ಕಾರ್ಡಿಯಾಲಜಿ ಸಾಮರ್ಥ್ಯಗಳಿಗೆ ಸೇರ್ಪಡೆಯಾದ ಈ ಹೊಸ ತಂತ್ರಜ್ಞಾನವು ವಿಶೇಷವಾಗಿ ಹಳೆಯ, ದೀರ್ಘಕಾಲದ, ಶೇ.100 ರಷ್ಟು ನಿರ್ಬಂಧಿತ ಆರ್ಟರೀಸ್ ಹೊಂದಿರುವ ಸಂಕೀರ್ಣ ಹೃದಯ ಕಾಯಿಲೆಯ ರೋಗಿಗಳು, ಹಳೆಯ ಸ್ಟೆಂಟ್‌ಗಳು ಮರು-ಕಿರಿದಾಗುವಿಕೆ ಅನುಭವಿಸುವ ರೋಗಿಗಳು. ವಿಸ್ತರಿಸಿದ ಸ್ಟಂಟ್‌ಗಳು, ಗಟ್ಟಿಯಾದ ಕ್ಯಾಲ್ಸಿಯಂ ಬ್ಲಾಕ್‌ಗಳು ಅಥವಾ ಕೊರೊನರಿ ಆರ್ಟರೀಸ್‌ನಲ್ಲಿನಕ್ಲಾಟ್ ಬರ್ಡನ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಒಟ್ಟಾರೆ ಲೇಸರ್ ಆಂಜಿಯೋಪ್ಲಾಸ್ಟಿಯು ಉತ್ತಮ ಫಲಿತಾಂಶ, ಬಹುಬೇಗ ಚೇತರಿಕೆಗೆ ಸಹಾಯ ಮಾಡುವ ಸುಧಾರಿತ ವೈದ್ಯಕೀಯ ಕೊಡುಗೆಯಾಗಿದೆ ಎಂದರು.



