ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಎಇಇ ಶ್ರೀಮತಿ ಜ್ಯೋತಿ ಹಾಗೂ ಜೆಇ ವಸಂತ್ ಕುಮಾರ್ ಹಾಗೂ ಕಂದಾಯ ಆಯುಕ್ತರಾದ ವಿರೂಪಾಕ್ಷ ಪೂಜಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸೆಕ್ರೆಟರಿಯಾದ ನಾಗರಾಜ್ ಹಾಗೂ ನೆಹರು ರಸ್ತೆ ವರ್ತಕರ ಸಂಘದ ಜೊತೆಗೆ ಜಂಟಿ ಪರಿಶೀಲನೆ ನಡೆಸಿದರು.

ಈ ವೇಳೆ ಎಇಇ ಜ್ಯೋತಿ ಅವರು ರಾಜಕಾಲುವೆ ಮೇಲೆ ನಿರ್ಮಿಸಿರುವ ಬೆಂಚ್, ಕಬ್ಬಿಣ ಗೇಟ್, ಕಾಂಪೌಂಡ್ ತೆರವುಗೊಳಿಸುವಂತೆ ಸೂಚಿಸಿದರು.

ಕ್ಯಾಂಟೀನ್ ಗೆ ಹಾಕಿದ್ದ ಬೆಂಚ್ ಗಳನ್ನು ತೆರವುಗೋಳಿಸಿದ್ದೇವೆ ಹಾಗೂ ರಾಜಕಾಲುವೆ ಮೇಲಿ ನಿರ್ಮಿಸಿರುವ ಕಾಂಪೌಂಡ್ ಹಾಗೂ ಕಬ್ಬಿಣ ಗೇಟ್ ಹಾಗೆ ಇರುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ರಾಜಕಾಲುವೆ ಮೇಲೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಕಾಂಪೌಂಡ್ ಹಾಗೂ ಕಬ್ಬಿಣ ಗೇಟ್ ನಿರ್ಮಾಣ ಮಾಡುವಂತಿಲ್ಲ ತಕ್ಷಣವೇ ತೆರವುಗೊಳಿಸಬೇಕು ಈಗಾಗಲೇ ನೋಟೀಸ್ ಮೂಲಕ ತಮಗೆ ತಿಳಿಸಲಾಗಿದೆ ಎಂದರು.

ನೀವೇ ತೆರವುಗೊಳಿಸಬೇಕು ತಪ್ಪಿದ್ದಲ್ಲಿ ಪಾಲಿಕೆ ತೆರವು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುತ್ತೇವೆ ಎಂದು ಸೂಚಿಸಿದರು.
ನೀವು (NES ಸಂಸ್ಥೆ) ತೆರವುಗೊಳಿಸದಿದ್ದಲ್ಲಿ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತೆ ಹಾಗೂ ಇಲ್ಲಿರುವ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ವರ್ತಕರ ಸಂಘ ಹಾಗೂ ಸಂಚಾರಿ ಪೊಲೀಸರು Conservency ಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜಾಗದಲ್ಲಿ ಕಸ ಕಡ್ಡಿ ತುಂಬಿರುವುದನ್ನ ಸ್ವಚ್ಛತೆ ಕಾಪಾಡಿಕೊಳ್ಳುವತೆ ಕೋರಿದರು ಹಾಗೂ ನೆಹರು ರಸ್ತೆ ವರ್ತಕರು ಉಜಿಡಿ ವ್ಯವಸ್ಥೆ ಸರಿಪಡಿಸಿಕೊಡುವಂತೆ ಮನವಿ ಮಾಡಿದರು.
ಜೊತೆಗೆ Conservency ಜಾಗದಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಹಾಳಾಗಿದ್ದು ಅದನ್ನು ಸರಿಪಡಿಸಿಕೊಡುವಂತೆ ಅಗ್ರಹಿಸಿದರು.

ಈ ಒಂದು ಸಂದರ್ಭದಲ್ಲಿ ನೆಹರು ರಸ್ತೆ ವರ್ತಕರ ಸಂಘದ ಅಧ್ಯಕ್ಷರಾದ ಸಾಧನ ಟ್ರೇಡರ್ಸ್ ನ ರಂಗನಾಥ್, ಐಶ್ವರ್ಯ ಶಿವಕುಮಾರ್, ಸುರೇಶ್, ಕುಮಾರ್, ಡಿ. ಜಿ. ನಾಗರಾಜ್, ಶ್ರೀನಿಧಿ ಟೆಕ್ಸ್ಟೈಲ್ಸ್ ನ ರಾಮಪ್ರಸಾದ್ (ಬಾಬಣ್ಣ), ಸತೀಶ್, ಹರೀಶ್, ಕಿರಣ್, ಪುರಂದರ, ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯರಾದ ಅರ್ಚನ ನಿರಂಜನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.



