ಉಡುಪಿ, ಇಲ್ಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡರು. ಈ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಬಿರುದು ‘ಭಾರತ ಭಾಗ್ಯವಿದಾತ’ ನೀಡಿ ಸನ್ಮಾನಿಸಲಾಯಿತು.
ಶ್ರೀಕೃಷ್ಣ ಮಠದ ಆವರಣದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು, ‘ಭಾರತ ಭಾಗ್ಯವಿದಾತ’ ಎಂಬ ವಿಶೇಷ ಬಿರುದು ನೀಡಿ ಸನ್ಮಾನಿಸಿದರು.

ಇದೇ ವೇಳೆ ರಾಷ್ಟ್ರ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋಗಳನ್ನು ನೀಡಿ ಪ್ರಧಾನಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪುತ್ತಿಗೆ ಶ್ರೀಗಳು ಕಾಶಿ ಕಾರಿಡಾರ್ ರೀತಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.
ಲಕ್ಷ ಕಂಠ ಗೀತಾ ಪಾರಾಯಣದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ಈ ವೇಳೆ ಪ್ರಧಾನಿ ಮೋದಿ ಕೂಡ ಗೀತಾ ಪಾರಾಯಣ ಪಠಣ ಮಾಡಿದರು.
ಇದೆ ವೇಳೆ ದೇಶದ ನಾಗರಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕೆಳಕಂಡ 9 ಸಂಕಲ್ಪ ಮಾಡುವಂತೆ ಕರೆ ನೀಡಿದ್ದಾರೆ.
ಮೊದಲ ಸಂಕಲ್ಪ, ಜಲಸಂರಕ್ಷಣೆ ಮಾಡುವುದು.ಎರಡನೇ ಸಂಕಲ್ಪ ಮರ ಬೆಳೆಸುವುದು, ತಾಯಿ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.
ಮೂರನೇ ಸಂಕಲ್ಪ, ಪ್ರತಿಯೊಬ್ಬರೂ ಕನಿಷ್ಠ ಒಬ್ಬ ಬಡವನ ಜೀವನವನ್ನು ಸುಧಾರಿಸಿ.
ನಾಲ್ಕನೇ ಸಂಕಲ್ಪ, ಸ್ವದೇಶಿ ಅಳವಡಿಸಿಕೊಳ್ಳಿ, ವೂಕಲ್-ಲೋಕಲ್ ಮಂತ್ರ ನಮ್ಮದಾಗಲಿದೆ.
ಐದನೇ ಸಂಕಲ್ಪ, ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.
ಆರನೇ ಸಂಕಲ್ಪ, ಆರೋಗ್ಯ ಪೂರ್ಣ ಜೀವನ ಶಥಲಿ ಅವಳವಡಿಸಿಕೊಳ್ಳೋಣ,ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ. ಸಿರಿಧಾನ್ಯ ಬಳಸೋಣ.

ಏಳನೇ ಸಂಕಲ್ಪ, ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.
ಎಂಟನೇ ಸಂಕಲ್ಪ, ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ.
ಒಂಭತ್ತನೇ ಸಂಕಲ್ಪ ದೇಶದ ಕನಿಷ್ಠ 25 ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ ಎಂದು ತಿಳಿಸಿದ್ದಾರೆ.



