ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಕ್ಯಾಮರಾ ಇಟ್ಟು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಯೂಟ್ಯೂಬರ್ಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬರೋಬ್ಬರಿ ₹50 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಈ ತಂಡ ಈಗ ಜೈಲು ಪಾಲಾಗಿದೆ.
ಬಂಧಿತರನ್ನು ಗೋಕಾಕ ಮೂಲದ ಅಬ್ದುಲ್ ರಶೀದ್ (51), ಸಮೀರ್ ಶೇಖ್ (32) ಮತ್ತು ಮೊಹಮ್ಮದ್ ದಿಲಾವರ (45) ಎಂದು ಗುರುತಿಸಲಾಗಿದೆ.
ಇವರು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅಧಿಕಾರಿ ಮನೆಯಲ್ಲಿದ್ದ 11 ವಿವಿಧ ಕಡೆಗಳಲ್ಲಿ ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸಿದ್ದರು.
ಆರೋಪಿಗಳಿಂದ ಲೈಂಗಿಕ ದೃಶ್ಯಗಳಿರುವ ಚಿಪ್ಗಳು, ಲ್ಯಾಪ್ಟಾಪ್ ಹಾಗೂ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .
ಬಂಧಿತರನ್ನು ಗೋಕಾಕ್ ನ ರಷೀದ್ (51), ಸಮೀರ್ ಶೇಖ್ (32) ಮತ್ತು ಮೊಹಮ್ಮದ್ ದಿಲಾವರ (45) ಎಂದು ಗುರುತಿಸಲಾಗಿದೆ.
ಇವರು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅಧಿಕಾರಿ ಮನೆಯಲ್ಲಿದ್ದ 11 ವಿವಿಧ ಕಡೆಗಳಲ್ಲಿ ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆರೋಪಿಗಳಿಂದ ಲೈಂಗಿಕ ದೃಶ್ಯಗಳಿರುವ ಚಿಪ್ಗಳು, ಲ್ಯಾಪ್ಟಾಪ್ ಹಾಗೂ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .
ಈ ಮಹಿಳಾ ಅಧಿಕಾರಿಯು ಕಚೇರಿಗೆ ಹೋಗುವಾಗ ಮನೆಯ ಕೀಲಿಯನ್ನು ಕಿಟಕಿಯಲ್ಲೇ ಇಟ್ಟು ಹೋಗುತ್ತಿದ್ದರು. ಈ ಸುಳಿವನ್ನು ಪಡೆದ ಯೂಟ್ಯೂಬರ್ಗಳು, ಅಧಿಕಾರಿ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದರು.
ಅಧಿಕಾರಿ ತನ್ನ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು, ಹಣ ನೀಡದಿದ್ದರೆ ನ್ಯೂಸ್ ಚಾನೆಲ್ಗಳಿಗೆ ವಿಡಿಯೋ ನೀಡುವುದಾಗಿ ಬೆದರಿಕೆ ಹಾಕಿದ್ದರು.
ಈ ಹಿನ್ನೆಲೆ ಮಹಿಳಾ ಅಧಿಕಾರಿಯು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ಸ್ಪೆಕ್ಟರ್ ಬಿ.ಆರ್.ಗಡ್ಕರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಮೂವರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.



